2026ರಲ್ಲಿ ಭಾರತದ ಗರಿಷ್ಠ ವೀವ್ಸ್ ಯೂಟ್ಯೂಬ್ ಚಾನೆಲ್ AI ಜನರೇಟೆಡ್, ಈ ವರ್ಷ 38 ಕೋಟಿ ಆದಾಯ

Published : Dec 30, 2025, 07:19 PM IST

2026ರಲ್ಲಿ ಭಾರತದ ಗರಿಷ್ಠ ವೀವ್ಸ್ ಯೂಟ್ಯೂಬ್ ಚಾನೆಲ್ AI ಜನರೇಟೆಡ್, ಈ ವರ್ಷ 38 ಕೋಟಿ ಆದಾಯ, ಈ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ಎಲ್ಲಾ ವಿಡಿಯೋ ಎಐ ಜನರೇಟೆಡ್ ವಿಡಿಯೋ. ಆದರೆ ಆದಾಯ ಮಾತ್ರ ಚಿಂದಿ. 

PREV
16
ಈ ವರ್ಷದ ಯೂಟ್ಯೂಬ್ ಲೆಕ್ಕಾಚಾರ

2025ರಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ನಿಮಗೆ ಏನೂ ಮಾಡಿದರೂ ನಿರೀಕ್ಷಿತ ಲೈಕ್ಸ್, ವೀವ್ಸ್ ಬಂದಿಲ್ವಾ? ನಿಮ್ಮ ವಿಡಿಯೋಗೆ ಆದಾಯವೂ ಬರುತ್ತಿಲ್ಲ ಎಂದು ಸರ್ಕಸ್ ಮಾಡುತ್ತೀದ್ದೀರಾ? ಆದರೆ ಈ ವರ್ಷ ಹಲವು ಸಮೀಕ್ಷೆಗಳ ಪೈಕಿ ಇದೀಗ ವಿಡಿಯೋ ಎಡಿಟಿಂಗ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಯೂಟ್ಯೂಬ್ ಕುರಿತು ಸ್ಫೋಟಕ ಮಾಹಿತಿ ಬಯಲಾಗಿದೆ. ಈ ವರ್ಷ ಅತೀ ಹೆಚ್ಚು ವೀವ್ಸ್, ಲೈಕ್ಸ್ ಪಡೆದು ಸಂಚಲನ ಸೃಷ್ಟಿಸಿದ ಯೂಟ್ಯೂಬ್‌ನ ಬಹುತೇಕ ಚಾನೆಲ್‌ನ ವಿಡಿಯೋಗಳು ಎಐ ಜನರೇಟೆಡ್

26
ಬಂದರ್ ಅಪ್ನಾ ದೋಸ್ತ್

ಕ್ಯಾಪ್‌ವಿಂಗ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಚ್ಚರಿ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿ ಗರಿಷ್ಠ ವೀವ್ಸ್ ಪಡೆದು ಗರಿಷ್ಠ ಆದಾಯ ಗಳಿಸಿದ ಯೂಟ್ಯೂಬ್ ತಾನೆಲ್ ಬಂದರ್ ಅಪ್ನಾ ದೋಸ್ತ್. ಇದು ಸಂಪೂರ್ಣ ಎಐ (ಆರ್ಟಿಫೀಶಿಯಲ್ ಇಂಟಲಿಜೆನ್ಸ್) ಯೂಟ್ಯೂಬ್ ವಿಡಿಯೋಗಳು.

36
ಈ ವರ್ಷ 38 ಕೋಟಿ ರೂಪಾಯಿ ಆದಾಯ

ಬಂದರ್ ಅಪ್ನಾ ದೋಸ್ತ್ ಚಾನೆಲ್‌ನಲ್ಲಿನ ಎಲ್ಲಾ ವಿಡಿಯೋಗಲು ಎಐ ಜನರೇಟೆಡ್ ವಿಡಿಯೋಗಳು. ಈ ವರ್ಷ ಬಂದರ್ ಅಪ್ನಾ ದೋಸ್ತ್ ವಿಡಿಯೋಗಳು ಬರೋಬ್ಬರಿ 207 ಕೋಟಿ ವೀವ್ಸ್ ಪಡೆದಿದೆ. ಈ ಮೂಲಕ ಈ ವರ್ಷ ಬರೋಬ್ಬರಿ 38 ಕೋಟಿ ರೂಪಾಯಿ ಆದಾಯ ಪಡೆದಿದೆ. ಈ ಮೂಲಕ ಎಐ ಜನರೇಟೆಡ್ ವಿಡಿಯೋ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

46
15 ಸಾವಿರ ಯೂಟ್ಯೂಬ್ ಚಾನೆಲ್ ಸಮೀಕ್ಷೆ

ಸಮೀಕ್ಷೆಯಲ್ಲಿ ಅತೀ ಜನಪ್ರಿಯ, ಗರಿಷ್ಠ ಫಾಲೋವರ್ಸ್ , ವೀವ್ಸ್ ಇರುವ ವಿಶ್ವದ 15,000 ಯೂಟ್ಯೂಬ್ ಚಾನೆಲ್ ಸಮೀಕ್ಷೆ ಒಳಪಡಿಸಲಾಗಿತ್ತು. ಇದರಲ್ಲಿ ಪ್ರತಿ ದೇಶದ ಟಾಪ್ 100 ಯೂಟ್ಯೂಬ್ ಚಾನೆಲ್ ಪರಿಗಣಿಸಲಾಗಿತ್ತು. ವಿಶೇಷ ಅಂದರೆ ವಿಶ್ವದ ಟಾಪ್ ಚಾನೆಲ್ ಪೈಕಿ 278 ಯೂಟ್ಯೂಬ್ ಚಾನೆಲ್ ಓಡುತ್ತಿರುವುದು ಸಂಪೂರ್ಣವಾಗಿ ಎಐ ಜನರೇಟೆಡ್ ವಿಡಿಯೋ ಮೂಲಕ ಅನ್ನೋದು ಬಯಲಾಗಿದೆ.

56
ಭಾರತದ ದೋಸ್ತ್ ಚಾನೆಲ್

ಬಂದರ್ ಅಪ್ನಾ ದೋಸ್ತ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೋತಿಗಳು ಮನುಷ್ಯರಂತೆ ಸೆಲ್ಫಿ ಸ್ಟಿಕ್ ಹಿಡಿದು, ದೇವಸ್ಥಾನ ದರ್ಶನ ಮಾಡುತ್ತಿರುವ, ಅಥವಾ ಸಾಮಾಜಿಕ ವಿಚಾರಗಳನ್ನು ಅತ್ಯಂತ ಹಾಸ್ಯವಾಗಿ, ವಿಡಂಬನೆಯಾಗಿ ಹೇಳುವ ಈ ವಿಡಿಯೋವನ್ನು ಅತೀವ ಇಷ್ಟಪಟ್ಟಿದ್ದಾರೆ.

ಭಾರತದ ದೋಸ್ತ್ ಚಾನೆಲ್

66
ಯೂಟ್ಯೂಬರ್ ಲೆಕ್ಕಾಚರ ಬದಲಿಸಿದ 2025

2025ರ ಸಾಲು ಯೂಟ್ಯೂಬರ್ ಲೆಕ್ಕಾಚಾರ ಬದಲಿಸಿದೆ. ಕಂಟೆಡ್ ಕ್ರಿಯೇಟ್‌ಗಾಗಿ ಊರೂರು ಅಲೆದಾಡಿ , ಬಿಸಿಲು, ಮಳೆ, ಚಳಿಯಲ್ಲಿ ವಿಡಿಯೋ ಶೂಟ್ ಮಾಡಿ ಎಡಿಟ್ ಮಾಡಿ ಪ್ರಯಾಸ ಪಟ್ಟವರಿಗಿಂತ ಎಐ ಮೂಲಕ ವಿಡಿಯೋ ಸೃಷ್ಟಿಸಿ, ಅತ್ಯಂತ ಕ್ರಿಯೇಟೀವ್ ಆಗಿ ವಿಡಿಯೋ ಮಾಡಿದವರೇ ಹೆಚ್ಚು ಆದಾಯಗಳಿಸುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.

ಯೂಟ್ಯೂಬರ್ ಲೆಕ್ಕಾಚರ ಬದಲಿಸಿದ 2025

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories