ರೂ.25,000ಕ್ಕಿಂತ ಹೆಚ್ಚು, ಎಸ್‌ಬಿಐ ಹೊಸ ಶುಲ್ಕ ಪ್ರಕಟ: ಗ್ರಾಹಕರೇ ಈಗಲೇ ನೋಟ್ ಮಾಡ್ಕೊಳ್ಳಿ

Published : Jan 25, 2026, 01:20 PM IST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇದು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿದೆ. ಬ್ಯಾಂಕ್ ಗ್ರಾಹಕರು ಈ ಬಗ್ಗೆ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯಕ. 

PREV
15
ಎಸ್‌ಬಿಐ ಹೊಸ ಶುಲ್ಕ

ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ತನ್ನ ಐಎಂಪಿಎಸ್ ಆನ್‌ಲೈನ್ ಹಣ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಹೊಸ ನಿಯಮಗಳು 2026ರ ಫೆಬ್ರವರಿ 15ರಿಂದ ಜಾರಿಗೆ ಬರಲಿವೆ. ಇದುವರೆಗೆ 5 ಲಕ್ಷದವರೆಗೆ ಉಚಿತವಾಗಿತ್ತು.

25
ಫೆಬ್ರವರಿ 15 ರಿಂದ ನಿಯಮಗಳು

ಹೊಸ ನಿಯಮದ ಪ್ರಕಾರ, ಎಸ್‌ಬಿಐ ಆನ್‌ಲೈನ್‌ನಲ್ಲಿ 25,000 ರೂ.ವರೆಗಿನ ಐಎಂಪಿಎಸ್‌ಗೆ ಯಾವುದೇ ಶುಲ್ಕವಿಲ್ಲ. ಆದರೆ 25,000 ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಸೇವಾ ಶುಲ್ಕ ವಿಧಿಸಲಾಗುತ್ತದೆ. ಇದು ದೊಡ್ಡ ಮೊತ್ತ ಕಳಿಸುವವರಿಗೆ ಹೊರೆಯಾಗಲಿದೆ.

35
ರೂ.25,000 ಮೇಲಿನ ಐಎಂಪಿಎಸ್ ಶುಲ್ಕ

25,000 ದಿಂದ 1 ಲಕ್ಷ ರೂ.ಗೆ 2 ರೂ.+ಜಿಎಸ್‌ಟಿ, 1 ಲಕ್ಷದಿಂದ 2 ಲಕ್ಷ ರೂ.ಗೆ 6 ರೂ.+ಜಿಎಸ್‌ಟಿ, 2 ಲಕ್ಷದಿಂದ 5 ಲಕ್ಷ ರೂ.ಗೆ 12 ರೂ.+ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕ ಪ್ರತಿ ವಹಿವಾಟಿಗೂ ಅನ್ವಯವಾಗುತ್ತದೆ.

45
ಆನ್‌ಲೈನ್ ಹಣ ವರ್ಗಾವಣೆ ಹೊಸ ಶುಲ್ಕಗಳು

ಈ ಬದಲಾವಣೆ ಆನ್‌ಲೈನ್ ಐಎಂಪಿಎಸ್ ವಹಿವಾಟಿಗೆ ಮಾತ್ರ ಅನ್ವಯಿಸುತ್ತದೆ. ಎಸ್‌ಬಿಐ ಶಾಖೆಯ ಮೂಲಕ ಮಾಡುವ ಐಎಂಪಿಎಸ್‌ಗೆ ಯಾವುದೇ ಹೊಸ ಬದಲಾವಣೆ ಇಲ್ಲ. ಹಳೆಯ ಶುಲ್ಕವೇ ಮುಂದುವರಿಯಲಿದೆ ಎಂದು ಬ್ಯಾಂಕ್ ತಿಳಿಸಿದೆ.

55
ಉಳಿತಾಯ ಮತ್ತು ಸಂಬಳ ಖಾತೆಗಳಿಗೆ ಶುಲ್ಕ ವಿನಾಯಿತಿ

ಕೆಲವು ನಿರ್ದಿಷ್ಟ ಉಳಿತಾಯ ಮತ್ತು ಸಂಬಳ ಖಾತೆಗಳಿಗೆ ಎಸ್‌ಬಿಐ ಈ ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ. 25,000 ರೂ.ಗಿಂತ ಕಡಿಮೆ ಕಳುಹಿಸುವವರಿಗೆ ದೊಡ್ಡ ಪರಿಣಾಮ ಬೀರದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories