ಸತತ ಎರಡು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ಬೆಲೆ! ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತ! ಇಳಿಕೆ ಕಾರಣ ಏನು? ಬಂಗಾರದ ಬೆಲೆ ಎಷ್ಟು?

Published : Feb 06, 2026, 09:20 AM IST

ಬೆಂಗಳೂರು: ಡಿಸೆಂಬರ್ 30ರಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನ ಮತ್ತೆ ಏರುಗತಿ ಕಂಡಿತ್ತು. ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಫೆಬ್ರವರಿ 05ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿತ್ತು? 

PREV
16
ಮತ್ತೆ ಕುಸಿದ ಚಿನ್ನದ ಬೆಲೆ

ಕಳೆದ ಮಂಗಳವಾರ ಹಾಗೂ ಬುಧವಾರ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕೊಂಚ ಏರಿಳಿತವಾದ ಬೆನ್ನಲ್ಲೇ ಗುರುವಾರ ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಇದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

26
24 ಕ್ಯಾರಟ್ ಚಿನ್ನ ಪ್ರತಿ ಗ್ರಾಮ್‌ಗೆ 502 ರುಪಾಯಿ ಇಳಿಕೆ

ಹೌದು, ಗುರುವಾರದ ಅಂತ್ಯದ ವೇಳೆಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ 502 ರುಪಾಯಿ ಇಳಿಕೆ ಕಂಡಿದ್ದು, 15,442 ರುಪಾಯಿ ಪ್ರತಿ ಗ್ರಾಮ್‌ಗೆ ಆಗಿದೆ. ಇನ್ನು ಇನ್ನು 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಬರೋಬ್ಬರಿ 460 ರುಪಾಯಿ ಪ್ರತಿ ಗ್ರಾಮ್‌ಗೆ ಇಳಿಕೆಯಾಗಿದೆ.

36
ಆಭರಣ ಚಿನ್ನ 10 ಗ್ರಾಮ್‌ಗೆ 4600 ರುಪಾಯಿ ಇಳಿಕೆ

ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ಬೆಲೆ ಗುರುವಾರದ ಅಂತ್ಯದ ವೇಳೆಗೆ 460 ರುಪಾಯಿ ಇಳಿಕೆ ಕಂಡು 14,155 ರುಪಾಯಿಗಳಾಗಿವೆ. ಅಂದರೆ ಗುರುವಾರದ ಅಂತ್ಯದ ವೇಳೆಗೆ ಪ್ರತಿ 10 ಗ್ರಾಮ್‌ಗೆ ಆಭರಣ ಚಿನ್ನದ ಬೆಲೆಯಲ್ಲಿ 4600 ರುಪಾಯಿ ಹಾಗೂ ಪ್ರತಿ 100 ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ ಗುರುವಾರ ಒಂದೇ ದಿನ 46,000 ರುಪಾಯಿ ಇಳಿಕೆ ಕಂಡಿದೆ.

46
ಚಿನ್ನದ ಬೆಲೆಯಲ್ಲಿ ಕುಸಿತಕ್ಕೆ ಕಾರಣ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆವಿನ್ ವಾರ್ಷ್ ಅವರನ್ನು ಮುಂದಿನ ಯುಎಸ್‌ ಫೆಡರಲ್ ರಿಸರ್ವ್‌ಗೆ ನಾಮನಿರ್ದೇಶನ ಮಾಡಿರುವುದೇ ಚಿನ್ನದ ಬೆಲೆಯ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

56
ಚಿನ್ನ ಲಾಭದಾಯಕವಲ್ಲದ ಸ್ವತ್ತು ಎಂದು ಪರಿಗಣನೆ

ಯಾಕೆಂದರೆ, ವಾರ್ಷ್ ಬಿಗಿಯಾದ ಹಣಕಾಸು ನಿಲುವಿನ ನೀತಿಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಹೆಚ್ಚಿನ ಬಡ್ಡಿದರಗಳ ನಿರೀಕ್ಷೆಗಳು ಸಾಮಾನ್ಯವಾಗಿ ಚಿನ್ನದಂತಹ ಲಾಭದಾಯಕವಲ್ಲದ ಸ್ವತ್ತುಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಲಾಗಿದೆ.

66
ಬೆಳ್ಳಿ ಪ್ರತಿ ಕೆಜಿಗೆ 20,000 ಕುಸಿತ

ಇನ್ನು ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತ ಕಂಡಿದೆ. ಪ್ರತಿ ಕೆಜಿ ಬೆಳ್ಳಿಗೆ 20 ಸಾವಿರ ರುಪಾಯಿ ಕುಸಿತ ಕಂಡಿದೆ. ಬುಧವಾರ ಪ್ರತಿ ಕೆಜಿ ಚಿನ್ನದ ಬೆಲೆ 3,20,000 ರುಪಾಯಿಗಳಾಗಿತ್ತು. ಆದರೆ ಇದೀಗ ಗುರುವಾರ ಚಿನ್ನದ ಬೆಲೆ 3,00,000 ರುಪಾಯಿಗಳಾಗಿವೆ. ಇಂದು ಕೂಡಾ ಚಿನ್ನ ಬೆಳ್ಳಿ ದರದಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories