ಸಂಕ್ರಾತಿಗೆ ಸಂಭ್ರಮದಲ್ಲಿ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಜನವರಿ 12ರಂದು ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಇದೀಗ ಜನಸಾಮಾನ್ಯರಿಗೂ ಚಿನ್ನ ಖರೀದಿ ಅಥವಾ ಹೂಡಿಕೆ ಮಾಡಬಹುದಾ?
ಚಿನ್ನದ ಬೆಲೆ ದುಬಾರಿಯಾಗುತ್ತಿದೆ ಅನ್ನೋ ಅಂಕಿ ಅಂಶಗಳು ಕಳೆದ ಕೆಲ ವರ್ಷಗಳಿಂದ ಬರುತ್ತಲೇ ಇದೆ. ಇದರ ನಡುವೆ ಕೆಲವು ಬಾರಿ ಇಳಿಕೆಯಾಗಿ ಜನರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಜನರಿ ತಿಂಗಳ ಎರಡನೇ ವಾರದಲ್ಲಿ ಬಂಗಾರ ದರ ಏರಿಕೆಯಾಗುತ್ತಾ ಸಾಗಿದೆ. ಮಕರ ಸಂಕ್ರಾತಿ ಹಬ್ಬದ ಹಿನ್ನಲೆಯಲ್ಲಿ ಬಂಗಾರ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದೆ. ಇದೀಗ ದೇಶಾದ್ಯಂತ ಚಿನ್ನ ಸಂಚಲನ ಸೃಷ್ಟಿಸಿದೆ. ಜನವರಿ 12ರಂದು ಚಿನ್ನದ ರ ಎಷ್ಟಾಗಿದೆ. ಜನಸಾಮಾನ್ಯರು ಖರೀದಿ ಅಥವಾ ಹೂಡಿಕೆಗೆ ಮನಸ್ಸು ಮಾಡಬಹುದಾ? ಇಲ್ಲಿದೆ ವಿವರ.
25
ಬಂಗಾರದ ಇಂದಿನ ದರ
ಭಾರತದಲ್ಲಿ ಬಂಗಾರ ಬೆಲೆ ಜನವರಿ 12ರಂದು ಏರಿಕೆ ಕಂಡಿದೆ. ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಬೆಲೆ 24 ಕ್ಯಾರೆಟ್ 1 ಗ್ರಾಂ ಚಿನ್ನಕ್ಕೆ 14,230 ರೂಪಾಯಿಗೆ ಏರಿಕೆಯಾಗಿದೆ. ಎಂಸಿಎಕ್ಸ್ ಮಾರುಕಟ್ಟೆ ಆರಂಭದಲ್ಲೇ ಚಿನ್ನದ ಬೆಲೆ 24 ಕ್ಯಾರೆಟ್ 1 ಗ್ರಾಂಗೆ 169 ರೂಪಾಯಿ ಏರಿಕೆಯಾಗುವ ಮೂಲಕ ಮತ್ತಷ್ಟು ದುಬಾರಿಯಾಗಿದೆ.
35
22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರ
22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 13,045 ರೂಪಾಯಿಗೆ ಏರಿಕೆಯಾಗಿದೆ. ಇದು 155 ರೂಪಾಯಿ ಏರಿಕೆಯಾಗಿದೆ. ಇನ್ನು 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10676 ರೂಪಾಯಿಗೆ ಏರಿಕೆಯಾಗಿದೆ. ಇಲ್ಲಿ 127 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ ದೇಶಾದ್ಯಂತ ದುಬಾರಿಯಾಗಿದೆ.
ದೇಶದಲ್ಲಾಗುವ ಪ್ರಮುಖ ಬದಲಾವಣೆ ಎಲ್ಲೆಡೆ ಪರಿಣಾಮ ಬೀರುತ್ತದೆ. ಈ ಪೈಕಿ ಬೆಂಗಳೂರಿನಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ದರ 14,215 ರೂಪಾಯಿ, ಇನ್ನು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 13,030 ರೂಪಾಯಿ ಹಾಗೂ 19 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,661 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
55
ಕಳೆದ ಮೂರು ದಿನದಲ್ಲಿ ಚಿನ್ನ ದುಬಾರಿ
ಕಳೆದ ಮೂರು ದಿನಗಳಲ್ಲಿ ಬಂಗಾರ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಮೂರು ದಿನದಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 41,500 ರೂಪಾಯಿ ಏರಿಕೆಯಾಗಿದೆ. ಇದು ಗರಿಷ್ಠ ಏರಿಕೆಯಾಗಿ ಪರಿಗಣಿಸಲ್ಪಟ್ಟಿದೆ. ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಳೆದ ಮೂರು ದಿನದಲ್ಲಿ ಚಿನ್ನ ದುಬಾರಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.