ಏಷ್ಯಾದಲ್ಲೇ ಎರಡನೇ ಸ್ಥಾನಕ್ಕೇರಲಿದೆ ಭಾರತದ ವಿಮಾ ಮಾರುಕಟ್ಟೆ!

Published : Jun 05, 2025, 12:55 PM ISTUpdated : Jun 05, 2025, 12:59 PM IST

ಭಾರತದ ವಿಮಾ ಮಾರುಕಟ್ಟೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಮತ್ತು ಮುಂದಿನ ದಶಕದಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಬಹುದು. ಜೀವ ಮತ್ತು ಸಾಮಾನ್ಯ ವಿಮೆ ಎರಡೂ ವಲಯಗಳಲ್ಲಿ ಬೆಳವಣಿಗೆ ಕಂಡುಬಂದಿವೆ.

PREV
15

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ವಿಮಾ ಮಾರುಕಟ್ಟೆ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. SEBI ನೋಂದಾಯಿತ ವಿಶ್ಲೇಷಕರಾದ ಬಿಲಿಯನ್ಡ್ರೀಮ್ಜ್ ಪ್ರಕಾರ, ಈ ವಲಯ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಮುಂದಿನ 10 ವರ್ಷದಲ್ಲಿ ಭಾರತದ ಜೀವ ವಿಮಾ ಮಾರುಕಟ್ಟೆಯು ಜಪಾನ್ ಅನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತೀ ದೊಡ್ಡ ಮಾರುಕಟ್ಟೆಯಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

25

2020 ರಿಂದ 2024 ರವರೆಗೆ, ಜೀವ ವಿಮಾ ಪ್ರೀಮಿಯಂ ಮೊತ್ತ ₹5.73 ಲಕ್ಷ ಕೋಟಿಯಿಂದ ₹8.3 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ವಾರ್ಷಿಕ ಶೇ.9.7ರಷ್ಟು ಬೆಳವಣಿಗೆ ಸೂಚಿಸುತ್ತದೆ. 2023ರ ಮಾರ್ಚ್ ಮತ್ತು 2024ರ ಮಾರ್ಚ್ ನಡುವೆ, ಜೀವ ವಿಮಾದಾರರ ಆಸ್ತಿ ಮೌಲ್ಯ ಶೇ.13 ರಷ್ಟು ಹೆಚ್ಚಾಗಿದೆ. ಆರೋಗ್ಯ ಮತ್ತು ವಾಹನ (ಮೋಟಾರು) ವಿಮಾ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿಯಿಂದ, ಸಾಮಾನ್ಯ ವಿಮಾ ವಲಯವು ಶೇ.11.3 ರಷ್ಟು ವಾರ್ಷಿಕ ಸರಾಸರಿ ಬೆಳವಣಿಗೆಯನ್ನು (CAGR) ದಾಖಲಿಸಿದೆ.

35

ವಿಶ್ಲೇಷಕರ ಪ್ರಕಾರ, ಮುಂದಿನ ದಶಕದಲ್ಲಿ ಭಾರತ ಜಪಾನ್‌ನನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತಿದೊಡ್ಡ ಜೀವ ವಿಮಾ ಮಾರುಕಟ್ಟೆಯಾಗಬಹುದು ಎಂಬ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಶೇ.10.5 ರಷ್ಟು ವಾರ್ಷಿಕ ಬೆಳವಣಿಗೆ ನಡೆಯಬಹುದು. 2026-27ರ ಹಣಕಾಸು ವರ್ಷದಲ್ಲಿ ಸಾಮಾನ್ಯ ವಿಮಾ ಪ್ರೀಮಿಯಂ ಆದಾಯವು ₹3.21–3.24 ಲಕ್ಷ ಕೋಟಿಯಿಂದ ₹3.53–3.61 ಲಕ್ಷ ಕೋಟಿಗೆ ಏರಿಕೆಯಾಗಲಿದೆ.

45

ಈ ಬೆಳವಣಿಗೆಗೆ ಪ್ರಮುಖ ಕಾರಣಗಳು:

  • ಭಾರತದ ಬಲವಾದ ಆರ್ಥಿಕ ಬೆಳವಣಿಗೆ,
  • ಕುಟುಂಬಗಳ ಖರ್ಚಿಗೆ ಲಭ್ಯವಿರುವ ಆದಾಯದ ಹೆಚ್ಚಳ,
  • 100% ವಿದೇಶಿ ನೇರ ಹೂಡಿಕೆ (FDI)ಗೆ ಅವಕಾಶ ನೀಡುವ ಅನುಕೂಲಕರ ನಿಯಮಗಳು,
  • ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ,
  • ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳವರೆಗೆ ವಿಮಾ ರಕ್ಷಣೆ ವಿಸ್ತರಣೆ.
55

ಜೀವ ವಿಮಾ ಕ್ಷೇತ್ರದ ಪ್ರಮುಖ ಕಂಪನಿಗಳು:

LIC, HDFC ಲೈಫ್, SBI ಲೈಫ್, ICICI ಪ್ರುಡೆನ್ಶಿಯಲ್, ICICI ಲೊಂಬಾರ್ಡ್, ಸ್ಟಾರ್ ಹೆಲ್ತ್, ನ್ಯಾಷನಲ್ ಇನ್ಸುರನ್ಸ್ (NIACL), ಒಟ್ಟಿನಲ್ಲಿ ವಿಮಾ ಮಾರುಕಟ್ಟೆಯು ಮುಂದಿನ ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯ ಪ್ರಮುಖ ಹಂತವಾಗಿ ಬೆಳೆಯುವ ನಿರೀಕ್ಷೆಯಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories