ಬಹುನಿರೀಕ್ಷಿತ 2021ನೇ ವರ್ಷದ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕೊರೋನಾ ಮಧ್ಯೆ ನಿರ್ಮಲಾ ಲೆಕ್ಕಾಚಾರ ಸಿಹಿ, ಕಹಿ ಎರಡನ್ನೂ ನೀಡಿದೆ.
undefined
ಆದರೀಗ ಬಜೆಟ್ ಲೆಕ್ಕಾಚಾರದ ಮಧ್ಯೆ ಚಿನ್ನದ ದರ ಸುದ್ದಿ ಗ್ರಾಹಕರ ಖುಷಿಗೆ ಕಾರಣವಾಗಿದೆ.
undefined
ಹೌದು ಬಜೆಟ್ ಲೆಕ್ಕಾಚಾರದ ಮಧ್ಯೆ ಬಂಗಾರ ದರ ಇಳಿಕೆಯಾಗಿದೆ.
undefined
ಲಾಕ್‌ಡೌನ್ ಹೇರಿದಾಗಿನಿಂದಲೂ ಏರಿಳಿತ ಆಟವಾಡುತ್ತಿದ್ದ ಚಿನ್ನದ ದರದಿಂದ ಬೇಸತ್ತಿದ್ದ ಗ್ರಾಹಕರಿಗೆ ಈಗ ಕೊಂಚ ನೆಮ್ಮದಿಯಾಗಿದೆ
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 310 ರೂ. ಇಳಿಕೆಯಾಗಿ ದರ 45,500 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 320 ರೂ. ಇಳಿಕೆಯಾಗಿ 49,640 ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,300ರೂ ಆಗಿದೆ.
undefined
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಜೊತೆಗೆ ಕೊರೋನಾ ವೈರಸ್ ರೂಪಾಂತರವೂ ಆಗುತ್ತಿದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
undefined
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ
undefined