ವೋಡಾಫೋನ್ ಐಡಿಯಾ (Vi) ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ₹4,997 ರ 'ಹೈಬ್ರಿಡ್' ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ. ಈ 365 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್, ಭಾರತದಲ್ಲಿ ದೈನಂದಿನ ಡೇಟಾ, ಕರೆ ಸೌಲಭ್ಯದ ಜೊತೆಗೆ 100ಕ್ಕೂ ಹೆಚ್ಚು ದೇಶಗಳಲ್ಲಿ ಅಂತರಾಷ್ಟ್ರೀಯ ರೋಮಿಂಗ್ ಪ್ರಯೋಜನಗಳನ್ನು ನೀಡುತ್ತದೆ.
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ವೋಡಾಫೋನ್ ಐಡಿಯಾ (Vi), ಆಗಾಗ್ಗೆ ವಿದೇಶ ಪ್ರಯಾಣ ಮಾಡುವ ಗ್ರಾಹಕರಿಗಾಗಿ ವಿಶೇಷವಾದ 'ಹೈಬ್ರಿಡ್' ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್‌ನ ವಿಶೇಷತೆಯೆಂದರೆ ಇದು ಭಾರತದಲ್ಲಿ ಮಾತ್ರವಲ್ಲದೆ ವಿದೇಶ ಪ್ರವಾಸದ ವೇಳೆಯೂ ಕರೆ ಮತ್ತು ಡೇಟಾ ಸೌಲಭ್ಯವನ್ನು ಒದಗಿಸುತ್ತದೆ.
26
4997 ರೂಪಾಯಿ ಪ್ಲ್ಯಾನ್
ಈ ಹೊಸ ಹೈಬ್ರಿಡ್ ಪ್ಲಾನ್‌ನ ಬೆಲೆ 4,997 ರೂಪಾಯಿಗಳಾಗಿದ್ದು, ಇದು ಪೂರ್ಣ 365 ದಿನಗಳ ಅಂದರೆ ಒಂದು ವರ್ಷದ ಅವಧಿಯ ವ್ಯಾಲಿಡಿಟಿಯನ್ನು ಹೊಂದಿದೆ. ಪದೇ ಪದೇ ರೀಚಾರ್ಜ್ ಮಾಡುವ ಕಿರಿಕಿರಿ ತಪ್ಪಿಸಲು ಬಯಸುವ ಮತ್ತು ಅಂತರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಇದು 'ಆಲ್ ಇನ್ ಒನ್' ಪರಿಹಾರವಾಗಿದೆ.
36
ಭಾರತದಲ್ಲಿ ಸಿಗುವ ಪ್ರಯೋಜನಗಳು
ಭಾರತದಲ್ಲಿ ಇವರಿಗೆ ಪ್ರತಿದಿನ 1.5 ಜಿಬಿ ಹೈ-ಸ್ಪೀಡ್ ಡೇಟಾ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ. ದಿನಕ್ಕೆ 100 ಉಚಿತ ಎಸ್‌ಎಂಎಸ್‌ಗಳು ಇರಲಿದೆ.
ಈ ಪ್ಲಾನ್‌ನ ಪ್ರಮುಖ ಆಕರ್ಷಣೆಯೇ ಅಂತರಾಷ್ಟ್ರೀಯ ರೋಮಿಂಗ್ ಸೌಲಭ್ಯ. Vi ಕಂಪನಿಯು ಈ ಸೌಲಭ್ಯವನ್ನು ಎರಡು ವಿಭಾಗಗಳಲ್ಲಿ ಹಂಚಿಕೆ ಮಾಡಿದೆ. ಸೆಟ್ 1 (59 ದೇಶಗಳು) ಇಲ್ಲಿ ಬಳಕೆದಾರರಿಗೆ 100 ನಿಮಿಷಗಳ ಔಟ್‌ಗೋಯಿಂಗ್ ಮತ್ತು ಇನ್‌ಕಮಿಂಗ್ ಕರೆಗಳು ಹಾಗೂ 5 ಜಿಬಿ ಇಂಟರ್ನ್ಯಾಷನಲ್ ಡೇಟಾ ಲಭ್ಯವಿರುತ್ತದೆ. ಸೆಟ್ 2 (65 ದೇಶಗಳು)ಅಲ್ಲಿ 50 ನಿಮಿಷಗಳ ಔಟ್‌ಗೋಯಿಂಗ್ ಕರೆಗಳು ಮತ್ತು 1 ಜಿಬಿ ಇಂಟರ್ನ್ಯಾಷನಲ್ ಡೇಟಾ ಸಿಗಲಿದೆ.
56
ಯುಎಇಗೆ 25 ನಿಮಿಷ ಉಚಿತ ಫೋನ್ ಕಾಲ್
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 25 ನಿಮಿಷಗಳ ಉಚಿತ ಕಾಲಿಂಗ್ ಸೌಲಭ್ಯ ನೀಡಲಾಗಿದ್ದು, ಇದರಲ್ಲಿ ಡೇಟಾ ಒಳಗೊಂಡಿರುವುದಿಲ್ಲ. ಉಚಿತ ನಿಮಿಷಗಳು ಮುಗಿದ ನಂತರ ಪ್ರತಿ ನಿಮಿಷಕ್ಕೆ ಕೇವಲ 10 ರೂಪಾಯಿ ದರ ವಿಧಿಸಲಾಗುತ್ತದೆ.
66
ಏರ್‌ಟೆಲ್‌ಗೆ ತೀವ್ರ ಪೈಪೋಟಿ
Vi ಬಿಡುಗಡೆ ಮಾಡಿರುವ ಈ ಪ್ಲಾನ್ ಏರ್‌ಟೆಲ್‌ನ 'ಗ್ಲೋಬಲ್ ಐಆರ್' (Global IR) ಪ್ಯಾಕ್‌ಗೆ ನೇರ ಪೈಪೋಟಿ ನೀಡುವಂತಿದೆ. ವ್ಯವಹಾರ ಅಥವಾ ಪ್ರವಾಸದ ಉದ್ದೇಶದಿಂದ ವಿದೇಶಕ್ಕೆ ತೆರಳುವವರಿಗೆ ಭಾರತದ ಸಿಮ್ ಕಾರ್ಡ್ ಬದಲಿಸದೆಯೇ ಅಲ್ಲಿಯೂ ಸಂಪರ್ಕದಲ್ಲಿರಲು ಈ ಪ್ಲಾನ್ ಅತ್ಯಂತ ಸಹಕಾರಿಯಾಗಿದೆ. ಒಂದೇ ರೀಚಾರ್ಜ್‌ನಲ್ಲಿ ಭಾರತ ಮತ್ತು ವಿದೇಶ ಎರಡೂ ಕಡೆ ಕನೆಕ್ಟಿವಿಟಿ ನೀಡುವುದು ಈ ಯೋಜನೆಯ ಗರಿಮೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.