ದೇಶದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, 10 ಗ್ರಾಂ ಚಿನ್ನದ ಬೆಲೆ 1,40,850 ರು. ಹಾಗೂ 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಆರ್ಥಿಕ ಅನಿಶ್ಚಿತತೆ, ಅಮೆರಿಕದ ಬಡ್ಡಿ ದರ ಇಳಿಕೆ ಚಿನ್ನದತ್ತ ಹೂಡಿಕೆದಾರರನ್ನು ಸೆಳೆಯುತ್ತಿದೆ
ನವದೆಹಲಿ: ದೇಶದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, ಮಂಗಳವಾರ ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,40,850 ರು.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಜಿಗಿತವಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ಏರಿಕೆಯಾಗಿದೆ.
24
78,950 ರು.
ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 1,38,200 ರು. ಇತ್ತು. ಒಂದೇ ದಿನ 2,650 ರು. ಜಿಗಿತವಾಗಿದೆ. 2,14,500 ರು. ಇದ್ದ ಬೆಳ್ಳಿ ಬೆಲೆಯಲ್ಲಿ 2,750 ರು. ಏರಿಕೆಯಾಗಿದೆ. 2024ರ ಡಿ.31ರಂದು ಚಿನ್ನದ ದರ 78,950 ರು. ಇತ್ತು.
34
ಎಷ್ಟು ಏರಿಕೆ?
ಒಂದು ವರ್ಷದ ಅವಧಿಯಲ್ಲಿ ಶೇ.78.40ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 89,700 ರು. ಇದ್ದ ಬೆಳ್ಳಿ ದರದಲ್ಲಿ ಶೇ.142.2ರಷ್ಟು ಜಿಗಿತವಾಗಿದೆ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಇಳಿಕೆ, ವಿತ್ತೀಯ ಕೊರತೆ ನಿರ್ವಹಣೆಯಲ್ಲಿ ಅಮೆರಿಕದ ಟ್ರಂಪ್ ಸರ್ಕಾರ ವಿಫಲವಾಗಿರುವುದು, ಆರ್ಥಿಕ ಅನಿಶ್ಚಿತೆ ಕಾರಣ ಹೂಡಿಕೆಗೆ ಹೆಚ್ಚು ಸುರಕ್ಷಿತ ಎನ್ನಲಾದ ಚಿನ್ನದತ್ತ ಜನರು ಮತ್ತು ಹೂಡಿಕೆದಾರರು ಮುಖ ಮಾಡಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ. ಮತ್ತೊಂದೆಡೆ ಹೂಡಿಕೆ ಹೆಚ್ಚಳ ಮತ್ತು ಕೈಗಾರಿಕೆಗಳಿಂದ ಭಾರೀ ಬೇಡಿಕೆಯ ಕಾರಣ ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.