ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು, 25,000 ರೂ.ವರೆಗೆ ಕಡಿಮೆಯಾಗಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳ ವಿವರವಾದ ಮಾಹಿತಿ ಇಲ್ಲಿದೆ. ಚಿನ್ನ ಖರೀದಿಸಲು ಇದು ಉತ್ತಮ ಅವಕಾಶವಾಗಿದೆ.
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಹಂತ ಹಂತವಾಗಿ ಕುಸಿತ ಕಾಣುತ್ತಿದ್ದು, ಇಂದು 25,000 ರೂ.ಗಳಿಗೆ ಹೆಚ್ಚು ಕಡಿಮೆಯಾಗಿದೆ. ಬಜೆಟ್‌ನಲ್ಲಿ ಚಿನ್ನ ಖರೀದಿಗೆ ಯೋಚಿಸುತ್ತಿದ್ರೆ, ಈ ಸುವರ್ಣವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಕು. ಇಂದು 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
26
ಮೂರು ದಿನಗಳಲ್ಲಿ ಎಷ್ಟು ಕಡಿಮೆ?
ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 25 ಸಾವಿರ ಕಡಿಮೆಯಾಗಿದೆ. ಹಾಗೆಯೇ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 27,800 ರೂ.ಗಳಷ್ಟು ಕುಸಿತ ಕಂಡಿದೆ. ನವೆಂಬರ್ 16ರಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 750 ಮತ್ತು 820 ರೂ. ಕಡಿಮೆಯಾಗಿತ್ತು. ಹಾಗೆಯೇ ನವೆಂಬರ್ 17ರಂದು 700 ರೂ. ಮತ್ತು 760 ರೂ.ಗಳಷ್ಟು ಕುಸಿತವಾಗಿತ್ತು. ಈ ಮೂರು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 4,360 ರೂ. ಕಡಿಮೆಯಾಗಿದೆ.
ಇಂದು ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,22,150 ರೂಪಾಯಿ, ಮುಂಬೈ: 1,22,150 ರೂಪಾಯಿ, ದೆಹಲಿ: 1,22,300 ರೂಪಾಯಿ, ಬೆಂಗಳೂರು: 1,22,150 ರೂಪಾಯಿ, ಹೈದರಾಬಾದ್: 1,22,150 ರೂಪಾಯಿ, ಕೇರಳ: 1,22,150 ರೂಪಾಯಿ, ಪುಣೆ: 1,22,150 ರೂಪಾಯಿ, ಅಹಮದಾಬಾದ್: 1,22,200 ರೂಪಾಯಿ, ವಡೋದರ: 1,22,200 ರೂಪಾಯಿ
66
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿಯೂ ಪ್ರತಿನಿತ್ಯ ಬೆಳ್ಳಿ ದರ ಸಹ ಬದಲಾವಣೆಯಾಗುತ್ತಿರುತ್ತದೆ. ಇಂದು ಭಾರತದಲ್ಲಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5,000 ರೂ.ಗಳು ಕಡಿಮೆಯಾಗಿದೆ. ಇಂದಿನ ದರಗಳು ಈ ರೀತಿಯಾಗಿವೆ.
10 ಗ್ರಾಂ: 1,850 ರೂಪಾಯಿ
100 ಗ್ರಾಂ: 18,500 ರೂಪಾಯಿ
1000 ಗ್ರಾಂ: 1,85,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.