ಮುಖೇಶ್ ಹಾಗೂ ನೀತಾ ಅಂಬಾನಿ ತಮ್ಮ ಬಂಗಲೆಯ ನಿರ್ಮಾಣದ ಬಜೆಟ್‌ನಲ್ಲಿ ಒಂದು ದೊಡ್ಡ ಭಾಗವನ್ನು ಮಂದಿರಕ್ಕಾಗಿ ಖರ್ಚು ಮಾಡಿದ್ದಾರೆ.ಅಂಬಾನಿ ಅವರ 27 ಅಂತಸ್ತಿನ ಅಂಟಿಲಿಯಾ ಬಂಗಲೆಯಲ್ಲಿ 600 ಜನ ದಿನದ 24 ಗಂಟೆಗಳೂ ಕೆಲಸ ಮಾಡುತ್ತಾರೆ.
ಇವರ ಬಂಗಲೆಯ ಮಂದಿರ ಮೂರ್ತಿ, ಬಾಗಿಲುಹಾಗೂ ಪ್ರತಿ ವಸ್ತುಗಳು ಬೆಳ್ಳಿ ಹಾಗೂ ಚಿನ್ನದ್ದಾಗಿವೆ. ಇದರ ಜೊತೆಗೆ ದೇವರ ಮೂರ್ತಿಗಳನ್ನು ವಜ್ರದ ಒಡವೆಗಳಿಂದ ಅಲಂಕರಿಸಲಾಗಿದೆ.
ಸ್ವತಃ ವಜ್ರಗಳನ್ನು ಇಷ್ಟಪಡುವ ನೀತಾ ಅಂಬಾನಿ, ದುಬಾರಿ ರತ್ನಗಳಿಂದ ಅವರ ಮಂದಿರವನ್ನು ವಿಶೇಷವಾಗಿ ಅಲಂಕರಿಸಿದ್ದಾರೆ.
ತಮ್ಮ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಟೀಮ್ ಐಪಿಎಲ್ ಗೆದ್ದಾಗಲಲೆಲ್ಲಾ ಟ್ರೋಫಿಯನ್ನು ಮೊದಲು ಅವರ ಮಂದಿರದ ದೇವರಿಗೆ ಅರ್ಪಿಸುತ್ತಾರೆ ನೀತಾ ಅಂಬಾನಿ.
4 ಲಕ್ಷ ಚದುರ ಅಡಿಯಲ್ಲಿ ನಿರ್ಮಾಣಗೊಂಡಿರುವ ಅಂಬಾನಿ ಅವರ ಬಂಗ್ಲೆಯಲ್ಲಿ 6 ಫ್ಲೋರ್ ಪಾರ್ಕಿಂಗ್‌ಗಾಗಿ ಮೀಸಲಾಗಿದೆ. ಅದರಲ್ಲಿ ಒಟ್ಟು ಸುಮಾರು 168 ಕಾರುಗಳನ್ನು ನಿಲ್ಲಿಸ ಬಹುದಾಗಿದೆ. ವರದಿಗಳ ಪ್ರಕಾರ ಮುಖೇಶ್ ಅವರು ಈಗಾಗಲೇ 150 ಕಾರುಗಳನ್ನು ಹೊಂದಿದ್ದಾರೆ.
ಮಂದಿರದ ಹೊರತಾಗಿ ಅಂಟಿಲಿಯಾ ಒಂದು ಬಾಲ್‌ರೂಮ್ ಅನ್ನು ಹೊಂದಿದೆ. ಅದರ ರೂಫ್ ಅನ್ನು ಕ್ರಿಸ್ಟಲ್‌ಗಳಿಂದ ಅಲಂಕರಿಸಲಾಗಿದೆ. 3 ಹೆಲಿಪ್ಯಾಡ್, ಬಾರ್ ಹಾಗೂ ಥೇಯಿಟರ್ ಸಹ ಇದೆ. ಮುಖೇಶ್ ಅಂಬಾನಿ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ.
ಮಧ್ಯರಾತ್ರಿ ಆಫೀಸ್‌ನಿಂದ ಮನೆಗೆ ಬಂದರೂ,ಮುಖೇಶ್ ಸಿನಿಮಾ ನೋಡದ ಹೊರತು ಮಲಗುವುದಿಲ್ಲ ಎಂದು ನೀತಾ ಅಂಬಾನಿ ಇಂಟರ್‌ವ್ಯೂವ್‌ವೊಂದರಲ್ಲಿ ಹೇಳಿದ್ದರು. ಈ ಕಾರಣದಿಂದ ಅವರು ತಮ್ಮ ಬಂಗಲೆಯ 8ನೇ ಮಹಡಿಯಲ್ಲಿ 50 ಸೀಟರ್‌ನ ಮಿನಿ ಥೇಯಿಟರ್ ಅನ್ನು ಕಟ್ಟಿಸಿಕೊಂಡಿದ್ದಾರೆ.
ಅಂಟಿಲಿಯಾವನ್ನು ಚಿಕಾಗೋ ಮೂಲದ ಅರ್ಕಿಟೆಕ್ಟ್ ಪೆರ್ಕಿನ್ಸ್ ಡಿಸೈನ್ ಮಾಡಿದರೆ, ಅಸ್ಟ್ರೇಲಿಯನ್ ಕಂಪೆನಿ Lagton Holding ನಿರ್ಮಾಣ ಮಾಡಿದೆ. ಈ ಬಂಗಲೆ 8 ರಿಕ್ಟರ್‌ನಷ್ಟು ಭೂಕಂಪವನ್ನು ಸಲುಭವಾಗಿ ತಡೆದುಕೊಳ್ಳುತ್ತದೆ.
ಅಂಟಿಲಿಯಾದ ಸ್ಪಿರಿಚ್ಯುಲ್ ಗಾರ್ಡನ್‌ನಲ್ಲಿ ನೀತಾ ಅಂಬಾನಿ