ಒಂದೇ ದಿನದಲ್ಲಿ 5 ಲಕ್ಷ ಕೋಟಿ ಹೆಚ್ಚಾದ ಷೇರುಪೇಟೆ ಹೂಡಿಕೆದಾರರ ಸಂಪತ್ತು: ಅದೃಷ್ಟ ಅಂದ್ರೆ ಇದಪ್ಪಾ!

First Published Dec 5, 2023, 10:28 AM IST

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದು ಹೂಡಿಕೆದಾರರ ಭಾವನೆಗಳನ್ನು ಉತ್ತೇಜಿಸಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಸುಮಾರು 5 ಲಕ್ಷ ಕೋಟಿ ಏರಿಕೆಯಾಗಿದೆ. 

 ಪಂಚರಾಜ್ಯ ವಿಧಾನಸಭೆ ಚುನಾವಣೆಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೂರು ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ನಂತರ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆ ಮಾಡಿದೆ.

ಇದರಿಂದ, ಸೋಮವಾರ ಶೇ.1 ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಹಾಗೂ, ಹೂಡಿಕೆದಾರರ ಆಸ್ತಿ 4.97 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ!
 

Latest Videos


ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದು ಹೂಡಿಕೆದಾರರ ಭಾವನೆಗಳನ್ನು ಉತ್ತೇಜಿಸಿದೆ.

ಜತೆಗೆ ಜಿಡಿಪಿ ಬೆಳವಣಿಗೆ ದರ ಸಹ ಹೆಚ್ಚಿದ್ದರಿಂದ ವಿದೇಶಿ ನಿಧಿಯ ಒಳಹರಿವು ದೇಶೀಯ ಮಾರುಕಟ್ಟೆ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಹೆಚ್ಚಾಗಿದೆ. 

ಬಿಎಸ್‌ಇ ಸೆನ್ಸೆಕ್ಸ್ 877.43 ಪಾಯಿಂಟ್‌ಗಳಷ್ಟು ಹೆಚ್ಚಾಗಿದ್ದು, 1.30% ರಷ್ಟು ಜಿಗಿದು 68,358.62 ಅಂಶಗಳಷ್ಟು ತಲುಪಿ ದಾಖಲೆ ಮಾಡಿತ್ತು.

ಬಿಎಸ್‌ಇ - ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು ಶುಕ್ರವಾರ 337.67 ಲಕ್ಷ ಕೋಟಿ ರೂ. ನಿಂದ 342.64 ಲಕ್ಷ ಕೋಟಿ ರೂ. ಗೆ ಜಿಗಿದಿದ್ದು, 4.97 ಲಕ್ಷ ಕೋಟಿ ರೂ. ಮೌಲ್ಯ ಹೆಚ್ಚಾಗಿದೆ.

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಅನುಕ್ರಮವಾಗಿ 6.79% ಮತ್ತು 4.52% ಗರಿಷ್ಠ ಲಾಭದೊಂದಿಗೆ ಸೂಚ್ಯಂಕವನ್ನು ಮುನ್ನಡೆಸಿದವು.

ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ ಮತ್ತು ಲಾರ್ಸೆನ್ ಆಂಡ್ ಟೂಬ್ರೋ ಪ್ರಮುಖವಾಗಿ ಲಾಭ ಗಳಿಸಿದವು.

ಒಟ್ಟಾರೆ, ಐದು ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು 13.92 ಲಕ್ಷ ಕೋಟಿ ರೂ. ಹೆಚ್ಚಾಗಿದೆ. ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 1.03% ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ 1.09% ಏರಿಕೆಯಾಗಿದೆ. 
 

ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು ಬುಧವಾರದಂದು ಮೊದಲ ಬಾರಿಗೆ 4 ಟ್ರಿಲಿಯನ್-ಡಾಲರ್‌ ಮೈಲಿಗಲ್ಲನ್ನು ತಲುಪಿದೆ. ಈ ಮಧ್ಯೆ, NSE ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಶುಕ್ರವಾರ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್‌ ಗಡಿ ಮೀರಿದೆ.

ನಾಲ್ಕು ಪ್ರಮುಖ ರಾಜ್ಯಗಳ ಚುನಾವಣೆಗಳಲ್ಲಿ ಮೂರರಲ್ಲಿ ಬಿಜೆಪಿಯ ಅದ್ಭುತ ಗೆಲುವು ಮಾರುಕಟ್ಟೆಯಲ್ಲಿ ಗೂಳಿಯ ಓಟವನ್ನು ಮತ್ತಷ್ಟು ಬಲಪಡಿಸುತ್ತದೆ.

ಬಿಜೆಪಿಯು ಚುನಾವಣಾ ಪೂರ್ವ ಮತ್ತು ಎಕ್ಸಿಟ್‌ ಪೋಲ್ ನಿರೀಕ್ಷೆಗಳನ್ನು ಮೀರಿಸಿದೆ.ಇದು ಲೋಕಸಭೆಯಲ್ಲಿ ಬಿಜೆಪಿ ತನ್ನ ಬಹುಮತವ ಉಳಿಸಿಕೊಳ್ಳುವ ನಿರೀಕ್ಷೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಮಾರುಕಟ್ಟೆಯ ಅಂದಾಜಿನಿಂದ ಹೂಡಿಕೆ ಹೆಚ್ಚಾಗ್ತಿದೆ ಎಂದೂ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

click me!