ಮತ್ತಷ್ಟು ಮುಗ್ಗರಿಸಿದ ಚಿನ್ನದ ದರ, ಕೊಳ್ಳೋರಿಗೆ ಸಂತಸ!

First Published Feb 5, 2021, 11:46 AM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 05ಗೋಲ್ಡ್ ರೇಟ್

ಕೊರೋನಾ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಗ್ರಾಹಕರನ್ನು ಭಾರೀ ಚಿಂತೆಗೀಡು ಮಾಡಿತ್ತು.
undefined
ನೋಡ ನೋಡುತ್ತಿದ್ದಂತೆಯೇ ಏರಿಕೆಯಾಗಿದ್ದ ಚಿನ್ನದ ದರ ಇಳಿಯುವ ಲಕ್ಷಣಗಳೇ ತೋರಿರಲಿಲ್ಲ.
undefined
ಇದಾದ ಬಳಿಕ ಕೊಂಚ ಇಳಿಮುಖವಾಗಿದ್ದರೂ ಚಿನ್ನದ ದರ ಹಾವೇಣಿ ಆಟ ಮುಂದುವರೆಸಿತ್ತು.
undefined
ಇದು ಗ್ರಾಹರನ್ನು ಮತ್ತಷ್ಟು ಗೊಂದಲಕ್ಕೆ ದೂಡಿತ್ತು.
undefined
ಮದುವೆ ಮೊದಲಾದ ಶುಭ ಕಾರ್ಯಗಳನ್ನಿಟ್ಟುಕೊಂಡವರಿಗೆ ಏರಿಕೆಯಾಗುತ್ತಿದ್ದ ಚಿನ್ನದ ದರ ಕಂಗಾಲಾಗಿಸಿತ್ತು.
undefined
ಆದರೀಗ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ ಇತ್ತ ಚಿನ್ನದ ದರವೂ ಇಳಿಯುತ್ತಿದೆ.
undefined
ಇದಕ್ಕೆ ತಕ್ಕಂತೆ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್‌ ಎಫೆಕ್ಟ್‌ ಕೂಡಾ ಪೂರಕವಾಗಿ ಪರಿಣಮಿಸಿದೆ.
undefined
ಸದ್ಯ ಸತತ ಐದನೇ ದಿನ ಚಿನ್ನದ ದರ ಇಳಿಕೆಯಾಗಿರುವುದು ಗ್ರಾಹಕರನ್ನು ಮತ್ತಷ್ಟು ಖುಷಿಪಡಿಸಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 600ರೂ. ಇಳಿಕೆಯಾಗಿ ದರ 43,750ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 650ರೂ. ಇಳಿಕೆಯಾಗಿ 47,730 ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ,4,200 ರೂ. ಇಳಿಕೆಯಾಗಿ 68,000ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined
click me!