ಟ್ಯಾಕ್ಸ್ ಸ್ಲ್ಯಾಬ್ ಬದಲಾಗದಿದ್ದರೂ ಸಣ್ಣ ತೆರಿಗೆದಾರರಿಗೆ 10 ಲಾಭ!

First Published Feb 2, 2021, 5:16 PM IST

ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಮಾಡಿಲ್ಲದಿರಬಹುದು. ಆದಾಗ್ಯೂ ಸಣ್ಣ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಕೆಲವೊಂದು ಅಂಶಗಳು ಈ ಬಜೆಟ್‌ನಲ್ಲಿ ಇವೆ ಎನ್ನುತ್ತಾರೆ ತೆರಿಗೆ ತಜ್ಞರು. ಅವುಗಳೆಂದರೆ

ಪಿಂಚಣಿ, ಬಡ್ಡಿ ಆದಾಯದ ಮೇಲಷ್ಟೆ ಅವಲಂಬಿತರಾಗಿರುವ 75 ವಯಸ್ಸು ಮೀರಿದ ವ್ಯಕ್ತಿಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಿಲ್ಲ
undefined
ನೌಕರರಿಂದ ಸಾಮಾಜಿಕ ಭದ್ರತಾ ನಿಧಿ ಕಡಿತಗೊಳಿಸಿ ಸಕಾಲಕ್ಕೆ ಠೇವಣಿ ಮಾಡದ ಕಂಪನಿಗಳಿಗೆ ತೆರಿಗೆ ವಿನಾಯಿತಿ ದೊರೆಯದು
undefined
ಮೂರು ವರ್ಷಕ್ಕಿಂತ ಹಳೆಯ ತೆರಿಗೆ ಅಸೆಸ್ ಮೆಂಟ್‌ಗಳ ಮರುಪರಿಶೀಲನೆ ಇನ್ನು ನಡೆಯಲ್ಲ.
undefined
ಸಣ್ಣ ತೆರಿಗೆದಾರರಿಗೆ ಅಧಿಕಾರಿಗಳ ಜತೆ ಮುಖಾಮುಖಿಯಾಗದಂತಹ (ಫೇಸ್‌ಲೆಸ್) ಪಾರದರ್ಶಕ ವ್ಯಾಜ್ಯ ಇತ್ಯರ್ಥ ಸಮಿತಿ
undefined
ಐಟಿ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ತೆರಿಗೆದಾರನ ವಿಚಾರಣೆ ಇನ್ನು ವಿಡಿಯೋ ಕಾನ್ಫರೆನ್ಸಲ್ಲಿ.
undefined
ಅಗ್ಗದ ವಸತಿ ಖರೀದಿಗೆ ಪಡೆಯಲಾದ ಸಾಲದ 1.5 ಲಕ್ಷ ರು.ವರೆಗಿನ ಬಡ್ಡಿಗೆ ನೀಡಲಾಗುತ್ತಿರುವ ಹೆಚ್ಚುವರಿ ತೆರಿಗೆ ಕಡಿತ 1 ವರ್ಷ ವಿಸ್ತರಣೆ
undefined
ವೇತನ, ತೆರಿಗೆ ಪಾವತಿ ವಿವರ ಮೊದಲೇ ಭರ್ತಿ ಯಾದ ರೂಪದಲ್ಲಿರುವ ತೆರಿಗೆ ರಿಟರ್ನ್‌ಗೆ ಇನ್ನು ಬಡ್ಡಿ ಆದಾಯ, ಡಿವಿಡೆಂಡ್ ಕೂಡ ಸೇರ್ಪಡೆ
undefined
ವಲಸೆ ಕಾರ್ಮಿಕರಿಗಾಗಿ ನಿರ್ಮಿಸಲಾಗುವ ಅಗ್ಗದ ಬಾಡಿಗೆ ವಸತಿ ಯೋಜನೆಗಳಿಗೆ ತೆರಿಗೆ ರಜೆ
undefined
ಶೇ.95ರಷ್ಟು ಡಿಜಿಟಲ್ ವ್ಯವಹಾರ ನಡೆಸುವ ವ್ಯಕ್ತಿಗಳು ಇನ್ನು 10 ಕೋಟಿ ರು.ವರೆಗಿನ ವ್ಯವಹಾರಕ್ಕೆ ಆಡಿಟ್ ಮಾಡಬೇಕಾಗಿಲ್ಲ
undefined
ಡಿವಿಡೆಂಡ್ ಘೋಷಣೆ ಅಥವಾ ಪಾವತಿ ನಂತರವಷ್ಟೇ ಅಡ್ವಾನ್‌ಸ್ ತೆರಿಗೆ ಪಾವತಿಸಬೇಕು
undefined
click me!