ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್

Published : Dec 27, 2025, 11:16 PM IST

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಾಸ್, ದಿಢೀರ್ ಕಂಪನಿ ಮಾರಾಟ ಮಾಡಿದ ಬಾಸ್ ಬಂದ ಹಣದಲ್ಲಿ ಏನು ಮಾಡಿದ್ರು ಇದೀಗ ಈ ಬಾಸ್ ಹೊಸ ಕಂಪನಿ ಆರಂಭಿಸಿದರೆ ಸೇರಲು ಉದ್ಯೋಗಿಗಳು ಕ್ಯೂ ನಿಂತಿದ್ದಾರೆ.  

PREV
16
ಕಂಪನಿ ಮಾರಾಟ ಮಾಡಿದ ಬಾಸ್

ಕಂಪನಿ ಪಾಲು ಮಾರಾಟ, ಮ್ಯಾನೇಜ್ಮೆಂಟ್ ಬದಲಾವಣೆ, ಕಂಪನಿ ಸಂಪೂರ್ಣವಾಗಿ ಮಾರಾಟವಾಗುವ ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವುದು ಉದ್ಯೋಗಿಗಳು. ಬಹುತೇಕ ಬಾರಿ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಯಾವುದೇ ಪರಿಹಾರವೂ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಕಂಪನಿ ಬಾಸ್ ಮಾತ್ರ ಭಿನ್ನ ಕಂಪನಿ ಮಾರಾಟ ಮಾಡಿದ್ದಾರೆ. ಆದರೆ ಉದ್ಯೋಗಿಗಳು ಶಾಕ್ ಆಗುವ ಬದಲು ಸಂಭ್ರಮ ಡಬಲ್ ಆಗಿದೆ.

26
550 ಉದ್ಯೋಗಿಗಳ ಕಂಪನಿ ಮಾರಾಟ

ಅಮೆರಿಕದ ಪ್ರತಿಷ್ಠಿತ ಗ್ರಹಾಮ್ ವಾಕರ್ ಕಂಪನಿ ಉದ್ಯವಾಗಿದ್ದ ಫೈಬರ್ ಬಾಂಡ್ ಕಂಪನಿ ಮಾರಾಟ ಮಾಡಲಾಗಿದೆ. ಪವರ್ ಹಾಗೂ ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯನ್ನು ಸಿಇಒ ಗ್ರಹಾಮ್ ವಾಕರ್ ಮಾರಾಟ ಮಾಡಿದ್ದಾರೆ. ಹಲವು ದಶಕಗಳಿಂದ ಈ ಕಂಪನಿಯನ್ನು ವಾಕರ್ ಕಂಪನಿ ನಡೆಸುಕೊಂಡು ಬರುತ್ತಿತ್ತು. ಈ ಕಂಪನಿಯಲ್ಲಿ 550 ಉ್ಯದ್ಯೋಗಿಗಳಿದ್ದರು.

36
ಸಾವಿರಾರು ರೂಪಾಯಿಗೆ ಕಂಪನಿ ಮಾರಾಟ

ಫೈಬರ್‌ಬಾಂಡ್ ಕಂಪನಿಯನ್ನು ಗ್ರಹಾಮ್ ವಾಕರ್ ಬರೋಬ್ಬರಿ ಸಾವಿರಾರು ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕಂಪನಿ ಮಾರಾಟದ ಮಾತುಕತೆಗಳು, ಡೀಲ್ ನಡೆಯುವಾಗ ಉದ್ಯೋಗಿಗಳು ಆತಂಕಗೊಂಡಿದ್ದರು. ಹಲವು ಸುಳಿವು ಸಿಗುತ್ತಿದ್ದಂತೆ ರಾಜೀನಾಮೆ ನೀಡಿ ಬೇರೆ ಕಂಪನಿ ಸೇರಿಕೊಂಡಿದ್ದರು. ಆದರೆ 550 ಮಂದಿ ಮಾತ್ರ ಆತಂಕ ಒಳಗಿದ್ದರೂ ಕೆಲಸ ಮುಂದುವರಿಸಿದ್ದರು.

46
ಉದ್ಯೋಗಿಗಳಿಗೆ ತಲಾ 4 ಕೋಟಿ ರೂಪಾಯಿ ಹಂಚಿದ ಸಿಇಒ

ಗ್ರಹಾಮ್ ವಾಕರ್ ಕಂಪನಿ ಮಾರಾಟ ಮಾಡಿ ಬಂದ ಹಣದಲ್ಲಿ 550 ಉದ್ಯೋಗಿಳಿಗೆ ತಲಾ 4 ಕೋಟಿ ರೂಪಾಯಿಯಂತೆ ಹಂಚಿದ್ದಾರೆ. ಇದಕ್ಕಾಗಿ 2,250 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಉದ್ಯಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹಾಗೂ ಕಂಪನಿಗೆ ಬದ್ಧತೆಯಿಂದ ಕೆಲಸ ಮಾಡಿದ ಉದ್ಯೋಗಗಳಿಗೆ ಕಂಪನಿ ಮಾರಾಟದಿಂದ ಬಂದ ಹಣದಲ್ಲಿ ಶೇಕಡಾ 15ರಷ್ಟು ಹಂಚಿದ್ದಾರೆ.

ಉದ್ಯೋಗಿಗಳಿಗೆ ತಲಾ 4 ಕೋಟಿ ರೂಪಾಯಿ ಹಂಚಿದ ಸಿಇಒ

56
ಭಾವುಕರಾದ ಉದ್ಯೋಗಿಗಳು

ಒಂದೆಡೆ ಕಂಪನಿ ಮಾರಾಟ ಎಂದಾಗ ಉದ್ಯೋಗಿಗಳು ಭಾವಕರಾಗಿದ್ದಾರೆ. ಇದೇ ವೇಳೆ ಕಂಪನಿ ಮಾರಾಟದಲ್ಲೂ ಪಾಲಿನ ಮೂಲಕ ಪ್ರತಿಯೊಬ್ಬ ಉದ್ಯೋಗಿಗಳು ತಲಾ 4 ಕೋಟಿ ರೂಪಾಯಿಯಂತೆ ಪಡೆದಾಗ ಭಾವುಕರಾಗಿದ್ದಾರೆ. ಇಷ್ಟು ದಿನ ಕಂಪನಿಗಾಗಿ ಕೆಲಸ ಮಾಡಿದ್ದೇವೆ. ಇದೀಗ ಕಂಪನಿ ಈ ರೀತಿ ಪಾಲು ನೀಡಿದ ಕಾರಣ ಭಾವುಕರಾಗಿದ್ದೇವೆ ಎಂದಿದ್ದಾರೆ.

66
ಗ್ರಹಾಮ್ ವಾಕರ್‌ಗೆ ಬಂದಿದೆ ಸಾವಿರಾರು ರೆಸ್ಯೂಮ್

ಕಂಪನಿ ಉದ್ಯೋಗಿಗಳಿಗೆ 4 ಕೋಟಿ ರೂಪಾಯಿ ನೀಡಿದ ಮಾಹಿತಿ ತಿಳಿಯುತ್ತಿದ್ದಂತೆ ಇದೀಗ ಗ್ರಹಾಮ್ ವಾಕರ್‌ಗೆ ಹಲವರು ರೆಸ್ಯೂಮ್ ಕಳುಹಿಸಿದ್ದಾರೆ. ಇದೇ ವೇಳೆ ಯಾವುದೇ ಕಂಪನಿ ಆರಂಭಿಸಿದರೆ, ಬೇರೆ ಕಂಪನಿ ಬಾಸ್ ಆಗಿ ಜವಾಬ್ದಾರಿ ವಹಿಸಿಕೊಂಡರೆ ಈ ರೆಸ್ಯೂಮ್ ಪರಿಗಣಿಸಲು ಹಲವರು ಇಮೇಲ್ ಮಾಡಿದ್ದಾರೆ.

ಗ್ರಹಾಮ್ ವಾಕರ್‌ಗೆ ಬಂದಿದೆ ಸಾವಿರಾರು ರೆಸ್ಯೂಮ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories