ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!

First Published | Apr 10, 2023, 3:25 PM IST

ಫೋರ್ಬ್ಸ್‌ ನಿಯತಕಾಲಿಕೆ ಆಗಾಗ್ಗೆ ವಿಶ್ವ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿರುತ್ತದೆ. ಅಲ್ಲದೆ, ತನ್ನ ವೆಬ್‌ಸೈಟ್‌ನಲ್ಲಿ ರಿಯಲ್‌ ಟೈಮ್‌ನಲ್ಲಿ ಈ ಪಟ್ಟಿಯನ್ನು ಅಪ್ಡೇಟ್‌ ಮಾಡುತ್ತಿರುತ್ತದೆ. ಈ ಪಟ್ಟಿಯಲ್ಲಿ ಭಾರತದ ಮುಖೇಶ್‌ ಅಂಬಾನಿ, ಗೌತಮ್‌ ಅದಾನಿ ಸೇರಿ ಅನೇಕರು ಸ್ಥಾನ ಪಡೆಯುತ್ತಾರೆ. ಇನ್ನು, ಶ್ರೀಮಂತರು, ಉದ್ಯಮಿಗಳ ವೇಷಭೂಷಣ ಆಗಾಗ್ಗೆ ಹಲವರ ಕಣ್ಣು ಕುಕ್ಕುತ್ತಿರುತ್ತದೆ. ಅವರು ಧರಿಸಿರೋ ಉಡುಪಿನ ಬೆಲೆ ಎಷ್ಟಪ್ಪಾ ಅಂತ ಅನೇಕರು ಆಲೋಚನೆ ಮಾಡ್ತಿರುತ್ತಾರೆ. 

ಎಲಾನ್‌ ಮಸ್ಕ್‌ ಜಗತ್ತಿನ ನಂ. 1 ಶ್ರೀಮಂತ ಹಾಘೂ ಟ್ವಿಟ್ಟರ್‌ನ ಸಿಇಒ. ಅವರು ಸ್ಲಂನಲ್ಲಿ ವಾಸಿಸುತ್ತಿದ್ರೆ  ಹಾಗೂ ಬಡವರಾಗಿದ್ರೆ ಹೇಗೆ ಕಾಣ್ತಾರೆ ನೋಡಿ.. 

ಇನ್ನು, ಈ ಶ್ರೀಮಂತರು ಹಾಗೂ ಖ್ಯಾತನಾಮರು ಕಡು ಬಡವರ ರೀತಿ ಹಾಗೂ ಸ್ಲಮ್‌ನಲ್ಲಿ ವಾಸ ಮಾಡಿದರೆ ಹೇಗೆ ಕಾಣುತ್ತಾರೆ ಎಂದು ಯಾವಾಗ್ಲಾದ್ರೂ ಅಂದುಕೊಂಡಿದ್ದೀರಾ..? ಈ ಬಗ್ಗೆ ಕನಸಲ್ಲಿ ನೆನೆಸಿಕೊಳ್ಳೋದು ಹಾಗೂ ಊಹೆ ಮಾಡೋದು ಕೂಡ ಕಷ್ಟವಲ್ಲವೇ..? 

Tap to resize

ಆದರೆ ಕೃತಕ ಬುದ್ಧಿಮತ್ತೆ ಇವೆಲ್ಲವನ್ನು ಸಾಧ್ಯವಾಗಿಸಿದೆ. ಎಐ ತಂತ್ರಜ್ಞಾನದ ಮೂಲಕ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಮುಖೇಶ್‌ ಅಂಬಾನಿ, ಮಾರ್ಕ್‌ ಜುಕರ್‌ಬರ್ಗ್‌, ವಾರೆನ್‌ ಬಫೆಟ್‌, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಹಾಗೂ ಟ್ವಿಟ್ಟರ್‌ ಸಿಇಒ ಫೋಟೋ ವೈರಲ್‌ ಆಗುತ್ತಿದೆ. 
 

ಸಡನ್ನಾಗಿ ನೋಡಿದ್ರೆ ಇದು ನಿಜಕ್ಕೂ ಅವರೇ ಈ ರೀತಿ ಉಡುಪು ಧರಿಸಿ ಸ್ಲಂನಲ್ಲಿ ಇದ್ದಾರೇನೋ ಎನಿಸುತ್ತದೆಯಾದರೂ, ಇದು ಕೃಕ ಬುದ್ಧಿಮತ್ತೆಯಡಿ ಈ ರೀತಿ ರಚಿಸಲಾಗಿದೆ. 

ಇವರು ಭಾರತದ ಸದ್ಯದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರೋ ಮುಖೇಶ್‌ ಅಂಬಾನಿ. ಏಷ್ಯಾದ ನಂ. 1 ಸಿರಿವಂತರೂ ಸದ್ಯ ಇವರೇ. ರಿಲಯನ್ಸ್‌, ಜಿಯೋ ಸಂಸ್ಥೆಯ ಮಾಲೀಕರು ಬಡವರಾದ್ರೆ ಹೇಗೆ ಕಾಣಿಸಿಕೊಳ್ತಾರೆ ನೋಡಿ.. 

ಮೈಕ್ರೋಸಾಫ್ಟ್‌ ಸಂಸ್ಥಾಪಕ ಅಂದ್ರೆ ಬಿಲ್‌ ಗೇಟ್ಸ್‌. ಇವರು ಸಹ ಜಗತ್ತಿನ ನಂ. 1 ಶ್ರೀಮಂತ ಎನಿಸಿಕೊಂಡಿದ್ದವರು. ಸದ್ಯ, ನಂ. 1 ಅಲ್ಲದೇ ಇದ್ದರೂ ಬಿಲ್‌ ಗೇಟ್ಸ್‌ ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ.. 

ಇವರು ನೋಡಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಇತ್ತೀಚೆಗಷ್ಟೇ ಕೇಸ್‌ವೊಂದರಲ್ಲಿ ಬಂಧನವೂ ಆಗಿದ್ರು. ಮತ್ತೆ ಅಮೆರಿಕ ಅಧ್ಯಕ್ಷರಾಗಲೂ ಹೊರಟಿದ್ದಾರೆ. 

Latest Videos

click me!