ಸೋಶಿಯಲ್ ಮೀಡಿಯಾಗಳು ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಹಣ ಸಂಪಾದನೆಗೆ ದೊಡ್ಡ ಮೂಲವಾಗಿದೆ. ಯುವಕರು 9 -6 ಗಂಟೆ ಜಾಬ್ ಬಿಟ್ಟು ಸೋಶಿಯಲ್ ಮೀಡಿಯಾಗಳಲ್ಲಿ ಕಂಟೆಂಟ್ ಹಾಕಿ ಹಣ ಗಳಿಸ್ತಿದ್ದಾರೆ. ಯೂಟ್ಯೂಬ್ ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಎಷ್ಟು ಹಣ ಗಳಿಸ್ಬಹುದು ಗೊತ್ತಾ?
ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ, ಸಬ್ಸ್ಕ್ರೈಬ್ ಹಾಗೂ ವೀವ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳೋದು ಮಾತ್ರ ಮುಖ್ಯವಲ್ಲ. ಯೂಟ್ಯೂಬ್ ಪಾಲುದಾರ ಕಾರ್ಯಕ್ರಮಕ್ಕೆ (YPP) ಸೇರಬೇಕಾಗುತ್ತದೆ. ಆಗ ಮಾತ್ರ ನಿಮ್ಮ ವಿಡಿಯೋಗಳಲ್ಲಿ ಆಡ್ ಪ್ರಸಾರವಾಗುತ್ತೆ. ಇದ್ರಿಂದ ಆದಾಯ ಗಳಿಸ್ಬಹುದು. ಯೂಟ್ಯೂಬರ್ ಇದಕ್ಕೆ ಸಂಬಂಧಿಸಿದ ಕೆಲ ನಿಯಮಗಳನ್ನು ಪಾಲಿಸಬೇಕು.
25
ಕಂಟೆಂಟ್ ಕ್ರಿಯೇಟರ್ಸ್ ಗೆ ಬಟನ್
ಯೂಟ್ಯೂಬ್, ಕಂಟೆಂಟ್ ಕ್ರಿಯೇಟರ್ಸ್ ಗೆ ಅವರ ಸಬ್ಸ್ಕ್ರೈಬ್, ವೀವ್ಸ್ ಆಧಾರದ ಮೇಲೆ ಬಟನ್ ಗಳನ್ನು ನೀಡುತ್ತದೆ. ಸಿಲ್ವರ್ ಪ್ಲೇ ಬಟನ್, ಗೋಲ್ಡ್ ಪ್ಲೇ ಬಟನ್, ಡೈಮಂಡ್ ಪ್ಲೇ ಬಟನ್, ರೂಬಿ ಪ್ಲೇ ಬಟನ್ ಹಾಗೂ ಕಸ್ಟಮ್ ಪ್ಲೇ ಬಟನ್ ಗಳು ಲಭ್ಯವಿದೆ. ಬಟನ್ ಗೆ ತಕ್ಕಂತೆ ನಿಮ್ಮ ಆದಾಯದಲ್ಲಿ ಬದಲಾವಣೆಯಾಗುತ್ತದೆ.
35
ಯಾರಿಗೆ ಸಿಗುತ್ತೆ ಯಾವ ಬಟನ್
ಯೂಟ್ಯೂಬ್ ನಲ್ಲಿ 1 ಲಕ್ಷ ಸಬ್ಸ್ಕ್ರೈಬರ್ ಹೊಂದಿದ್ರೆ ನಿಮಗೆ ಸಿಲ್ವರ್ ಪ್ಲೇ ಬಟನ್ ಸಿಗುತ್ತದೆ. 10 ಲಕ್ಷ ಸಬ್ಸ್ಕ್ರೈಬರ್ ತಲುಪಿದಾಗ ಗೋಲ್ಡ್ ಪ್ಲೇ ಬಟನ್, 1 ಕೋಟಿ ಸಬ್ಸ್ಕ್ರೈಬರ್ ತಲುಪಿದಾಗ ಡೈಮಂಡ್ ಪ್ಲೇ ಬಟನ್ ಮತ್ತು 5 ಕೋಟಿ ಸಬ್ಸ್ಕ್ರೈಬರ್ ತಲುಪಿದಾಗ ರೂಬಿ ಅಥವಾ ಕಸ್ಟಮ್ ಪ್ಲೇ ಬಟನ್ ಸಿಗುತ್ತದೆ.
ನೀವು ಯೂಟ್ಯೂಬ್ ಚಾನೆಲ್ ನಡೆಸ್ತಾ ಇದ್ದು, ನಿಮ್ಮ ಚಾನೆಲ್ ನಲ್ಲಿ 10 ಲಕ್ಷ ಸಬ್ಸ್ಕ್ರೈಬರ್ ಇದ್ದಾರೆ ಅಂದ್ರೆ ಯೂಟ್ಯೂಬ್ ನಿಮಗೆ ಗೋಲ್ಡನ್ ಪ್ಲೇ ಬಟನ್ ನೀಡುತ್ತದೆ. ಜೊತೆಗೆ ನಿಮ್ಮ ಆದಾಯ ಏರಿಕೆಯಾಗುತ್ತದೆ. ಯೂಟ್ಯೂಬರ್ , ವಿಡಿಯೋದಲ್ಲಿ ಪ್ರಸಾರ ಆಗುವ ಜಾಹೀರಾತು 1,000 ವೀವ್ಸ್ ಪಡೆದಾಗ 2 ಡಾಲರ್ ಸಂಪಾದನೆ ಮಾಡುತ್ತಾರೆ. ಗೋಲ್ಡನ್ ಬಟನ್ ಪಡೆದ ನಂತ್ರ ನೀವು ನಿಯಮಿತವಾಗಿ ವೀಡಿಯೊಗಳನ್ನು ಅಪ್ಲೋಡ್ ಮಾಡಿದರೆ ಮತ್ತು ಉತ್ತಮ ವೀವ್ಸ್ ಪಡೆಯುತ್ತಿದ್ದರೆ ವಾರ್ಷಿಕವಾಗಿ ಸುಮಾರು 40 ಲಕ್ಷ ಹಣ ಸಂಪಾದನೆ ಮಾಡಬಹುದು. ಇದಲ್ಲದೆ ಕೆಲ ಕಂಪನಿಗಳ ಜೊತೆ ಟೈ ಅಪ್ ಮಾಡ್ಕೊಂಡು, ನೀವೇ ಜಾಹೀರಾತು ನೀಡಿ ಹಣ ಗಳಿಸಬಹುದು.
55
ಯೂಟ್ಯೂಬ್ ಸಂಪಾದನೆಗೆ ಟ್ಯಾಕ್ಸ್
ಭಾರತದಲ್ಲಿ ಯೂಟ್ಯೂಬ್ ಗಳಿಕೆಗೆ ಆದಾಯ ತೆರಿಗೆ ನಿಯಮಗಳು ಅನ್ವಯಿಸುತ್ತವೆ. ವಾರ್ಷಿಕ ಆದಾಯ 2.5 ಲಕ್ಷದವರೆಗಿದ್ದರೆ ತೆರಿಗೆ ಅನ್ವಯಿಸುವುದಿಲ್ಲ. 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ತೆರಿಗೆ ಪದ್ಧತಿಯಲ್ಲಿ ಶೇಕಡಾ 5 ರಷ್ಟು ತೆರಿಗೆ ವಿಧಿಸಲಾಗುತ್ತದೆ. 5 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇಕಡಾ 20 ರಷ್ಟು ತೆರಿಗೆ ಅನ್ವಯಿಸುತ್ತದೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ಅನ್ವಯಿಸುತ್ತದೆ. ಅಂದಾಜಿನ ಪ್ರಕಾರ ಗೋಲ್ಡನ್ ಬಟನ್ ಹೊಂದಿರುವ ಚಾನಲ್ ವಾರ್ಷಿಕವಾಗಿ 40 ಲಕ್ಷ ಆದಾಯ ಗಳಿಸಿದ್ರೆ ಸುಮಾರು 12 ಲಕ್ಷ ತೆರಿಗೆ ಪಾವತಿ ಮಾಡ್ಬೇಕು.