Gold Silver Price: ಕಳೆದ 10 ದಿನಗಳಲ್ಲಿ 5ನೇ ಬಾರಿಗೆ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 7,000 ರೂ. ಗಿಂತ ಅಧಿಕ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲೂ 1 ಕೆಜಿಗೆ 1,000 ರೂ. ಕುಸಿತ ಕಂಡಿದೆ.
ಪ್ರತಿದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆಯಾಗುತ್ತಿರುತ್ತದೆ. goodreturns ವೆಬ್‌ಸೈಟ್ ಪ್ರಕಾರ, ಕಳೆದ 10 ದಿನಗಳಲ್ಲಿ 5ನೇ ಬಾರಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ಇಂದು ಸಹ 7,000 ರೂ.ಗೂ ಅಧಿಕ ದರ ಕಡಿಮೆಯಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 7 ಸಾವಿರ ರೂ.ವರೆಗೆ ಕಡಿಮೆಯಾಗಿದೆ. ಚಿನ್ನದ ಜೊತೆ ಇಂದಿನ ಬೆಳ್ಳಿ ಎಷ್ಟಿದೆ ಎಂದು ನೋಡೋಣ ಬನ್ನಿ.
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,14,500 ರೂಪಾಯಿ, ಮುಂಬೈ: 1,14,700 ರೂಪಾಯಿ, ದೆಹಲಿ: 1,14,850 ರೂಪಾಯಿ, ಕೋಲ್ಕತ್ತಾ: 1,14,700 ರೂಪಾಯಿ, ಹೈದರಾಬಾದ್: 1,14,700 ರೂಪಾಯಿ, ಪುಣೆ: 1,14,700 ರೂಪಾಯಿ, ಬೆಂಗಳೂರು: 1,14,700 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.