ಬಾಳೆ ಎಲೆಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದ್ದು, ಇದು ಕೋಟಿ ಗಳಿಸುವ ಉದ್ಯಮವಾಗಿ ಬೆಳೆಯುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಈ ವ್ಯವಹಾರವು, ರಫ್ತುದಾರರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡಬಲ್ಲದು. ಈ ಉದ್ಯಮವನ್ನು ಹೇಗೆ ಪ್ರಾರಂಭಿಸಬೇಕು ಎಂಬ ಡಿಟೇಲ್ ಇಲ್ಲಿದೆ.
ಭಾರತೀಯ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮಾರು ಹೋದರೆ ಇತ್ತ ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಭಾರತೀಯರು ಪರಿಸರ ಸ್ನೇಹಿಯಾದ ಬಾಳೆ ಎಲೆ ಊಟ ಬಿಟ್ಟು ತಟ್ಟೆ ಪ್ಲೇಟುಗಳನ್ನು ಹಿಡಿದಿದ್ದರೆ ಇತ್ತ ವಿದೇಶಿಗರು ಬಾಳೆ ಎಲೆಯೂಟದತ್ತ ಆಕರ್ಷಿತರಾಗುತ್ತಿದ್ದಾರೆ. ಪರಿಸರ ಸ್ನೇಹಿಯೂ ಆಗಿರುವ ಈ ಬಾಳೆ ಎಲೆಯನ್ನು ಪ್ಯಾಕಿಂಗ್ ಮಾಡುವುದಕ್ಕೂ ಬಳಸಲಾಗುತ್ತದೆ. ಹೀಗಾಗಿ ಈಗ ಈ ಬಾಳೆ ಎಲೆ ವ್ಯವಹಾರವೂ ಕೋಟಿ ಗಳಿಸುವ ವ್ಯವಹಾರವಾಗಿ ಬದಲಾಗಿದೆ. ಭಾರತ ಇದನ್ನು ವೇಸ್ಟ್ ಎಂದು ಎಸೆದರೆ ವಿದೇಶ ಈ ಬಾಳೆ ಎಲೆಗೆ ಕೋಟಿ ರೂಪಾಯಿಗಳನ್ನು ಪಾವತಿ ಮಾಡುವುದಕ್ಕೆ ಸಿದ್ಧವಾಗಿದೆ.
26
ಕಡಿಮೆ ಹೂಡಿಕೆಯೊಂದಿಗೆ ಸುಲಭವಾಗಿ ಮಾಡಬಹುದಾದ ಬಾಳೆ ಎಲೆ ಉದ್ಯಮ
ಒಂದು ಕಾಲದಲ್ಲಿ ಇಲ್ಲಿ ಸಂಪ್ರದಾಯಿಕ ಊಟ ಹಾಗೂ ಹಸುಗಳ ಮೇವಾಗಿ ಮಾತ್ರ ಪರಿಗಣಿಸಲಾಗುತ್ತಿದ್ದ ಬಾಳೆ ಎಲೆಗಳನ್ನು ಈಗ ಯುಎಇ, ಸಿಂಗಾಪುರ, ಯುಎಸ್ ಮತ್ತು ಯುರೋಪ್‌ನಾದ್ಯಂತ ಹಲವು ದೇಶಗಳಿಗೆ ಪರಿಸರ ಸ್ನೇಹಿ ಪ್ಯಾಕೇಜಿಂಗ್ ವಸ್ತುವಾಗಿ ಪರಿಸರ ಪ್ಯಾಕೇಜಿಂಗ್ ವಸ್ತುವಾಗಿ ರಫ್ತಾಗುತ್ತಿದೆ. ನಿಮ್ಮ ಹಿತ್ತಲಿನಲ್ಲಿಯೇ ಇರುವ ಸಣ್ಣ ಜಾಗದಲ್ಲಿ ಮಾಡಬಹುದಾದ ಈ ಸುಲಭ ಉದ್ಯಮದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
36
ಬಾಳೆ ಎಲೆಗೆ ಬೇಡಿಕೆ ಹೆಚ್ಚಾಗಲು ಕಾರಣ ಏನು
ಬಾಳೆ ಎಲೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ. ಬಾಳೆ ಎಲೆಯನ್ನು ಜನ ಇಷ್ಟಪಡುವುದಕ್ಕೆ ಹಾಗೂ ಅದರ ಬೇಡಿಕೆ ಹೆಚ್ಚಾಗುವುದಕ್ಕೆ ಕಾರಣ ಹಲವಿದೆ. ಒಂದು ಕಡೆ ಪರಿಸರದ ಉಳಿವಿಗಾಗಿ ಹಲವು ದೇಶಗಳಲ್ಲಿ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗುತ್ತಿದೆ. ಹೀಗಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಪ್ಯಾಕೇಜಿಂಗ್ ಮಾಡುವುದಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಗೆ ನೈರ್ಮಲ್ಯತೆ, ಬಾಳೆ ಎಲೆಯ ಬ್ಯಾಕ್ಟೀರಿಯಾ ವಿರೋಧಿ ಮೇಲ್ಮೈ, ಶಾಖ ಮತ್ತು ನೀರು ನಿರೋಧಕವಾಗಿರುವುದು, ಸಸ್ಯಾಹಾರಿ, ಏಷ್ಯನ್ ಮತ್ತು ಸಾಂಸ್ಕೃತಿಕ ಪಾಕ ಪದ್ಧತಿಗಳಲ್ಲಿ ಜನಪ್ರಿಯವಾಗಿರುವ ಕಾರಣ ಬಾಳೆ ಎಲೆಗಳಿಗೆ ಬೇಡಿಕೆ ಆಗಾಧವಾಗಿ ಹೆಚ್ಚಾಗುತ್ತಿದೆ.
ರೆಸ್ಟೋರೆಂಟ್‌ಗಳು, ಅಡುಗೆ ಮತ್ತು ಸಿದ್ಧ ಊಟಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಸಿಂಗಾಪುರ, ಯುಎಸ್ಎ, ದಕ್ಷಿಣ ಕೊರಿಯಾ, ಯುಎಇ,
ಕತಾರ್ ಮುಂತಾದ ದೇಶಗಳಿಂದ ಇವುಗಳಿಗೆ ವ್ಯಾಪಕ ಬೇಡಿಕೆ ಇದ್ದು ನಮ್ಮ ದೇಶದಿಂದ ರಫ್ತಾಗುತ್ತಿದೆ. ಭಾರತವು ಬಾಳೆಯನ್ನು ಉತ್ಪಾದಿಸುವ ಅತೀ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಇಲ್ಲಿ ಕಚ್ಚಾ ವಸ್ತು ಹೇರಳ ಹಾಗೂ ಅಗ್ಗವಾಗಿ ದೊರೆಯುತ್ತದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಕರ್ನಾಟಕದ ಈ ಬಾಳೆ ಎಲೆಯ ಅಗಾಧ ಮೂಲವಾಗಿದೆ. ಸಾಮಾನ್ಯವಾಗಿ ರೈತರು ಎಲೆಗಳನ್ನು ಬಿಸಾಡುತ್ತಾರೆ. ಆದರೆ ರಫ್ತುದಾರರು ಅವುಗಳನ್ನು ಬಹಳ ಕಡಿಮೆ ಬೆಲೆಗೆ ಖರೀದಿ ಮಾಡುತ್ತಾರೆ.
56
ಸಣ್ಣದಾಗಿ ಉದ್ಯಮ ಪ್ರಾರಂಭಿಸಿ. ದೊಡ್ಡ ಮಟ್ಟದಲ್ಲಿ ಬೆಳೆಯಿರಿ.
ಆರಂಭದಲ್ಲಿ ಈ ಉದ್ಯಮಕ್ಕೆ ನೀವು ರೂಪಾಯಿ 50,000 ದಿಂದ 1,50,000 ದವರೆಗೆ ಹೂಡಿಕೆ ಮಾಡಬೇಕಾಗಿ ಬರಬಹುದು. ಇದಕ್ಕಾಗಿ ನೀವು ಕತ್ತರಿಸುವ ಉಪಕರಣಗಳು, ಸಂಸ್ಕರಣಾ ಸೆಟಪ್, ಪ್ಯಾಕೇಜಿಂಗ್ ಮತ್ತು ಸಾಗಣೆ ವೆಚ್ಚವನ್ನು ಸಿದ್ಧಪಡಿಸಬೇಕು.
ಮಾರಾಟದ ಬೆಲೆ ಎಷ್ಟಿದೆ?
ಹಸಿ ಎಲೆಗಳಿಗೆ ಕೇಜಿಗೆ 20 ರಿಂದ 60 ರೂಪಾಯಿ ನೀಡಲಾಗುತ್ತದೆ. ಹಾಗೆಯೇ ಸಂಸ್ಕರಿಸಿದ ರಫ್ತು ಮಾಡುವಂತಹ ಗುಣಮಟ್ಟದ ಎಲೆಗಳಿಗೆ ಕೇಜಿಗೆ ರೂಪಾಯಿ 80 ರಿಂದ 200 ರೂ ಇದೆ. ಈ ಉದ್ಯಮದಿಂದ ನೀವು ಸಣ್ಣ ರಫ್ತುದಾರರಾಗಿ ಮಾಸಿಕವಾಗಿ 25,000 ದಿಂದ 80,000 ದವರೆಗೆ ಗಳಿಕೆ ಮಾಡಬಹುದು. ಹಾಗೆಯೇ 2 ರಿಂದ 3 ಜನ ಖರೀದಿದಾರರಿಗೆ ನೀವು ನೀಡಿದರೆ ತಿಂಗಳಿಗೆ 1 ರಿಂದ 2 ಲಕ್ಷದವರೆಗೆ ಆದಾಯ ಮಾಡಬಹುದಾಗಿದೆ.
66
ಉದ್ಯಮವನ್ನು ಆರಂಭಿಸುವುದು ಹೇಗೆ
ಇಲ್ಲಿ ಆರಂಭದಿಂದ ಹೊಸದಾಗಿ ಈ ಉದ್ಯಮ ಆರಂಭಿಸುವವರಿಗಾಗಿ 5 ಹಂತದ ಮಾರ್ಗದರ್ಶನವನ್ನು ನೀಡಲಾಗಿದೆ.
ಮೊದಲನೇಯದಾಗಿ ಬಾಳೆ ಎಲೆಯ ಮೂಲ, ಮೊದಲಿಗೆ ಎಲೆಯನ್ನು ನೀಡುವ ರೈತರು ಹಾಗೂ ಅವರ ತೋಟಗಳ ಜೊತೆ ವ್ಯವಹಾರ ಕುದುರಿಸಿಕೊಳ್ಳಿ, ನೀವು ರೈತರೇ ಆಗಿದ್ದಲ್ಲಿ ಬೇರೆ ರೈತರಿಂದಲೂ ಎಲೆಯನ್ನು ಖರೀದಿಸಿ.
2ನೇಯದಾಗಿ ರೈತರಿಂದ ಖರೀದಿಸಿದ ಎಲೆಗಳನ್ನು ತೊಳೆದು, ಸಂಸ್ಕರಿಸಿ ಒತ್ತಿರಿ
3ನೇಯದಾಗಿ ತೇವಾಂಶ ರಹಿತವಾದ ಹಾಳೆಗಳಲ್ಲಿ ಪ್ಯಾಕ್ ಮಾಡಿ
4ನೇಯದಾಗಿ ಆಮದುದಾರ ಹಾಗೂ ರಫ್ತುದಾರರ ಕೋಡ್ (The Importer Exporter Code)ಪಡೆಯಿರಿ. ಹಾಗೆಯೇ ಎಪಿಇಡಿಎ ಎಂದರೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ನೋಂದಣಿ ಮಾಡಿಸಿಕೊಳ್ಳಿ.
ಕೊನೆಯದಾಗಿ ಇಂಡಿಯಾಮಾರ್ಟ್( IndiaMART) ಅಲಿಬಾಬಾ( Alibaba), ಟ್ರೇಡ್ ಇಂಡಿಯಾ (TradeIndia) ಮುಂತಾದ ಆನ್‌ಲೈನ್ ವ್ಯವಹಾರ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಅಥವಾ ಖರೀದಿದಾರರನ್ನು ನೇರವಾಗಿ ಸಂಪರ್ಕಿಸಿ.
ಇಷ್ಟು ಮಾಡಿದರೆ ಈ ಪರಿಸರ ಸ್ನೇಹಿ ವ್ಯವಹಾರವು ನಿಮಗೆ ಕೈತುಂಬಾ ಆದಾಯದ ಜೊತೆಗೆ ನೆಮ್ಮದಿಯ ಬದುಕು ನೀಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.