ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಪೈಕಿ 4 ರಾಜ್ಯಗಳ ಫಲಿತಾಂಶ ಭಾನುವಾರ ಹೊರಬಿದ್ದಿದ್ದು, ಈ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಎಲ್ಲ ಕಡೆ ಪ್ರಚಂಡ ಬಹುಮತ ಸಾಧಿಸಿದೆ.
ಈ ವಿಧಾನಸಭೆ ಚುನಾವಣೆಗಳ ಫಲಿತಾಂಶ ಹೂಡಿಕೆದಾರರನ್ನು ಖುಷಿಯಾಗಿಸಿದೆ ಎಂದು ಹೇಳಬಹುದು. ಇದಕ್ಕೆ ಸಾಕ್ಷಿಯಂತಿದೆ ಇಂದಿನ ಆರಂಭಿಕ ಷೇರುಪೇಟೆ.
ಜಿಡಿಪಿ ಪ್ರಗತಿ ದರದಲ್ಲಿ ಭಾರತ ಚೀನಾ ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದ ಬಳಿಕ ನಿಫ್ಟಿ ಸಾರ್ವಕಾಲಿಕ ದಾಖಲೆ ಮಾಡಿತ್ತು. ಬಿಎಸ್‌ಇಯಲ್ಲಿ ಸಹ ಭಾರಿ ಏರಿಕೆ ಕಂಡಿತ್ತು.
ಅದರ ಬಳಿಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದು, ಈ ನಂತರ ಇಂದಿನ ಷೇರುಪೇಟೆಯಲ್ಲಿ ಹೂಡಿಕೆ ಹೆಚ್ಚಾಗ್ತಿದೆ.
ಈ ಕಾರಣದಿಂದ ಭಾರತೀಯ ಷೇರುಗಳಾದ ಬಿಎಸ್‌ಇ ಮತ್ತು ನಿಫ್ಟಿ 50 ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಲಕ್ಷ ಲಕ್ಷ ಕೋಟಿ ಹೂಡಿಕೆಯಾಗ್ತಿದೆ.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 1.65% ರಷ್ಟು ಏರಿಕೆಯಾಗಿ 20,602.50 ಪಾಯಿಂಟ್‌ಗಳಿಗೆ ತಲುಪಿದ್ದು, ಸತತ ಎರಡನೇ ಸೆಷನ್‌ನಲ್ಲಿ ದಾಖಲೆಯ ಎತ್ತರ ಮಾಡಿದೆ.
ಇನ್ನೊಂದೆಡೆ, BSE ಸೆನ್ಸೆಕ್ಸ್ ಬೆಳಗ್ಗೆ 9:51ರ ವೇಳೆಗೆ ಸಾರ್ವಕಾಲಿಕ ಗರಿಷ್ಠ 68,587.82 ಗೆ 1.64% ರಷ್ಟು ಏರಿಕೆಯಾಗಿದೆ. ಪ್ರಮುಖವಾಗಿ 15 ನಿಮಿಷಗಳಲ್ಲಿ ಬಿಎಸ್‌ಇಗೆ 4 ಲಕ್ಷ ಕೋಟಿಗೂ ಹೆಚ್ಚು ಹಣ ಹರಿದುಬಂದಿದೆ.
ಹಣಕಾಸು ಸೇವೆಗಳು 1.8% ರಷ್ಟು ಏರಿದರೆ, ಎನರ್ಜಿ ಷೇರುಗಳು 2% ರಷ್ಟು ಏರಿದವು. ಸೂಚ್ಯಂಕ ಹೆವಿವೇಯ್ಟ್‌ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 1 ರಿಂದ ಶೇ. 3 ರಷ್ಟು ಲಾಭ ಗಳಿಸಿದವು. ಸ್ಮಾಲ್- ಮತ್ತು ಮಿಡ್-ಕ್ಯಾಪ್‌ಗಳು ತಲಾ 1% ರಷ್ಟು ಗಳಿಸಿದ್ದರೆ, ಹೊಸ ಸಾರ್ವಕಾಲಿಕ ಗರಿಷ್ಠಗಳನ್ನು ಸಹ ಮುಟ್ಟಿವೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮೂರರಲ್ಲಿ ವಿಜಯ ಸಾಧಿಸಿದ್ದನ್ನು ಭಾನುವಾರ ಫಲಿತಾಂಶ ತೋರಿಸಿದೆ.
ತ್ರೈಮಾಸಿಕ ಬೆಳವಣಿಗೆ ಮತ್ತು ಮಾಸಿಕ ಕಾರ್ಖಾನೆ ಚಟುವಟಿಕೆ ಸೇರಿದಂತೆ ಬಲವಾದ ದೇಶೀಯ ಸ್ಥೂಲ ಆರ್ಥಿಕ ಮಾಹಿತಿಯ ನೆರವಿನಿಂದ ಶುಕ್ರವಾರ ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದೂ ತಿಳಿದುಬಂದಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ 2023 ರಲ್ಲಿ ತಮ್ಮ ಅತ್ಯುತ್ತಮ ತಿಂಗಳನ್ನು ನವೆಂಬರ್ ಎನ್ನಲಾಗಿತ್ತು. ಈಗ ಡಿಸೆಂಬರ್‌ನಲ್ಲೂ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಾಣ್ತಿದೆ.
ಈ ಮಧ್ಯೆ, ಅದಾನಿ ಸಮೂಹದ ಷೇರುಗಳು 3% ಮತ್ತು 9% ರ ನಡುವೆ ಲಾಭ ಗಳಿಸಿದರೆ, ಲೋಹಗಳು ಮತ್ತು ಎನರ್ಜಿ ಸೇರಿದಂತೆ ಹಲವಾರು ವಲಯದ ಸೂಚ್ಯಂಕಗಳಲ್ಲಿ ಅಗ್ರಸ್ಥಾನ ಗಳಿಸಿದವು.