ಚಿನ್ನ ಮತ್ತಷ್ಟು ಅಗ್ಗ, ಸತತ ನಾಲ್ಕನೇ ದಿನ ದರ ಇಳಿಕೆ!

First Published Feb 4, 2021, 1:23 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 04ಗೋಲ್ಡ್ ರೇಟ್

ಅತ್ತ ಕೊರೋನಾ ದೇಶದಲ್ಲಿ ತನ್ನ ಅಟ್ಟಹಾಸ ಬೀರುತ್ತಿದ್ದ ಸಂದರ್ಭದಲ್ಲಿ, ಇತ್ತ ಅಡೆ ತಡೆಗಳಿಲ್ಲದೇ ಏರುತ್ತಿದ್ದ ಚಿನ್ನದ ದರ ಜನ ಸಾಮಾನ್ಯರನ್ನು ಕಂಗೆಡಿಸಿತ್ತು.
undefined
ಮದುವೆ, ನಿಶ್ಚಿತಾರ್ಥಿ ಹೀಗೆ ಶುಭ ಕಾರ್ಯಕ್ರಮಗಳನ್ನಿಟ್ಟುಕೊಂಡಿದ್ದವರು ಚಿನ್ನದ ದರ ಏರಿಕೆಯಿಂದ ಚಿಂತೆಗೀಡಾಗಿದ್ದರು.
undefined
ಆದರೆ ಅದೆಷ್ಟೇ ಕಾದರೂ ಚಿನ್ನದ ದರ ಇಳಿಯದಾಗ ಬೇರೆ ವಿಧಿ ಇಲ್ಲದೇ ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿದ್ದರು.
undefined
ಅದರಲ್ಲೂ ಕೊರೋನಾ ಮಧ್ಯೆ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾಗ ಮಾತ್ರ ಎಲ್ರೂ ತಲೆ ಮೇಲೆ ಕೈ ಹೊತ್ತುಕೊಂಡಿದ್ದರು
undefined
ಇದಾದ ಬಳಿಕ ಚಿನ್ನದ ದರ ಅಲ್ಪ ಮಟಟ್ಟಿಗೆ ಇಳಿಕೆ ಕಂಡಿತ್ತಾದರೂ ಹಾವೇಣಿ ಆಟ ಮಾತ್ರ ಮುಂದುವರೆಸಿತ್ತು. ಇದರಿಂದ ಗ್ರಾಹಕರು ಗೊಂದಕ್ಕೀಡಾಗಿದ್ದರು.
undefined
ಆದರೀಗ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತರ್ಥಿಕತೆಗೆ ಟಾನಿಕ್ ನೀಡಿದ್ದಾರೆ.
undefined
ಬಜೆಟ್ ಮಂಡನೆ ಬೆನ್ನಲ್ಲೇ ಚಿನ್ನದ ದರ ಇಳಿಯುವ ನಿರೀಕ್ಷೆ ಇತ್ತು. ಅದರಂತೆ ಸತತ 4 ನೇ ದಿನ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 400 ರೂ. ಇಳಿಕೆಯಾಗಿ ದರ 44,350 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 440 ರೂ. ಇಳಿಕೆಯಾಗಿ 48,380ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 72,200ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ
undefined
click me!