ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದರ ಪ್ರಕಾರ ವೇತನ ಎಷ್ಟಾಗಲಿದೆ? 8ನೇ ವೇತನ ಆಯೋಗದ ಮಹತ್ವದ ಅಪ್‌ಡೇಟ್ ಇಲ್ಲಿದೆ.
ನ್ಯಾಯಮೂರ್ತಿ ರಂಜನ್ ದೇಸಾಯಿ ನೇತೃತ್ವದ ಹೊಸ ವೇತನ ಆಯೋಗ ಸಮಿತಿ ಈಗಾಗಲೇ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಸೇರಿದಂತೆ ಒಟ್ಟು ವೇತನದ ಪರಿಶೀಲನೆ ಆರಂಭಿಸಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆಯಂತೆ 8ನೇ ವೇತನ ಆಯೋಗದ ಕೆಲಸ ಆರಂಭಗೊಂಡಿದೆ. ಹೊಸ ವರ್ಷ ಅಂದರೆ ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ 8ನೇ ವೇತನ ಆಯೋಗದ ಪ್ರಕಾರದಂತೆ ಇರಲಿದೆ. ಇದರ ಜಾರಿ ಕೆಲ ತಿಂಗಳು ಹಿಡಿದರೂ 8ನೇ ವೇತನ ಆಯೋಗದ ಸ್ಯಾಲರಿ 2026ರ ಜನವರಿಯಿಂದ ಆರಂಭಗೊಳ್ಳಲಿದೆ.
25
ವೇತನ ಆಯೋಗ ಸಮಿತಿಗೆ ಗಡುವು
ಹೊಸ ವೇತನ ಆಯೋಗ ಸಮಿತಿ 18 ತಿಂಗಳಲ್ಲಿ ನೌಕರರ ವೇತನ, ಭತ್ಯೆ, ಇತರ ಖರ್ಚು ವೆಚ್ಚಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲಿದೆ. ವೇತನ ಆಯೋಗ ಶಿಫಾರಸ್ಸಿನಂತೆ ವೇತನ ಹೆಚ್ಚಾಗಲಿದೆ. ಸದ್ಯ ತುಟ್ಟಿ ಭತ್ಯೆ(ಡಿಎ) ಬೇಸಿಕ್ ಸ್ಯಾಲರಿಯ ಶೇಕಡಾ 58ರಷ್ಟಿದೆ. ಇದು ಹೆಚ್ಚಳವಾಗಲಿದೆ. 18 ತಿಂಗಳು ಗಡುವು ನೀಡಿರುವ ಕಾರಣ ಈ ವರದಿ ಕೇಂದ್ರ ಸರ್ಕಾರದ ಕೈಸೇರಲು ಸರಿಸುಮಾರು 2026ರ ವರ್ಷ ಹಿಡಿಯಲಿದೆ. ಇನ್ನು ಜಾರಿಗೆ ಬರುವಾಗ ಮತ್ತಷ್ಟು ವಿಳಂಬವಾಗಲಿದೆ. ಆದರೆ ಜಾರಿಯಾಗುವಾಗ 2026ರ ಜನವರಿಗೆ ಅನ್ವಯಾಗುವಂತೆ ವೇತನ ಜಾರಿಯಾಗಲಿದೆ. ಹೀಗಾಗಿ 2026ರಿಂದ ಜಾರಿಯಾಗುವವರೆಗೆ ಬಾಕಿ ಉಳಿದಿರುವ ಮೊತ್ತ ನೌಕರರ ಕೈಸೇರಲಿದೆ.
35
ಮೂಲ ವೇತನದಲ್ಲಿ ಭಾರಿ ಏರಿಕೆ
ಹೊಸ ವೇತನ ಆಯೋಗದ ಮುಂದೆ ಹಲವು ಸವಾಲುಗಳಿವೆ. ಈ ಪೈಕ ಮೂಲ ವೇತನ ಹೆಚ್ಚಳ ಪ್ರಮುಖವಾದದ್ದು. ಸದ್ಯ ಇರುವ ಫಿಟ್‌ಮೆಂಶ್ ಅಂಶವನ್ನು 1.58 ರಿಂದ 1.78ಕ್ಕೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ ಮೂಲ ವೇತನ 18 ಸಾವಿರ ರೂಪಾಯಿ ಆಗಿದ್ದರೆ, 8ನೇ ವೇತನ ಆಯೋಗ ಜಾರಿ ಬಳಿಕ ಸರಿಸುಮಾರು 51 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ.
8ನೇ ವೇತನ ಆಯೋಗದಿಂದ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು, 65ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಹೆಚ್ಚಾಗುತ್ತಿರುವ ಬೆಲೆ ಏರಿಕೆ, ಅಗತ್ಯವಸ್ತುಗಳು, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ವೇತನವೂ ಹೆಚ್ಚಳವಾಗಲಿದೆ.
ಕೋಟಿಗೂ ಹೆಚ್ಚು ಮಂದಿಗೆ ನೆರವು
55
ಕೇಂದ್ರ ಸಂಪುಟದ ಅನುಮೋದನೆ
ಈ ವರ್ಷದ ಆರಂಭದಲ್ಲೇ ಅಂದರೆ 2025ರ ಜನವರಿ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ಸಭೆ ಸೇರಿ 8ನೇ ವೇತನ ಆಯೋಗದ ಜಾರಿ ಕುರಿತು ಚರ್ಚೆ ನಡೆಸಿತ್ತು. ಮಹತ್ವದ ಚರ್ಚೆ ಬಳಿಕ 8ನೇ ವೇತನ ಆಯೋಗ ಜಾರಿಗೆ ಸಂಪುಟ ಗ್ರೀನ್ ಸಿಗ್ನಲ್ ನೀಡಿತ್ತು. ಇದೇ ವೇಳೆ 8ನೇ ವೇತನ ಆಯೋಗಕ್ಕೆ ನ್ಯಾಮೂರ್ತಿ ರಂಜನ್ ದೇಸಾಯಿ ನೇತೃತ್ವದ ಸಮಿತಿ ರಚಿಸಿತ್ತು.