ಪರ್ಸನಲ್ ಲೋನ್ ಮರುಪಾವತಿ ಮುನ್ನವೇ ಮೃತಪಟ್ಟರೆ ಬ್ಯಾಂಕ್ ನಿಯಮವೇನು?

Published : Dec 27, 2025, 09:58 PM IST

ಪರ್ಸನಲ್ ಲೋನ್ ಮರುಪಾವತಿ ಮುನ್ನವೇ ಮೃತಪಟ್ಟರೆ ಬ್ಯಾಂಕ್ ನಿಯಮವೇನು?, ವೈಯುಕ್ತಿಕ ಸಾಲ ಪಡೆಯುವ ಪ್ರತಿಯೊಬ್ಬರು ಕೆಲ ದಾಖಲೆಗಳಿಗೆ ಸಹಿ ಮಾಡಬೇಕು. ಆದರೆ ಷರತ್ತುಗಳು ಯಾವುದು ಅನ್ನೋ ಮಾಹಿತಿ ಇರುವುದಿಲ್ಲ.

PREV
16
ಪರ್ಸನಲ್ ಲೋನ್ ಷರತ್ತು

ಪರ್ಸನಲ್ ಲೋನ್ ಹಲವರಿಗೆ ಬದುಕಿನಲ್ಲಿ ಅಗತ್ಯ ಬೀಳುತ್ತದೆ. ವೇತನದ ಆಧಾರದ ಮೇಲೆ ಸೇರಿದಂತೆ ಇತರ ಆಧಾರದಲ್ಲಿ ವೈಯುಕ್ತಿಕ ಸಾಲಗಳನ್ನು ಬ್ಯಾಂಕ್ ನೀಡುತ್ತದೆ. ಗೃಹ ಸಾಲ ಸೇರಿದಂತೆ ಇತರ ಸಾಲಗಳಗಿಂತ ಸುಲಭವಾಗಿ ವೈಯುಕ್ತಿಕ ಸಾಲ ಲಭ್ಯವಾಗುತ್ತದೆ. ಆದರೆ ಪರ್ಸನಲ್ ಲೋನ್ ಪಡೆದ ವ್ಯಕ್ತಿ ಮರುಪಾವತಿಗೂ ಮೊದಲೇ ಮೃತಪಟ್ಟರೆ ಲೋನ್ ಕತೆ ಏನು?

26
ವ್ಯಕ್ತಿ ಮೃತಪಟ್ಟರೆ ಸಾಲದ ಕತೆ ಏನು?

ಪರ್ಸನಲ್ ಲೋನ್ ಅವಶ್ಯಕತೆ ಬದುಕಿನ ಅತ್ಯಂತ ಸಂದಿಗ್ದ ಪರಿಸ್ಥಿತಿ, ಕಷ್ಟದ ಸಮಯದಲ್ಲೇ ತೆಗೆದುಕೊಂಡಿರುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಪರ್ಸನಲ್ ಲೋನ್ ಪರಿಸ್ಥಿತಿ ಏನು? ಬ್ಯಾಂಕ್ ನಿಯಮದ ಪ್ರಕಾರ, ಪರ್ಸನಲ್ ಲೋನ್‌ಗೆ ಯಾರು ಗ್ಯಾರೆಂಟಿ ನೀಡಿದವರು, ಅಥವಾ ಸಹ ಅರ್ಜಿದಾರರು ಈ ಸಾಲಕ್ಕೆ ಭಾದ್ಯರಾಗಿತ್ತಾರೆ.

36
ಯಾರೂ ಇಲ್ಲದಿದ್ದರೆ?

ಸಾಲದ ಪಡೆದ ವ್ಯಕ್ತಿ ಮೃತಪಟ್ಟರೆ, ಸಾಲಕ್ಕೆ ಗ್ಯಾರೆಂಟಿ ನೀಡಿದವರು ಅಥವಾ ಕೋ ಆ್ಯಪ್ಲಿಕೇಂಟ್ ಈ ಸಾಲ ಮರುಪಾವತಿ ಮಾಡಬೇಕು. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತಪಟ್ಟಾಗ, ಗ್ಯಾರೆಂಟಿ ನೀಡಿದವರೂ, ಅಥವಾ ಕೋ ಆ್ಯಪ್ಲಿಕೆಂಟ್ ಯಾರೂ ಇಲ್ಲದಿದ್ದರೆ ಅವರ ಆಸ್ತಿಯಿಂದ , ವಸ್ತುಗಳಿಂದ ಸಾಲ ಮರುಪಾವತಿಸಲು ಬ್ಯಾಂಕ್ ಪ್ರಕ್ರಿಯೆ ನಡೆಸಲಿದೆ.

46
ಸಂಬಂಧಿಕರಿಗೆ ಸಂಬಂಧವಿಲ್ಲ

ಸಾಲ ಪಡೆಯುವಾಗ ಗ್ಯಾರೆಂಟಿ ನೀಡಿದವರು ಅಥವಾ ಕೋ ಆ್ಯಪ್ಲಿಕೆಂಟ್ ಮಾತ್ರ ಸಾಲ ಮಾರುಪವಾತಿ ಭಾದ್ಯಸ್ಥರು. ಸಾಲ ಪಡೆಯುವಾಗ ಸಂಬಂಧಿಕರು, ಮಕ್ಕಳು, ಪೋಷಕರು ಸಾಲದ ಅರ್ಜಿಯಲ್ಲಿ ಸಹಿ ಹಾಕಿದ್ದರೆ ಮಾತ್ರ ಅವರೂ ಸಾಲ ಮರುಪಾವತಿಸಲು ಬಾಧ್ಯಸ್ಥರಾಗಿತ್ತಾರೆ.

56
ಸಾಲದ ವೇಳೆ ವಿಮೆ ಕಡ್ಡಾಯ

ವೈಯುಕ್ತಿತ ಸಾಲ ಮರುಪಾವತಿ ವೇಳೆ ವ್ಯಕ್ತಿ ಮೃತಪಟ್ಟರೆ, ಮರುಪಾವತಿ ಸವಾಲು ಕೋರ್ಟ್ ಮೆಟ್ಟಿಲು ಹತ್ತಿ ಬ್ಯಾಂಕ್‌ಗೆ ನಷ್ಟವಾಗುತ್ತಿರುವ ಕಾರಣ ಆರ್‌ಬಿಐ ಮಾರ್ಗಸೂಚಿಯಂತೆ ಇದೀಗ ಎಲ್ಲಾ ವೈಯುಕ್ತಿಕ ಸಾಲ ಪಡೆಯುವಾಗ ವಿಮೆ ಕಡ್ಡಾಯವಾಗಿದೆ. ನಿರ್ದಿಷ್ಟ ಮೊತ್ತ ವಿಮೆ ಗಾಗಿ ಆರಂಭದಲ್ಲೇ ಸಾಲದ ಮೊತ್ತದಲ್ಲಿ ಕಡಿತಗೊಳ್ಳಲಿದೆ.

ಸಾಲದ ವೇಳೆ ವಿಮೆ ಕಡ್ಡಾಯ

66
ವಿಮೆಯಿಂದ ಬಾಕಿ ಹಣ ಪಾವತಿ

ಸಾಲದ ವೇಳೆ ವಿಮೆ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಸಾಲದ ಪಡೆದ ವ್ಯಕ್ತಿ ಮೃತಪಟ್ಟರೆ, ಮರಣ ಪ್ರಮಾಣ ಪತ್ರ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿದರೆ ಬ್ಯಾಂಕ್ ವಿಮೆಯ ಕ್ಲೈಮ್ ಮಾಡಲಿದೆ. ಈ ಮೂಲಕ ಬಾಕಿ ಸಾಲದ ಮೊತ್ತ ವಿಮೆ ಮೂಲಕ ಮರುಪಾವತಿಯಾಗಲಿದೆ. ಇದರಿಂದ ಕುಟುಂಬಕ್ಕೆ ಹೊರೆಯಾಗುವುದಿಲ್ಲ, ಜೊತೆಗೆ ಬ್ಯಾಂಕ್‌ಗೂ ನಷ್ಟವಾಗುವುದಿಲ್ಲ.

ವಿಮೆಯಿಂದ ಬಾಕಿ ಹಣ ಪಾವತಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories