ಬೆಂಗಳೂರಿನಲ್ಲಿ ನಡೀತಿರೋ ಏರೋ ಇಂಡಿಯಾದ 2ನೇ ದಿನದ ವಿಹಂಗಮ ನೋಟ ಹೀಗಿದೆ..

First Published | Feb 14, 2023, 8:25 PM IST

ಬೆಂಗಳೂರಿನ ಆಕಾಶದಲ್ಲಿ ವಿಮಾನದ ಹೆಲಿಕಾಪ್ಟರ್‌ಗಳು ಮತ್ತು ಫೈಟರ್ ಜೆಟ್‌ಗಳ ಬೆರಗುಗೊಳಿಸುವ ಪ್ರದರ್ಶನದೊಂದಿಗೆ ನಡೆಯುತ್ತಿರುವ ಏರೋ ಇಂಡಿಯಾದ 2ನೇ ದಿನದ ಶೋ ಮುಂದುವರೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 32 ದೇಶಗಳ ತಮ್ಮ ಸಹವರ್ತಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಈ ದಿನವು ಪ್ರಾರಂಭವಾಯಿತು. US ವಾಯುಪಡೆಯ ಎರಡು ಹೊಸ 5ನೇ ತಲೆಮಾರಿನ ಸೂಪರ್‌ಸಾನಿಕ್ ಮಲ್ಟಿರೋಲ್ F-35A ವಿಮಾನಗಳು ಭಾರತದ ಸೂರ್ಯಕಿರಣ ತೇಜಸ್ ವಿಮಾನಗಳು ಇಲ್ಲಿ ನೆರೆದಿದ್ದ ಜನರನ್ನು ಬೆರಗುಗೊಳಿಸಿದವು.

ಬೆಂಗಳೂರಿನಲ್ಲಿ ನಡೀತೀರೋ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆಕರ್ಷಕ ಚಿತ್ತಾರವನ್ನು ಮಹಿಳೆ ಹಾಗೂ ವ್ಯಕ್ತಿಯೊಬ್ಬರು ನೋಡುತ್ತಿರುವುದು ಹೀಗೆ..

ಇನ್ನು, HAL ಮತ್ತು BEL ಎರಡೂ ಬಲವಾದ ಆರ್ಡರ್‌ಗಳನ್ನು ಪಡೆಯುವುದನ್ನು ಎದುರು ನೋಡುತ್ತಿದ್ದು, ಚಿಪ್ ಕೊರತೆಯ ಪರಿಣಾಮ ಸೀಮಿತವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

Tap to resize

ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ದಿನದ ಏರೋ ಇಂಡಿಯಾ ಶೋನಲ್ಲಿ ಹಲವು ವಿಮಾನಗಳು ವೈಮಾನಿಕ ಪ್ರದರ್ಶನ ನಡೆಸಿದ್ದು, ಇದರ ಒಂದು ಚಿತ್ತಾಕರ್ಷಕ ನೋಟ ಹೀಗಿದೆ..

ಎಫ್‌ - 35 ವಿಮಾನದ ನೋಟ ಹೀಗಿದೆ.. ಎಫ್‌ - 35 ಅಮೆರಿಕದ 5ನೇ ಜನರೇಷನ್‌ನ ಸೂಪರ್‌ಸಾನಿಕ್ ವಿಮಾನವಾಗಿದ್ದು, ಮೊದಲನೇ ಬಾರಿಗೆ ಭಾರತದಲ್ಲಿ ಜನರು ಇದನ್ನು ಕಣ್ತುಂಬಿಕೊಳ್ಳಲಿದ್ದಾರೆ. 

ಎಫ್‌ - 35 ಅಮೆರಿಕದ 5ನೇ ಜನರೇಷನ್‌ನ ಸೂಪರ್‌ಸಾನಿಕ್ ವಿಮಾನವಾಗಿದೆ. ಇದು ಮೊದಲ ಬಾರಿಗೆ ಏರೊ ಇಂಡಿಯಾ ಶೋದಲ್ಲಿ ಭಾಗಿಯಾಗಿದೆ. 

ಅಮೆರಿಕದ ಪ್ರಮುಖ ಯುದ್ಧ ವಿಮಾನಗಳಲ್ಲಿ ಒಂದು ಎಫ್‌ - 16. ಈ ಪ್ರಖ್ಯಾತ ವಿಮಾನ ಸಹ ಬೆಂಗಳೂರಿನ ಏರೋ ಇಂಡಿಯಾದಲ್ಲಿ ಭಾಗಿಯಾಗಿದೆ. 

ಎಫ್‌ - 16 ವಿಮಾನವನ್ನು ಈ ಬಾರಿ ಸಹ ಬೆಂಗಳೂರಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಜನರು ಕನ್ತುಂಬಿಕೊಳ್ಳಬಹುದಾಗಿದೆ. 

ಏರೋ ಇಂಡಿಯಾದಲ್ಲಿ ವೈಮಾನಿಕ ಪ್ರದರ್ಶನ ಮಾತ್ರವಲ್ಲದೆ ಸಾಕಷ್ಟು ಎಕ್ಸಿಬಿಷನ್‌, ಇತರೆ ಕಾರ್ಯಕ್ರಮಗಳು ಸಹ ನಡೆಯುತ್ತಿವೆ. ಇದರ ಒಂದು ನೋಟ ಹೀಗಿದೆ.. 

ಮಹಿಳೆಯೊಬ್ಬರು ಏರೋ ಇಂಡಿಯಾದಲ್ಲಿ ವಿ.ಆರ್‌. ಗ್ಲಾಸ್‌ಗಳಲ್ಲಿ ಕಣ್ತುಂಬಿಕೊಳ್ಳುತ್ತಿರುವುದು ಕಂಡುಬಂದಿದ್ದು ಹೀಗೆ.. ಇದು 2ನೇ ದಿನದ ಕಾರ್ಯಕ್ರಮದ ಭಾಗ.

BEL ಸಹ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು MOUಗಳಿಗೆ ಸಹಿ ಹಾಕಲು ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.  ಏರೋ ಇಂಡಿಯಾದ ಎಕ್ಸಿಬಿಷನ್‌ನಲ್ಲಿ ನಡೆಯುತ್ತಿರುವ ಚರ್ಚೆ.

Latest Videos

click me!