ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1

Published : Dec 28, 2025, 04:36 PM IST

ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1, ಹುರನ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಯಶ್ರಿ ಮೊದಲ ಸ್ಥಾನ ಪಡೆದಿದ್ದಾರೆ. ಯಾರಿದು ಜಯಶ್ರಿ ಉಲ್ಲಾಳ್

PREV
16
ಜಯಶ್ರಿ ಉಲ್ಲಾಳ್‌ಗೆ ಮೊದಲ ಸ್ಥಾನ

ಹುರನ್ ಇಂಡಿಯಾ 2025 ಇದೀಗ ಹೊಸ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಇದು ಜಾಗತಿಕ ಮಟ್ಟದಲ್ಲಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿ. ಜಾಗಕಿತ ಮಟ್ಟದಲ್ಲಿ ಹಲವು ಕಂಪನಿಗಳ ಸಿಇಒ, ಮುಖ್ಯಸ್ಥರಾಗಿ ಜಾಗತಿಕ ಮಟ್ಟದಲ್ಲಿ ಶ್ರೀಮಂತರಾಗಿರುವ ಪೈಕಿ ಸುಂದರ್ ಪಿಚೈ, ಸತ್ಯ ನಾಡೆಲ್ಲ ಸೇರಿದಂತೆ ಹಲವು ದಿಗ್ಗಜರನ್ನು ಹಿಂದಿಕ್ಕಿ ಜಯಶ್ರಿ ಉಲ್ಲಾಳ್ ಮೊದಲ ಸ್ಥಾನ ಪಡೆದಿದ್ದಾರೆ.

26
ಆರಿಸ್ಟಾ ನೆಟವರ್ಕ್ ಸಿಇಒ ಜಯಶ್ರಿ

ತಾಂತ್ರಿಕ ಕ್ಷೇತ್ರದಲ್ಲಿ ಶ್ರೀಮಂತರಾಗಿರುವ ಭಾರತೀಯ ಮೂಲದ ವ್ಯಕ್ತಿಗಳ ಪೈಕಿ ಜಯಶ್ರಿ ಉಲ್ಲಾಳ್ ಮೊದಲ ಸ್ಥಾನದಲ್ಲಿದ್ದಾರೆ. ಅರಿಸ್ಟಾ ನೆಟ್‌ವರ್ಕ್ ಸಿಇಒ ಒಗಿರುವ ಜಯಶ್ರಿ ಉಲ್ಲಾಳ್, ಭಾರತೀಯ ಮೂಲದ ಬ್ರಿಟಿಷ್ ಮಹಿಳೆ. ಕಳೆದ 17 ವರ್ಷದಿಂದ ಅರಿಸ್ಟಾ ನೆಟ್‌ವರ್ಕ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.

36
ಕ್ಲೌಡ್, ಡೇಟಾ ಸೆಂಟರ್ ಕಂಪನಿ

2008ರಲ್ಲಿ ಜಯಶ್ರಿ ಉಲ್ಲಾಳ್ ಅರಿಸ್ಟಾ ನೆಟ್‌ವರ್ಕ್ ಕಂಪನಿಗೆ ಸಿಇಒ ಆಗಿ ಸೇರಿಕೊಂಡರು. ಅರಿಸ್ಟಾ ನೆಟ್‌ವರ್ಕ್ ಕಂಪನಿ ಜಗತ್ತಿನ ಅತೀ ದೊಡ್ಡ ಕ್ಲೌಡ್, ಡೇಟಾ ಸೆಂಟರ್ ಆಗಿ ಹೊರಹೊಮ್ಮಿದೆ. ಇತ್ತ ಸುಂದರ್ ಪಿಚೈ ಗೂಗಲ್ ಸಿಇಒ ಆಗಿದ್ದರೆ ಸತ್ಯ ನಾಡೆಲ್ಲ ಮೈಕ್ರೋಸಾಫ್ಟ್ ಸಿಇಒ ಆಗಿದ್ದಾರೆ. ಇವರೆಲ್ಲರನ್ನು ಶ್ರೀಮಂತಿಕೆಯಲ್ಲಿ ಜಯಶ್ರಿ ಉಲ್ಲಾಳ್ ಹಿಂದಿಕ್ಕಿದ್ದಾರೆ.

46
ದೆಹಲಿಯಲ್ಲಿ ಪ್ರಾಥಮಕಿ ವಿದ್ಯಾಭ್ಯಾಸ

ದೆಹಲಿಯಲ್ಲಿ ಜಯಶ್ರಿ ಉಲ್ಲಾಳ್ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದಾರೆ. ಬಳಿಕ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನೀಯರಿಂಗ್, ಮಾಸ್ಟರ್ ಆಫ್ ಸೈನ್ಸ್ ಇನ್ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಅಮೆರಿಕದಲ್ಲೇ ವೃತ್ತಿ ಆರಂಭಿಸಿದ್ದರು.

56
ಜಯಶ್ರಿ ಉಲ್ಲಾಲ್ ಸಂಪತ್ತು

ಫೋರ್ಬ್ಸ್ ವರದಿ ಪ್ರಕಾರ ಜಯಶ್ರಿ ಉಲ್ಲಾಲ್ ಒಟ್ಟು ಆಸ್ತಿ 5.7 ಬಿಲಿಯನ್ ಅಮೆರಿಕನ್ ಡಾಲರ್. ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಲ್ 713ನೇ ಸ್ಥಾನ ಪಡೆದಿದ್ದಾರೆ. ಆದರೆ ಜಾಗತಿಕಯ ಮಟ್ಟದ ಭಾರತೀಯ ಮೂಲದ ಪ್ರಮುಖರಲ್ಲಿ ಜಯಶ್ರಿ ಉಲ್ಲಾಲ್ ಮೊದಲ ಸ್ಥಾನದಲ್ಲಿದ್ದಾರೆ.

66
ಭಾರತೀಯ ಮೂಲದ ಶ್ರೀಮಂತರ ಆಸ್ತಿ
  • ಜಯಶ್ರಿ ಉಲ್ಲಾಸ್ 5.7 ಬಿಲಿಯನ್ ಅಮೆರಿಕನ್ ಡಾಲರ್
  • ಸುಂದರ್ ಪಿಚೈ 1.5 ಬಿಲಿಯನ್ ಅಮೆರಿಕನ್ ಡಾಲರ್
  • ಸತ್ಯ ನಾಡೆಲ್ಲಾ 1.1 ಬಿಲಿಯನ್ ಅಮೆರಿಕನ್ ಡಾಲರ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories