ಪಂಜಾಬ್ ನ್ಯಾಷನ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಓಡಿ ಹೋಗಿದ್ದ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತದಿಂದ ಅನೇಕ ಉದ್ಯಮಿಗಳು ಇದೇ ರೀತಿ ವಂಚಿಸಿ ದೇಶ ಬಿಟ್ಟು ಹೋಗಿದ್ದಾರೆ. ಆದರೆ ಭಾರತಕ್ಕೆ ಹಸ್ತಾಂತರವಾಗಿಲ್ಲ. ವಿಶ್ವದ ಕೆಲವು ಶ್ರೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ತಲುಪಿ, ಭಾರತದ ಶ್ರೀಮಂತ ಸಾಮ್ರಾಜ್ಯದಲ್ಲಿ ಮೆರೆದು ಅದೃಷ್ಟ ಕೈಕೊಟ್ಟು ದಿವಾಳಿಯಾದ ಅದೆಷ್ಟೋ ಮಂದಿ ಭಾರತದ ಇತಿಹಾಸದ ಪುಟಗಳಲ್ಲಿ ನಮಗೆ ಕಾಣ ಸಿಗುತ್ತಾರೆ. ಮಾರುಕಟ್ಟೆ ಕುಸಿತ, ಕಾನೂನು ತೊಂದರೆಗಳು, ಆರ್ಥಿಕ ಸಂಕಷ್ಟ, ಹೆಚ್ಚುತ್ತಿರುವ ಸಾಲವು ಅವರ ಪತನಕ್ಕೆ ಕಾರಣವಾಯ್ತು. ಅದೃಷ್ಟವನ್ನು ಕಳೆದುಕೊಂಡು ದಿವಾಳಿಯಾದ ಭಾರತದ ಅಗ್ರ ಮಾಜಿ ಬಿಲಿಯನೇರ್ ಗಳು ಯಾರು ಎಂಬ ಪಟ್ಟಿ ಇಲ್ಲಿದೆ.
ಥೈಲ್ಯಾಂಡ್‌ನ ಬ್ಯಾಂಕಾಕ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧ್ಯಪ್ರದೇಶದ ಇಂಧೋರ್ ಮೂಲದ ರಾಕೇಶ್ ಸಕ್ಸೆನಾ, 1996ರವರೆಗೆ ಬ್ಯಾಂಕ್‌ನ ಸಲಹೆಗಾರರಾಗಿದ್ದರು. ಈ ವೇಳೆ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡರು. ಕೊನೆಗೆ ಬ್ಯಾಂಕ್ ಪತವೂ ಆಯ್ತು. ಹಲವಾರು ವರ್ಷ ತಲೆ ಮರೆಸಿಕೊಂಡಿದ್ದ ಸಕ್ಸೆನಾ 2009ರಲ್ಲಿ ಕೆನಡಾ ಪೊಲೀಸರಿಂದ ಬಂಧನಕ್ಕೆ ಒಳಗಾದರು. ಬರೋಬ್ಬರಿ 13 ವರ್ಷಗಳ ಕಾಲ ಹಸ್ತಾಂತ ಪ್ರಕ್ರಿಯೆಗೆ ಹೋರಾಟ ನಡೆಯಿತು. ಕೊನೆಗೆ ಥೈಲ್ಯಾಂಡ್‌ಗೆ ಗಡೀಪಾರು ಮಾಡಲಾಯಿತು. ಅಲ್ಲಿ 10 ವರ್ಷ ಜೈಲು ಶಿಕ್ಷೆಯಾಯ್ತು. 2024ರಲ್ಲಿ 73 ವರ್ಷದ ಸಕ್ಸೆನಾ ಬಿಡುಗಡೆಯಾಗಿ ಗಡಿಪಾರು ಮಾಡಲಾಯ್ತು.
ವಿನಯ್ ಮಿತ್ತಲ್
ಕಾರ್ಪೊರೇಷನ್ ಬ್ಯಾಂಕ್ (ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ಮತ್ತು ಪಿಎನ್‌ಬಿಗೆ 40 ಕೋಟಿ ರೂ. ವಂಚಿಸಿ ಭಾರತದಿಂದ ಪಲಾಯನಗೈದಿದ್ದ ಕೈಗಾರಿಕೋದ್ಯಮಿ ವಿನಯ್ ಮಿತ್ತಲ್ ಇಂಡೋನೇಷ್ಯಾದ ಬಾಲಿಯಲ್ಲಿ 2017ರಲ್ಲಿ ಸಿಕ್ಕಿಬಿದ್ದಿದ್ದರು. ಇಂಡೋನೇಷ್ಯಾ ಪೊಲೀಸರು ಇವರನ್ನು ಬಂಧಿಸಿ 2018ರಲ್ಲಿ ಭಾರತಕ್ಕೆ ಕಳುಹಿಸಿದ್ದರು.
ವಿಜಯ್ ಮಲ್ಯ
ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು 2019 ರಲ್ಲಿ 'ಪರಾರಿ ಆರ್ಥಿಕ ಅಪರಾಧಿ' ಎಂದು ಘೋಷಿಸಲಾಯಿತು, ಈಗ ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಗಾಗಿ ಹಲವಾರು ಭಾರತೀಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸದೆ 2016ರಲ್ಲಿ ಯುಕೆಗೆ ಪರಾರಿಯಾದರು. ಭಾರತವು ಹಸ್ತಾಂತರಿಸುವ ಬಗ್ಗೆ ಹೋರಾಡುತ್ತಿದೆ.ಮಲ್ಯ ಲಂಡನ್‌ನಲ್ಲಿ ಜಾಮೀನಿನ ಮೇಲೆ ಇದ್ದಾರೆ.
13,500 ಕೋಟಿ ಪಿಎನ್‌ಬಿ ಬ್ಯಾಂಕ್ ಹಗರಣ: ಬೆಲ್ಜಿಯಂನಲ್ಲಿ ಆರೋಪಿ ಚೋಕ್ಸಿ ಬಂಧನ
ಮೊಹಮ್ಮದ್ ಯಾಹ್ಯಾ
ಬ್ಯಾಂಕುಗಳಿಗೆ 46 ಲಕ್ಷ ರೂ. ವಂಚಿಸಿ ಮೊಹಮ್ಮದ್ ಯಾಹ್ಯಾ 2003ರಲ್ಲಿ ಬಹ್ರೇನ್‌ಗೆ ಪರಾರಿಯಾಗಿದ್ದ, 2009ರಲ್ಲಿ ಸಿಬಿಐ ತನಿಖೆ ಆರಂಭಿಸಿತು2018ರಲ್ಲಿ ಭಾರತಕ್ಕೆ ಕರೆತಲಾಯ್ತು.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ಸಂಬಂಧಿಸಿದ 13,850 ಕೋಟಿ ರೂ. ಹಗರಣದಲ್ಲಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ. ಎಲ್‌ಒಯುಗಳು ಮತ್ತು ವಿದೇಶಿ ಕ್ರೆಡಿಟ್ ಲೆಟರ್ಸ್ (ಎಫ್‌ಎಲ್‌ಸಿ) ಬಳಸಿ ಬೃಹತ್ ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನೀರವ್ ಮೋದಿ ಕಳೆದ ಆರು ವರ್ಷಗಳಿಂದ ಲಂಡನ್‌ನ ಜೈಲಿನಲ್ಲಿಯೇ ಇದ್ದಾರೆ. ಸಿಬಿಐ ಹೊಸ ಮನವಿಯ ನಂತರ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ.
ಮಣಿಪುರಕ್ಕೆ ಸುಪ್ರೀಂ ಜಡ್ಜ್ ಭೇಟಿ; ದೇಶಭ್ರಷ್ಟ ಚೋಕ್ಸಿ ಬೆಲ್ಜಿಯಂನಲ್ಲಿ ಪ್ರತ್ಯಕ್ಷ
ಸನ್ನಿ ಕಾಲ್ರಾ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 10 ಕೋಟಿ ರೂ. ಸಾಲ ಕಟ್ಟದೆ ವಂಚಿಸಿದ್ದ, ಬಳಿಕ ಮಸ್ಕತ್‌ಗೆ ಓಡಿ ಹೋದ. 2015ರಲ್ಲಿ ಸಿಬಿಐ ಕೇಸು ದಾಖಲಿಸಿತು.2020ರಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಯ್ತು