ಜಿಯೋ ತನ್ನ ಗ್ರಾಹಕರಿಗೆ 36 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 3GB ಡೇಟಾ ನೀಡುವ ಹೊಸ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಹೆಚ್ಚು ಡೇಟಾ ಮತ್ತು ಒಟಿಟಿ ಬಳಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಜಿಯೋದಿಂದ 36 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ಇದೆ ಅಂತ ನಿಮಗೆ ಗೊತ್ತಾ? ಹೌದು ಜಿಯೋ ಮತ್ತೊಂದು ಆಸಕ್ತಿಯುವ ರಿಚಾರ್ಜ್ ಪ್ಲ್ಯಾನ್ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. 450 ರೂಪಾಯಿಗಳೊಂದಿಗೆ ರಿಚಾರ್ಜ್ ಮಾಡಿದರೆ ನಿಮಗೆ 36 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ.
26
ಏನಿದು ವ್ಯಾಲಿಡಿಟಿ?
ಸಾಮಾನ್ಯವಾಗಿ ಬಹುತೇಕ ರಿಚಾರ್ಜ್ ಪ್ಲ್ಯಾನ್‌ಗಳು 28 ದಿನಗಳು ಇರುತ್ತದೆ. ಆದರೆ ಈ ಹೊಸ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 08 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ. ಆದರೆ ಈ ಪ್ಲ್ಯಾನ್‌ನಲ್ಲಿ ಪ್ರತಿದಿನ ನಿಮಗೆ 3ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ.
36
ದಿನನಿತ್ಯದ ಡೇಟಾ ಬಳಕೆ
ನಿತ್ಯದ ಎರಡು ಜಿಬಿ ಡೇಟಾ ಲಿಮಿಡ್ ಪೂರ್ಣಗೊಳ್ಳ ಬಳಿಕ ಡೇಟಾ ಸ್ಪೀಡ್ ಕಡಿಮೆಯಾಗಲಿದೆ. 5ಜಿ ಸ್ಮಾರ್ಟ್‌ಫೋನ್ ಇರುವ ಜಿಯೋ ಬಳಕೆದಾರರಿಗೆ ಈ ಪ್ಲ್ಯಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ನಿಮ್ಮ ಪ್ರದೇಶಲ್ಲಿ ಜಿಯೋ ಟ್ರು 5ಜಿ ಸೇವೆ ಲಭ್ಯವಿದ್ದರೆ, ಇದಕ್ಕೆ ನೀವು ಅರ್ಹರಾಗಿದ್ದರೆ ಈ ಪ್ಲ್ಯಾನ್/ಡಿವೈಸ್ ಉಪಯೋಜಿಸಿದರೆ ಅನ್‌ಲಿಮಿಟೆಡ್ ಡೇಟಾ ಸಿಗಲಿದೆ ಎಂದು ಜಿಯೋ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
56
ಹೆಚ್ಚು ಡೇಟಾ ಯೂಸ್ ಮಾಡ್ತೀರಾ?
ಈ ಪ್ಲ್ಯಾನ್‌ನಲ್ಲಿ ಕಾಲ್ಸ್, ಎಸ್‌ಎಂಎಸ್ ಕೂಡ ಲಭ್ಯವಿರುತ್ತದೆ. ಡೇಟಾ ಜೊತೆಗೆ ವಾಯ್ಸ್ ಕಾಲಿಂಗ್, ಪ್ರತಿ ದಿನ 100 ಎಸ್‌ಎಂಎಸ್ ಕೂಡ ಉಚಿತವಾಗಿ ಸಿಗಲಿದೆ. ಜೊತೆಗೆ ಈ ಪ್ಲ್ಯಾನ್ ನಲ್ಲಿ ಜಿಯೋ ಹಾಟ್ಸ್ಟಾರ್ ಎಂಟರ್‌ಟೈನ್ಮೆಂಟ್ ಕೂಡ ಸಿಗಲಿದೆ. ಜಿಯೋ ಬಿಡುಗಡೆ ಮಾಡಿರುವ ಅಧಿಕೃತ ಪ್ಲ್ಯಾನ್‌ನಲ್ಲಿ ಈ ಪ್ಯಾಕ್‌ಅನ್ನು 5G + AI + Jio Hotstar ಕ್ಯಾಟಗಿರಿಯಲ್ಲಿ ನೀವು ನೋಡಬಹುದು.
66
ನಿಮಗೆ ಈ ಪ್ಲ್ಯಾನ್ ಸಿಗುತ್ತಾ?
ಪ್ರತಿದಿನ ಹೆಚ್ಚು ಡೇಟಾ ಬಳಕೆ ಮಾಡುವವರಿಗೆ ಈ ಯೋಜನೆ ಬಹಳ ಉಪಯೋಗವಾಗತ್ತದೆ. ಅದರಲ್ಲೂ ಒಟಿಟಿ ಹೆಚ್ಚು ಬಳಕೆ ಮಾಡುವವರಿಗೆ ಈ ಪ್ಲ್ಯಾನ್ ಬಹುಉಪಯೋಗಿ ಎಂದು ಹೇಳಬಹುದು. ಅದರಲ್ಲೂ 28 ದಿನಗಳಿಗಿಂತ ಹೆಚ್ಚು ವ್ಯಾಲಿಡಿಟಿ ಬೇಕು ಎಂದು ಭಾವಿಸುವವರಿಗೆ ಈ 36 ದಿನಗಳ ಪ್ಲ್ಯಾನ್ ಸೂಕ್ತವಾಗಿರುತ್ತದೆ. ಈ ಪ್ಲ್ಯಾನ್ ರಿಚಾರ್ಜ್ ಮಾಡಿಕೊಳ್ಳಲು ನೀವು ನಿಮ್ಮ Myjio App ಅಥವಾ Jio ಅಧಿಕೃತ ವೆಬ್‌ಸೈಟ್ ನಲ್ಲಿ ನಿಮ್ಮ ನಂಬರ್‌ಗೆ 450 ರೂಪಾಯಿ ಪ್ಲ್ಯಾನ್ ಲಭ್ಯ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.