ಕುಟುಂಬದ ಕಪಂನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಹಳೇ ಸಿನಿಮಾಗಳಲ್ಲಿರುವಂತೆ ಪೋಷಕರು, ಕುಟುಂಬಸ್ಥರು ಆಫರ್ ಮುಂದಿಟ್ಟದ್ದರು. ಒಂದೋ ನಿನ್ನ ಪ್ರೀತಿ, ಇಲ್ಲಾ ಉದ್ಯಮ ಒಂದೇ ಆಯ್ಕೆ ಕೊಟ್ಟಿದ್ದರು. ಪ್ರೀತಿ ಆಯ್ಕೆಮಾಡಿಕೊಂಡು ಯಶಸ್ವಿ ಉದ್ಯಮ ಕಟ್ಟಿದ ಸಾಧಕನ ಕತೆ ಇದು
ಸರಿಸುಮಾರು ಎರಡು ದಶಕಗಳ ಹಿಂದಿನ ಬಹುತೇಕ ಪ್ರೀತಿ ಆಧಾರಿತ ಸಿನಿಮಾಗಳಲ್ಲಿ ಹುಡುಗಿ ತಂದೆ , ಅಥವಾ ಹುಡುಗನ ತಂದೆ ಪ್ರೀತಿ ಅಥವಾ ಕುಟುಂಬ ಆಸ್ತಿ ಉದ್ಯಮ ಆಯ್ಕೆ ಮಾಡಿಕೊಳ್ಳಲು ಆಫರ್ ನೀಡುತ್ತಿದ್ದರು. ಸಿನಿಮಾದಲ್ಲಿ ಹೀರೋ ಅಥವಾ ಹೀರೋಯಿನ್ ಪ್ರೀತಿ ಆಯ್ಕೆ ಮಾಡಿಕೊಂಡು ಪಡಬಾರದ ಕಷ್ಟ ಪಟ್ಟು ಬದುಕು ಸಾಗಿಸುವ ಹಲವು ಕತೆಗಳು ಸೂಪರ್ ಹಿಟ್ ಆಗಿದೆ. ಇದೇ ರೀತಿ ನಿಜ ಜೀವನದಲ್ಲಿ ನಡೆದ ಘಟನೆಯೇ ಮಲ್ಪಾನಿ ಗ್ರೂಪ್ ರೋಚಕ ಪಯಣದ ಕತೆ.
27
ಅಶಿಶ್ ಮಲ್ಪಾನಿಯ ಪ್ರೀತಿಯ ಕತೆ
ಅಶಿಶ್ ಮಲ್ಪಾನಿ ಶ್ರೀಮಂತ ಕುಟುಂಬದ ಕುಡಿ. 2000ನೇ ಇಸವಿಯಲ್ಲಿ ಕಾಲೇಜು, ಉನ್ನತ ವಿಧ್ಯಾಭ್ಯಾಸದಲ್ಲಿ ಪ್ರೀತಿ ಶುರುವಾಗಿತ್ತು. ಆದರೆ ಆಕೆಯ ಜಾತಿ ಬೇರೆ. ಮನೆಯವರಿಗೆ ಒಪ್ಪಿಗೆ ಇಲ್ಲ. ಕಾರಣ ಮನೆಯವರು ತಮ್ಮದೇ ಕುಟುಂಬದ ದೂರದ ಸಂಬಂಧಿ ಜೊತೆ ಮದುವೆ ಮಾಡಿಸಲು ಎಲ್ಲಾ ತಯಾರಿ ಮಾಡಿದ್ದರು. ಪ್ರೀತಿಸಿದ ಹುಡುಗಿ ಸಮ್ತಾ. ತಾನು ಸಮ್ತಾ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಾಗ ಕುಟುಂಬಸ್ಥರು ಎರಡು ಆಯ್ಕೆ ನೀಡಿದ್ದರು.
37
ನಿನ್ನ ಪ್ರೀತಿ ಅಥವಾ ಕುಟುಂಬದ ಉದ್ಯಮ
ಅಶಿಶ್ ಮಲ್ಪಾನಿ ಪೋಷಕರು ಬಂದ ಉದ್ಯಮ ನಡೆಸುತ್ತಿದ್ದರು. ಅಶಿಶ್ ಮಲ್ಪಾನಿ ತಾತ ಆರಂಭಿಸಿದ ಉದ್ಯಮ ಹೆಮ್ಮರವಾಗಿ ಬೆಳೆದಿತ್ತು. ಕೋಟಿ ಕೋಟಿ ಆಸ್ತಿ,ಕೋಟಿ ಕೋಟಿ ವ್ಯವಹಾರ ನಡೆಸುತ್ತಿತ್ತು. ಮದುವೆಗೆ ಪಟ್ಟು ಹಿಡಿದಾಗ ಕುಟುಂಬಸ್ಥರು ಪ್ರೀತಿ ಅಥವಾ ಉದ್ಯಮ ಒಂದನ್ನು ಆಯ್ಕೆ ಮಾಡಲು ಸೂಚಿಸಿದ್ದರು. ಈ ವೇಳೆ ಹಿಂದೂ ಮುಂದು ನೋಡದೆ ತನ್ನ ಪ್ರೀತಿ ಆಯ್ಕೆ ಮಾಡಿ 2002ರಲ್ಲಿ ಮದುವೆಯಾಗಿದ್ದರು.
ಪ್ರೀತಿಗಾಗಿ ಕುಟುಂಬದ ಆಸ್ತಿ, ಸಂಪತ್ತು, ಕಂಪನಿ ಎಲ್ಲವನ್ನು ತೊರೆದು ತನ್ನ ಪ್ರೀತಿ ಸಮ್ತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಶಿಶ್ ಮಲ್ಪಾನಿಯಲ್ಲಿ ಉತ್ಸಾಹ ಹಾಗೇ ಇತ್ತು. ಆರಂಭದಲ್ಲಿ ಬಿಸ್ಕೆಟ್ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಹೈದರಾಬಾದ್ ಕಂಪನಿಯಲ್ಲಿ ತಯಾರಾಗುತ್ತಿದ್ದ ಬಿಸ್ಕೆಟ್ ಗುಣಮಟ್ಟ ಚೆನ್ನಾಗಿರಲಿಲ್ಲ. ಸಣ್ಣ ಬಂಡವಾಳದಲ್ಲಿ ಪುಣೆಯಲ್ಲಿ ಬಿಸ್ಕೆಟ್ ಕಂಪನಿ ಆರಂಭಿಸಿ ಆಶಿಶ್ ಮಲ್ಪಾನಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
57
ಯಾರ ನೆರವು ಇಲ್ಲದೆ ಉದ್ಯಮ ಕಟ್ಟಿದ ಆಶಿಶ್
ಕುಟುಂಬದಲ್ಲಿ ಆಶಿಶ್ ಅತ್ಯಂತ ಕಿರಿಯ. ಆದರೆ ಕುಟುಂಬದ ಆಸ್ತಿ, ಉದ್ಯಮ, ನೆರವು ಏನೂ ಇಲ್ಲದೆ ಬೆಳೆದು ನಿಂತ ಹಠಮಾರಿ. ಕೆಲ ವರ್ಷಗಳ ಬಳಿಕ ಆಶಿಶ್ ಸಹೋದರರು ಒಂದಾಗಿದ್ದರು. ಬಳಿಕ ಆಶಿಶ್ ಮಲ್ಪಾನಿ ಹಲವು ಉದ್ಯಮ ಆರಂಭಿಸಿದ್ದರು. ಇದೀಗ ಮಲ್ಪಾನಿ ಗ್ರೂಪ್ ನವೀಕರಿಸಬಲ್ಲ ಇಂಧನ, ಎಫ್ಎಂಸಿಜಿ ಉತ್ಪನ್ನ, ಅಮ್ಯೂಸ್‌ಮೆಂಟ್ ಹಾಗೂ ವಾಟರ್ ಪಾರ್ಕ್, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿದೆ.
67
ಕುಟುಂಬಸ್ಥರ ಕೈಬಿಡ ಆಶಿಶ್
ತನ್ನ ಪ್ರೀತಿಗಾಗಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಲ್ಲವನ್ನು ತೊರೆದು ಶೂನ್ಯದಿಂದ ಆರಂಭಿಸಬೇಕಾಗಿ ಬಂದಿತ್ತು. ಯಾರ ನೆರವು ಇಲ್ಲದೆ ಆಶಿಶ್ ಮಲ್ಪಾನಿ ಉದ್ಯಮ ಕಟ್ಟಿದ್ದರು. ಆದರೆ ತಾನು ಬೆಳೆಯುತ್ತಿದ್ದಂತೆ ಕುಟುಂಬಸ್ಥರು ಹತ್ತಿರವಾಗಿದ್ದರು. ಹಿಂದಿನ ನೋವು, ದ್ವೇಷ ಯಾವುದನ್ನು ಅಶಿಶ್ ಮಲ್ಪಾನಿ ಇಟ್ಟುಕೊಂಡಿಲ್ಲ. ತನ್ನ ಮಲ್ಪಾನಿ ಗ್ರೂಪ್‌ನಲ್ಲಿ ಪ್ರಮುಖ ಸ್ಥಾನದಲ್ಲಿ ಕುಟುಂಬಸ್ಥರೇ ಇದ್ದಾರೆ.
ಕುಟುಂಬಸ್ಥರ ಕೈಬಿಡ ಆಶಿಶ್
77
3,000 ಕೋಟಿ ರೂಪಾಯಿ ಸಾಮ್ರಾಜ್ಯ
ಶೂನ್ಯದಿಂದ ಆರಂಭಿಸಿದ ಆಶಿಶ್ ಮಲ್ಪಾನಿ ಇದೀಗ ಬರೋಬ್ಬರಿ 3,000 ಕೋಟಿ ರೂಪಾಯಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಇದೀಗ ಕಟುಂಬ ಸದಸ್ಯರನ್ನು ಸೇರಿಸಿಕೊಂಡು ಉದ್ಯಮ ವಿಸ್ತರಿಸಿದ್ದಾರೆ.ಆಶಿಶ್ ಮಲ್ಪಾನಿ ಸೇರಿದಂತೆ ಪ್ರಮುಖರಿಗೆ 5 ಲಕ್ಷ ರೂಪಾಯಿ ತಿಂಗಳ ವೇತನ ಫಿಕ್ಸ್ ಮಾಡಿದ್ದಾರೆ. ಇದು ಕಂಪನಿ ವಿಸ್ತರಿಸಲು, ಕುಟುಂಬ ಉದ್ಯಮ ಗಟ್ಟಿಗೊಳಿಸಲು ತೆಗೆದುಕೊಂಡ ನಿರ್ಧಾರ ಎಂದು ಆಶಿಶ್ ಮಲ್ಪಾನಿ ಹೇಳುತ್ತಾರೆ.
3,000 ಕೋಟಿ ರೂಪಾಯಿ ಸಾಮ್ರಾಜ್ಯ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.