ಮತ್ತೆ ಮತ್ತೆ ಹೇಳ್ತಿದ್ದಾರೆ ಚಿನ್ನ, ಬೆಳ್ಳಿ ಖರೀದಿಸಿ... 2013ರ ಭವಿಷ್ಯ ನಿಜ ಆಯ್ತು

Published : May 21, 2025, 03:41 PM ISTUpdated : May 21, 2025, 03:43 PM IST

ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆ, 'ರಿಚ್ ಡ್ಯಾಡ್ ಪೂರ್ ಡ್ಯಾಡ್' ಖ್ಯಾತಿಯ ರಾಬರ್ಟ್ ಕಿಯೋಸಾಕಿ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ಮೂಡಿಸ್ ಅಮೆರಿಕದ ಕ್ರೆಡಿಟ್ ರೇಟಿಂಗ್ ಇಳಿಕೆ ಮಾಡಿರುವುದನ್ನು ಉಲ್ಲೇಖಿಸಿ, ಕಿಯೋಸಾಕಿ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಎಚ್ಚರಿಸಿದ್ದಾರೆ ಮತ್ತು ಉದ್ಯಮಶೀಲತೆ ಮತ್ತು ಈ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.

PREV
18
ಮತ್ತೆ ಮತ್ತೆ ಹೇಳ್ತಿದ್ದಾರೆ ಚಿನ್ನ, ಬೆಳ್ಳಿ ಖರೀದಿಸಿ... 2013ರ ಭವಿಷ್ಯ ನಿಜ ಆಯ್ತು

ಜಾಗತಿಕ ಆರ್ಥಿಕ ಸ್ಥಿತಿ, ಜಾಗತಿಕ ಹಣದುಬ್ಬರದಿಂದಾಗಿ ಷೇರು ಮಾರುಕಟ್ಟೆಯಲ್ಲಿ ದಿನವೂ ಏರಿಳಿತವಾಗುತ್ತಿದ್ದು, ಚಿನ್ನದ ದರದಲ್ಲೂ ನಿರಂತರ ಏರಿಕೆ ಕಾಣುತ್ತಿದೆ. ಇತ್ತೀಚೆಗೆ ಕೆಲ ತಜ್ಞರು ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗುತ್ತದೆ ಎಂದಿದ್ದರೆ ಮತ್ತೆ ಕೆಲವರು ಚಿನ್ನ ಬೆಳ್ಳಿ ದರದಲ್ಲಿ ಮುಂದೆ ಊಹೆಗೂ ನಿಲುಕದಷ್ಟು ಏರಿಕೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. 

28

ರಿಚ್ ಡ್ಯಾಡ್ ಪೂರ್ ಡ್ಯಾಡ್ ಎಂಬ ಪುಸ್ತಕ ಬರೆದ ಲೇಖಕ ರಾಬರ್ಟ್ ಕಿಯೋಸಾಕಿ ಮತ್ತೊಮ್ಮೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ ಮತ್ತು ಇಂದು ಏನಾಗುತ್ತಿದೆ ಎಂದು ತಾವು 2013 ರಲ್ಲೇ ಭವಿಷ್ಯ ನುಡಿದಿದ್ದೇನೆ ಎಂದು ಅವರು ಹೇಳಿದ್ದಾರೆ. 

38


ಕಳೆದ ಕೆಲವು ದಿನಗಳಿಂದ, ಪ್ರಪಂಚದಾದ್ಯಂತ ವ್ಯಾಪಾರ ಯುದ್ಧದಂತಹ(Trade War) ದೇಶಗಳ ಆರ್ಥಿಕ ಸ್ಥಿತಿಯನ್ನು ತಲ್ಲಣಗೊಳಿಸುವಂತಹ ಸನ್ನಿವೇಶಗಳು ಕಂಡುಬರುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿ (Trump Tarrif) ಷೇರು ಮಾರುಕಟ್ಟೆಗಳಲ್ಲಿ ದೊಡ್ಡ ಹಾನಿಯನ್ನುಂಟು ಮಾಡಿತು. ಚೀನಾ, ಕೆನಡಾ ಮತ್ತು ಮೆಕ್ಸಿಕೊದಂತಹ ದೇಶಗಳ ನಡುವೆ ಅಮೆರಿಕದ ನೇರ ಸುಂಕ ಯುದ್ಧ ಆರಂಭವಾಗಿತ್ತು. ಈ ನಡುವೆ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿಸ್ ಅಮೆರಿಕದ ಕ್ರೆಡಿಟ್ ರೇಟಿಂಗ್ ಅನ್ನು AAA ಯಿಂದ AA1 ಗೆ ಇಳಿಸಿದೆ.  ಇದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ. ಈ ಬಗ್ಗೆ 'ರಿಚ್ ಡ್ಯಾಡ್ ಪೂರ್ ಡ್ಯಾಡ್' ಎಂಬ ಪ್ರಸಿದ್ಧ ಪುಸ್ತಕದ ಲೇಖಕ ರಾಬರ್ಟ್ ಟಿ. ಕಿಯೋಸಾಕಿ, ಈ ​​ ವಿವರಿಸುತ್ತಾ, ಕೆಟ್ಟ ಕಾಲದಲ್ಲಿ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್ ಮಾತ್ರ ಆಸರೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

48
Moody's Ratings (File Photo)

ಅಮೆರಿಕಕ್ಕೆ ಮೂಡಿಸ್ ಆಘಾತ
ಮೂಡಿಸ್ ರೇಟಿಂಗ್ಸ್ ಅಮೆರಿಕದ ಕ್ರೆಡಿಟ್ ರೇಟಿಂಗ್ ಅನ್ನು ಕೆಳಮಟ್ಟಕ್ಕಿಳಿಸಿದ್ದು ಶ್ವೇತಭವನದಲ್ಲಿಯೂ ಸಹ ಕೋಲಾಹಲಕ್ಕೆ ಕಾರಣವಾಗಿದೆ. ಈ ಕಾರಣದಿಂದ ಸಂಸ್ಥೆಯ ವಿರುದ್ಧ ಅಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ವರದಿಯ ಪ್ರಕಾರ, ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ಪಾವತಿ ಹೊರೆಯನ್ನು ಉಲ್ಲೇಖಿಸಿ ಮೂಡಿಸ್ ಯುಎಸ್ ಕ್ರೆಡಿಟ್ ರೇಟಿಂಗ್ ಅನ್ನು ಕಡಿತಗೊಳಿಸಿದೆ, ಇದು ಅಮೆರಿಕದ ಮೇಲಿನ ಹೆಚ್ಚುತ್ತಿರುವ ಸಾಲವನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. 

58

ಮೂಡಿಸ್ ಸಂಸ್ಥೆ ಅಮೆರಿಕಾದ ಕ್ರೆಡಿಟ್ ರೇಟಿಂಗ್ ಇಳಿಕೆ ಮಾಡಿದ ನಂತರ, ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೂಡೀಸ್ ಅರ್ಥಶಾಸ್ತ್ರಜ್ಞ ಮಾರ್ಕ್ ಝಾಂಡಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ವಿರೋಧಿ ಎಂದು ಕರೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭವಿಷ್ಯದಲ್ಲಿ ಏನಾಗುತ್ತದೆ ಮತ್ತು ಅಂತಹ ಸಮಯದಲ್ಲಿ ಜನರು ಏನು ಮಾಡಬೇಕು ಎಂಬುದರ ಕುರಿತು ರಾಬರ್ಟ್ ಕಿಯೋಸಾಕಿ ವಿಭಿನ್ನ ರೀತಿಯಲ್ಲಿ ವಿವರಿಸಿದ್ದಾರೆ.

68
Robert Kiyosaki

ಮೂಡೀಸ್ ಡೌನ್‌ಗ್ರೇಡ್‌ ಅರ್ಥ ಏನು
ರಾಬರ್ಟ್ ಕಿಯೋಸಾಕಿಯವರ ಪ್ರಕಾರ  ಮೂಡೀಸ್ ರೇಟಿಂಗ್ ಏಜೆನ್ಸಿ ಅಮೆರಿಕಾದ ಕ್ರೆಡಿಟ್ ರೇಟಿಂಗ್ ಕಡಿಮೆ ಮಾಡಿದ್ದರ ಅರ್ಥ ಏನು ಎಂದರೆ,  ಅಮೆರಿಕವು ಉದ್ಯೋಗವಿಲ್ಲದೆ ಸಾಲ ಪಡೆದ ಹಣವನ್ನು ಖರ್ಚು ಮಾಡುತ್ತಿರುವ ಮತ್ತು ತನ್ನ ಕುಟುಂಬವನ್ನು ಸಹ ನೋಡಿಕೊಳ್ಳದ ತಂದೆಯಂತೆ ಎಂದು ವಿಶ್ಲೇಷಿಸುತ್ತಾ ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಮೂಡಿಸ್ ಕ್ರೆಡಿಟ್ ಸ್ಕೋರ್ ಇಳಿಕೆ ಮಾಡಿದ್ದರಿಂದ ಮಾಡುವುದರಿಂದ ಹೈ ಪಾಲಿಸಿ ರೇಟ್‌ಗಳು ಉಂಟಾಗುವ ಸಾಧ್ಯತೆ ಇದೆ, ಇದರರ್ಥ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರರ್ಥ ಅಮೆರಿಕದ ಆರ್ಥಿಕತೆ ನಿಧಾನವಾಗುತ್ತದೆ, ನಿರುದ್ಯೋಗ ಹೆಚ್ಚಾಗುತ್ತದೆ, ಬಾಂಡ್ ಮಾರುಕಟ್ಟೆ, ವಸತಿ ಮಾರುಕಟ್ಟೆ ಮತ್ತು ದುರ್ಬಲ ಬ್ಯಾಂಕುಗಳಿಗೆ ಸೋಲಾಗಬಹುದು. ಸರಳವಾಗಿ ಹೇಳುವುದಾದರೆ, 1929 ರ ಆರ್ಥಿಕ ಹಿಂಜರಿತ ಮತ್ತೆ ಮರಳಬಹುದು ಎಂದು ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ. 

78

ಈಗ ಜನರು ಏನು ಮಾಡಬೇಕು?
ಪರಿಸ್ಥಿತಿ ಹೀಗಿರುವಾಗ ಜನರು ಏನು ಮಾಡಬೇಕು ಎಂಬ ಬಗ್ಗೆ ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ. ಜನರು ಉದ್ಯಮಿಗಳಾಗಬೇಕೆಂದು ನಾನು ಯಾವಾಗಲೂ ಸಲಹೆ ನೀಡಿದ್ದೇನೆ ಮತ್ತು ಒಳ್ಳೆಯ ಸುದ್ದಿ ಏನೆಂದರೆ ಷೇರು ಮಾರುಕಟ್ಟೆಗಳ ಕುಸಿತದ ಸಮಯದಲ್ಲಿ ಉದ್ಯಮಿಯಾಗುವುದು ಸುಲಭವಾಗಬಹುದು, ರಿಯಲ್ ಎಸ್ಟೇಟ್ ಅಗ್ಗವಾಗಬಹುದು, ಏಕೆಂದರೆ ಕುಸಿತವು ಆರ್ಥಿಕತೆಯು ಬಲವಾಗಿದ್ದಾಗ ಲಭ್ಯವಿಲ್ಲದ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದ್ದಾರೆ. ತಮ್ಮ 2013ರ 'ರಿಚ್‌ ಡ್ಯಾಡ್ ಪ್ರೊಫೆಸಿ' ಪುಸ್ತಕದಲ್ಲಿ ನಾನು ಇದನ್ನೇ ಊಹಿಸಿದ್ದೇನೆ ಎಂದು ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ. 

88

ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಲೇಖಕರ ಪ್ರಕಾರ, ನೀವು ನಿಮ್ಮ ಕಣ್ಣುಗಳನ್ನು ತೆರೆದು ಉದ್ಯೋಗ ಭದ್ರತೆ, ನಿಶ್ಚಲ ಸಂಬಳದೊಂದಿಗೆ ಇರುವ ಉದ್ಯೋಗಿಯ ದೃಷ್ಟಿಕೋನದಿಂದ ನೋಡುವ ಬದಲು ಉದ್ಯಮಿಯ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದರೆ ಆರ್ಥಿಕ ಹಿಂಜರಿತವು ಶ್ರೀಮಂತರಾಗಲು ಉತ್ತಮ ಸಮಯ ಎಂದು ಸಾಬೀತುಪಡಿಸಬಹುದು. ಇದರೊಂದಿಗೆ, ನಾನು ಜನರಿಗೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಸಲಹೆ ನೀಡುತ್ತೇನೆ ಮತ್ತು ಇಂದು ಬಿಟ್‌ಕಾಯಿನ್ ಕೂಡ ಖರೀದಿಸಬಹುದು ಎಂದು ಅವರು ಹೇಳಿದ್ದಾರೆ ಇದು ಮುಂದೆ ಉಪಯುಕ್ತವಾಗಲಿದೆ. ದುರ್ಬಲ ಪುರುಷರು ಅವಕಾಶಗಳಿಗಾಗಿ ಕಾಯುತ್ತಾರೆ ಮತ್ತು ಬಲಿಷ್ಠ ಪುರುಷರು ಅವುಗಳನ್ನು ಸೃಷ್ಟಿಸುತ್ತಾರೆ ಎಂದು ಹೇಳಿದ ಒರಿಸನ್ ಮ್ಯಾಡೆನ್ ಅವರ ಉದಾಹರಣೆಯನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ. 

Read more Photos on
click me!

Recommended Stories