ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ.
undefined
ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ.
undefined
ಒಂದೆಡೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ಜನರ ನಿದ್ದೆಗೆಡಿಸಿದೆ.
undefined
ಈ ನಡುವೆ ಚಿನ್ನದ ದರವೂ ಏರಿಕೆಯಾಗುತ್ತಿದ್ದು, ಗ್ರಾಹಕರನ್ನು ಮತ್ತಷ್ಟು ಕಂಗಾಲುಗೊಳಿಸಿದೆ.
undefined
ಹೌದು ಮೊದಲನೇ ಕೊರೋನಾ ಅಲೆ ಆರಂಭವಾಗಿ ಲಾಕ್‌ಡೌನ್ ಹೇರಿಕೆಯಾದ ಬೆನ್ನಲ್ಲೇ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
undefined
ಇದಾದ ಬಳಿಕ ಕೊಂಚ ಇಳಿಕೆಯಾಗಿದ್ದರೂ ಹಾವೇಣಿ ಆಟ ಆರಂಭಿಸಿತ್ತು.
undefined
ಕೊರೋನಾ ಲಾಕ್‌ಡೌನ್ ಎಂಬ ಕಾರಣದಿಂದ ಅನೇಕ ಮಂದಿ ಶುಭ ಕಾರ್ಯಗಳನ್ನು ಮುಂದೂಡಿಸಿದ್ದರು.
undefined
ಇದಾದ ಬಳಿಕ ಪ್ರಸ್ತುತ ವರ್ಷ ಬಜೆಟ್ ಮಂಡನೆ ಪರಿಣಾಮವೋ, ಕೊರೋನಾ ಸೋಂಕು ತಗ್ಗಿದ ಕಾರಣದಿಂದಲೋ ಚಿನ್ನದ ದರ ಭಾರೀ ಇಳಿಕೆಯಾಗಿತ್ತು.
undefined
ಇದು ಅನೇಕ ಮಂದಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.
undefined
ಆದರೀಗ ಮತ್ತೆ ಕೊರೋನಾ ಪ್ರಕರಣಗಳು ಏರುತ್ತಿರುವ ನಡುವೆಯೇ ದರ ಏರಿಕೆಯ ಹಾದಿ ಹಿಡಿದಿದೆ.
undefined
ಸದ್ಯ ಇಂದು ಚಿನ್ನದ ದರ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ನೆಮ್ಮದಿ ಕೊಟ್ಟಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 150 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 160ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 66,300ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
undefined