ಉದ್ಯಮಿ ಗೌತಮ್ ಅದಾನಿ ಅವರ ಸೊಸೆ ಪರಿಧಿ ಅದಾನಿ ಈಕೆ!

Published : Feb 04, 2023, 03:05 PM IST

ಗೌತಮ್ ಅದಾನಿ (Gautam Adani) ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಮೂರನೇ ಶ್ರೀಮಂತರಾಗಿದ್ದವರು. ಆದರೆ, ಮಾರುಕಟ್ಟೆಯಲ್ಲಾಗುತ್ತಿರುವ ಕೆಲವು ತಲ್ಲಣಗಳಿಂದ ಇದೀಗ ಮಾರುಕಟ್ಟೆಯಲ್ಲಿ ಇವರ ಕಂಪನಿಗಳ ಶೇರಿನ ಮೌಲ್ಯ ಕುಸಿದಿದ್ದು, ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಕೆಳಗೆ ಹೋಗುತ್ತಿದ್ದಾರೆ. ಇವರ ಮಕ್ಕಳಿಬ್ಬರು ಸಹ ತಮ್ಮನ್ನು ಬ್ಯುಸಿನೆಸ್‌ ಲೋಕದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಈ ಕುಟುಂಬದ ಸೊಸೆ ಪರಿಧಿ ಅದಾನಿ ಮಾತ್ರ ಬ್ಯುಸಿನೆಸ್‌ ಕ್ಷೇತ್ರದಲ್ಲಿ ಇಲ್ಲ. ಪರಿಧಿ ಅದಾನಿ (Paridhi Adani) ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  

PREV
16
 ಉದ್ಯಮಿ ಗೌತಮ್ ಅದಾನಿ ಅವರ ಸೊಸೆ ಪರಿಧಿ ಅದಾನಿ ಈಕೆ!

ಪರಿಧಿ ಗೌತಮ್ ಅದಾನಿ ಅವರ ಮಗ ಕರಣ್ ಅದಾನಿ ಅವರ ಪತ್ನಿ. ಆಕೆಯ ತಂದೆಯ ಸಿರಿಲ್ ಶ್ರಾಫ್, ಹಿರಿಯ ಕಾರ್ಪೊರೇಟ್ ವಕೀಲರು. 2013 ರಲ್ಲಿ ವಿವಾಹವಾದ  ಕರಣ್ ಅದಾನಿ ಮತ್ತು ಪರಿಧಿ ಅದಾನಿ ಅವರಿಗೆ ಮಗಳಿದ್ದಾಳೆ. 

26

ಪರಿಧಿ ಅವರು  ತನ್ನ ತಂದೆಯ ಸಿರಿಲ್ ಅಮರಚಂದ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳಿಗೆ ಕಾನೂನು ಸಲಹೆ ನೀಡುತ್ತಾರೆ. ಕರಣ್ ಅದಾನಿ ಪ್ರಸ್ತುತ ಸಿಇಪಿ ಮತ್ತು ಅದಾನಿ ಬಂದರುಗಳ ನಿರ್ದೇಶಕರಾಗಿದ್ದಾರೆ. 

36

ಪರಿಧಿ ಅದಾನಿ ವಕೀಲರಾಗಿ ಕಾರ್ಯನರ್ವಹಿಸುತ್ತಿದ್ದಾರೆ. ಮುಂಬೈನಲ್ಲಿ ಪ್ರಧಾನ ಕಚೇಯನ್ನು ಹೊಂದಿರುವ ಸಿರಿಲ್ ಅಮರಚಂದ್ ಮಂಗಲದಾಸ್ (CAM) ಹೆಸರಿನ ಭಾರತೀಯ ಕಾನೂನು ಸಂಸ್ಥೆಯ ಪಾಲುದಾರರಾಗಿದ್ದಾರೆ.


 

46

ಪರಿಧಿ ಅದಾನಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಸಿರಿಲ್ ಅಮರಚಂದ್ ಮಂಗಲದಾಸ್ ಅವರ ಗುಜರಾತ್ ಕಚೇರಿಯ ಮುಖ್ಯಸ್ಥರಾಗಿದ್ದು, ಅಹಮದಾಬಾದ್‌ನಲ್ಲಿ ವಾಸಿಸುತ್ತಾರೆ.


 

56

ಪರಿಧಿ ಅವರು ವಿಲೀನಗಳು ಮತ್ತು ಸ್ವಾಧೀನಗಳಿಗೆ (ಸಾರ್ವಜನಿಕ M&A ವಹಿವಾಟುಗಳನ್ನು ಒಳಗೊಂಡಂತೆ), ಜಂಟಿ ಉದ್ಯಮಗಳು ಮತ್ತು ವಿವಿಧ ವಲಯಗಳಲ್ಲಿನ ಸಹಯೋಗಗಳು ಮತ್ತು ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದ ಸಲಹೆಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ವಹಿವಾಟುಗಳಿಗೆ ಅನ್ವಯವಾಗುವ ಭಾರತೀಯ ಮತ್ತು ವಿದೇಶಿ ಗ್ರಾಹಕರಿಗೆ ಅವರು ನಿಯಮಿತವಾಗಿ ಸಲಹೆ ನೀಡುತ್ತಾರೆ. (ವಿಶೇಷವಾಗಿ ಭಾರತದಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ) ಅವರು ಗ್ರಾಹಕರಿಗೆ ತಮ್ಮ ಒಪ್ಪಂದಗಳು, ನಿರ್ಗಮನಗಳು ಮತ್ತು ಶಾಸನಬದ್ಧ ಅನುಸರಣೆ ಸೇರಿದಂತೆ ತಮ್ಮ ಉದ್ಯೋಗಿಗಳ ಡೇಟಾಬೇಸ್‌ಗೆ
ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳ ಕುರಿತು ಸಲಹೆ ನೀಡುತ್ತಾರೆ ಎಂಬುದು ಅವರ ಪ್ರೊಫೈಲ್‌ನಿಂದ ತಿಳಿಯುತ್ತದೆ. 

66

ಇಷ್ಟೇ ಅಲ್ಲ ಅವರು ಪ್ರಾಣಿ ಪ್ರೇಮಿ ಮತ್ತು ಮಾನಸಿಕ ಸ್ವಾಸ್ಥ್ಯ (Mental Health) ಮತ್ತು ಸುಸ್ಥಿರತೆಯನ್ನು ಜೀವನ ವಿಧಾನವಾಗಿ ಬೆಂಬಲಿಸುತ್ತಾರೆ ಎಂದು  ತಮ್ಮ ಪ್ರೊಫೈಲ್‌ನಲ್ಲಿ ಹೇಳಿಕೊಂಡಿದ್ದಾರೆ

Read more Photos on
click me!

Recommended Stories