ಕೇವಲ 10 ದಿನದಲ್ಲಿ 20,000 ಕ್ಕೆ ಕುಸಿದ ಚಿನ್ನ! ಬಂಗಾರ ಮಹಾಕುಸಿತಕ್ಕೆ ಅಸಲಿ ಕಾರಣವೇನು ಗೊತ್ತಾ?

Published : Nov 22, 2026, 07:13 AM IST

ಕಳೆದ ಜನೆವರಿ ತಿಂಗಳಲ್ಲಿ ಗರಿಷ್ಠಮಟ್ಟಕ್ಕೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮಹಾಪತನ ಕಂಡಿದೆ. ಚಿನ್ನದ ಬೆಲೆ ದಿಢೀರ್ ಇಳಿಕೆ ಕಾರಣವೇನು? ಮತ್ತೆ ಏರಿಕೆಯಾಗುತ್ತಾ? ಅಥವಾ ಇನ್ನೂ ಪಾತಾಳಕ್ಕೆ ಇಳಿಯುತ್ತಾ? ಈ ಬಗ್ಗೆ ಹೂಡಿಕೆ ತಜ್ಞರು ಹೇಳೋದೇನು ತಿಳಿಯೋಣ.

PREV
16
ಚಿನ್ನದ ಬೆಲೆ ಇಳಿಕೆಗೆ ಕಾರಣವೇನು?

ಕಳೆದ ಜನೆವರಿ ತಿಂಗಳಲ್ಲಿ ಗರಿಷ್ಠಮಟ್ಟಕ್ಕೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮಹಾಪತನ ಕಂಡಿದೆ. ಚಿನ್ನದ ಬೆಲೆ ದಿಢೀರ್ ಇಳಿಕೆ ಕಾರಣವೇನು? ಮತ್ತೆ ಏರಿಕೆಯಾಗುತ್ತಾ? ಅಥವಾ ಇನ್ನೂ ಪಾತಾಳಕ್ಕೆ ಇಳಿಯುತ್ತಾ? ಈ ಬಗ್ಗೆ ಹೂಡಿಕೆ ತಜ್ಞರು ಹೇಳೋದೇನು ತಿಳಿಯೋಣ.

26
ಚಿನ್ನದ ಬೆಲೆ ಇಳಿಕೆಗೆ ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ಹೇಳೋದೇನು?

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾತೈಲ ಬೆಲೆ ಅಧಿಕವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದುಬ್ಬರ ಉಂಟಾಗಿರುವುದು ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ಹೇಳಿದ್ದಾರೆ.

36
ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ: ಹೂಡಿಕೆಗೆ ಸರಿಯಾದ ಸಮಯವೇ?

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿರುವುದು ಹೂಡಿಕೆಗೆ ಪ್ರಶಸ್ತವಾಗಿದೆ. ಇರುವುದನ್ನೆಲ್ಲ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಬೇಡಿ. ಡಿಸೆಂಬರ್‌ಗೆ ಬಡ್ಡಿದರ ಏರಿಕೆ ಆಗುವ ಸಂಭವ ಇರುವುದರಿಂದ ಚಿನ್ನ ಮತ್ತು ಬೆಳ್ಳಿ ದರ ಅಧಿಕವಾಗಬಹುದು. ಹೂಡಿಕೆ ಮಾಡುವುದಾದರೆ ಎಲ್ಲವನ್ನೂ ಚಿನ್ನದ ಮೇಲೆಯೇ ಹೂಡಿಕೆ ಮಾಡಬೇಡಿ. ಚಿನ್ನದ ಬಾಂಡ್‌ ಉತ್ತಮ ಆಯ್ಕೆಯಾಗಿದೆ. ಜೊತೆಗೆ ರಿಯಲ್‌ ಎಸ್ಟೇಟ್‌, ಷೇರುಪೇಟೆಯಲ್ಲಿಯೂ ಹೂಡಿಕೆಯೂ ಪ್ರಶಸ್ತವಾಗಿದೆ ಎಂದು ತಿಳಿಸಿದ್ದಾರೆ.

46
ಫೆಬ್ರುವರಿ ಚಿನ್ನದ ಬೆಲೆಗೆ ಹೋಲಿಸಿದರೆ ಶೇ.35 ರಷ್ಟು ಕುಸಿತ

ಯುದ್ಧದಿಂದಾಗಿ ಜಾಗತಿಕವಾಗಿ ಕಚ್ಚಾತೈಲ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇದರೊಂದಿಗೆ ಅಂತಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಡ್ಡಿ ದರವೂ ಅಧಿಕವಾಗುತ್ತಿರುವುದು ಹಣದುಬ್ಬರಕ್ಕೆ ಮೂಲ ಕಾರಣ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿದ್ದ ಚಿನ್ನದ ಬೆಲೆಗೆ ಹೋಲಿಸಿದರೆ ಈಗ ಶೇ.35 ರಷ್ಟು ಕುಸಿತವಾಗಿದೆ. ಹಾಗೆಯೇ ಬೆಳ್ಳಿಯ ವಿಷಯಕ್ಕೆ ಬರುವುದಾದರೆ ಬರೋಬ್ಬರಿ ಶೇ.65 ರಷ್ಟು ಕುಸಿತ ಕಂಡಿದೆ.

56
ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ

ಅಂತಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ಬೇರೆ ದೇಶಗಳ ಕರೆನ್ಸಿಗೆ(ಯೆನ್‌, ದಿನಾರ್‌) ಹೋಲಿಸಿದರೆ ಅಧಿಕವಾಗಿದೆ. ಆದರೆ ಡಾಲರ್‌ ಎದುರು ರುಪಾಯಿ ಮೌಲ್ಯ ಚೇತರಿಕೆ ಕಂಡಿದೆ. ಡಾಲರ್‌ಗೆ 97, 98 ರುಪಾಯಿ ಇದ್ದ ಮೌಲ್ಯ ಇದೀಗ 92.50 ರುಪಾಯಿಗೆ ಬಂದಿದೆ. ಇದರಿಂದಾಗಿ ಆಮದು ಮಾಡಿಕೊಳ್ಳುವಾಗ ಕಡಿಮೆ ಹಣ ಪಾವತಿ ಮಾಡುತ್ತಿರುವುದೂ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

66
ಇಂದಿನ ಚಿನ್ನದ ಬೆಲೆ ಎಷ್ಟಿದೆ? (Today Gold Rate)

ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ನ.21,22ರ ಮಾಹಿತಿಯ ಪ್ರಕಾರ, ವಿವಿಧ ಮೂಲಗಳು ಆಭರಣ ಮಳಿಗೆಗಳಿಗೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸವಾಗಬಹುದಾದರೂ ಇಂದಿನ ಚಿನ್ನದ ಬೆಲೆಯ ಅಂದಾಜು ಕೆಳಗಿನಂತಿದೆ.

  • 24 ಕ್ಯಾರೆಟ್ ಚಿನ್ನ (1 ಗ್ರಾಂ): ಸುಮಾರು ₹12,508-₹12,571 (10 ಗ್ರಾಂಗೆ ಸುಮಾರು ₹1,25,080 – ₹1,25,710)
  • 22 ಕ್ಯಾರೆಟ್ ಚಿನ್ನ (1 ಗ್ರಾಂ): ಸುಮಾರು ₹11,465 – ₹11,524 (10 ಗ್ರಾಂಗೆ ಸುಮಾರು ₹1,14,650 – ₹1,15,240)
  • 18 ಕ್ಯಾರೆಟ್ ಚಿನ್ನ (1 ಗ್ರಾಂ): ಸುಮಾರು ₹9,330 – ₹9,428 (10 ಗ್ರಾಂಗೆ ಸುಮಾರು ₹93,300 – ₹94,280)

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories