ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಅತೀ ಕಡಿಮೆ ಬೆಲೆ ಆಯ್ಕೆ ಇಲ್ಲಿದೆ

Published : Jan 12, 2026, 04:31 PM IST

ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಬ್ಯಾಂಕ್ ಸಂಬಂಧ, ಒಟಿಪಿ ಸೇರಿ ಇತರ ದಾಖಲೆಗಳಿಗಾಗಿ ಸಿಮ್ ಆ್ಯಕ್ಟೀವ್ ಇಡುವುದೇ ಇದೀಗ ದುಬಾರಿಯಾಗುತ್ತಿದೆ.ಇದಕ್ಕೆ ಅತೀ ಕಡಿಮೆ ಬೆಲೆಯ ಆಯ್ಕೆ ಇಲ್ಲಿದೆ. 

PREV
16
ದುಬಾರಿ ರೀಚಾರ್ಜ್ ಸಮಸ್ಯೆ ಎದುರಿಸುತ್ತಿದ್ದೀರಾ?

ಬಹುತೇಕರು ಕನಿಷ್ಠ 2 ಸಿಮ್ ಬಳಕೆ ಮಾಡುತ್ತಾರೆ. ಒಂದು ಕರೆ, ಡೇಟಾಗೆ ಬಳಕೆ ಮಾಡುತ್ತಿದ್ದರೆ, ಮತ್ತೊಂದು ಬ್ಯಾಂಕ್, ಒಟಿಪಿ, ಇತರ ದಾಖಲೆಗಳು ಸಿಮ್ ಜೊತೆ ಲಿಂಕ್ ಆಗಿರುವ ಕಾರಣ ಅನಿವಾರ್ಯವಾಗಿ ಆ್ಯಕ್ಟೀವ್ ಇಡಲೇಬೇಕಾಗುತ್ತದೆ. 2026ರಲ್ಲಿ ಸಿಮ್ ಕೇವಲ ಆ್ಯಕ್ಟೀವ್ ಇಡಲು ದುಬಾರಿ ರೀಚಾರ್ಜ್ ಮಾಡಬೇಕು. ಹಿಂದಿನಂತೆ ಕಡಿಮೆ ಬೆಲೆಯ ವ್ಯಾಲಿಟಿಡಿ ರೀಚಾರ್ಜ್, ಅಥವಾ ತಿಂಗಳಿಗೆ 1 ಜಿಬಿ ಅಥವಾ 2 ಜಿಬಿ, ಲಿಮಿಟೆಡ್ ಕರೆಗಳನ್ನು ಹೊಂದಿರುವ ಅತೀ ಕಡಿಮೆ ಬೆಲೆಯ ರೀಚಾರ್ಜ್ ಸದ್ಯ ಲಭ್ಯವಿಲ್ಲ. ಇದೀಗ ಎಲ್ಲಾ ರೀಚಾರ್ಜ್ ದುಬಾರಿಯಾಗಿದೆ.

26
ಸಿಮ್ ಆ್ಯಕ್ಟೀವ್ ಇಡಲು ಎಷ್ಟು ಪಾವತಿಸುತ್ತಿದ್ದೀರಿ?

ಸಿಮ್ ಸದಾ ಆ್ಯಕ್ಟೀವ್ ಆಗಿರಲು ಎಲ್ಲಾ ಟೆಲಿಕಾಂ ನೆಟ್‌ವರ್ಕ್ ರೀಚಾರ್ಜ್ ಅತೀ ದುಬಾರಿಯಾಗಿದೆ. ಜಿಯೋ, ಎರ್‌ಟೆಲ್, ವೋಡಾಫೋನ್ ನೆಟ್‌ವರ್ಕ್‌ನಲ್ಲಿ ಕೇವಲ ಸಿಮ್ ಆ್ಯಕ್ಟಿವೇಟ್ ಮಾಡಲು 28 ದಿನಗಳ ವ್ಯಾಲಿಟಿಡಿಗೆ ಕನಿಷ್ಠ 200 ರೂಪಾಯಿ ಅಸುಪಾಸಿನಲ್ಲಿ ಪಾವತಿ ಮಾಡಬೇಕು. ಇದು ವರ್ಷಕ್ಕೆ 2000 ರೂಪಾಯಿ ಆಗಲಿದೆ. ನೀವು ಈ ರೀತಿ ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರ ಇಲ್ಲಿದೆ.

36
ಅತೀ ಕಡಿಮೆ ಬೆಲೆ ರೀಚಾರ್ಜ್ ಲಭ್ಯ

ಜಿಯೋ, ಏರ್‌ಟೆಲ್, ವೋಡಾಫೋನ್ ಸೇರಿದಂತೆ ಖಾಸಗಿ ಟೆಲಿಕಾಂ ಸೇವೆಯಲ್ಲಿ ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಹೀಗಾಗಿ ಬಿಎಸ್‌ಎನ್‌ಎಲ್ ಅತೀ ಕಡಿಮೆ ಬೆಲೆಯಲ್ಲಿ ಸಿಮ್ ಆ್ಯಕ್ಟಿವೇಶನ್ ಪ್ಲಾನ್ ರೀಚಾರ್ಜ್ ನೀಡುತ್ತಿದೆ. ಖಾಸಗಿ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಸರಿಸುಮಾರು ಒಂದು ತಿಂಗಳಿಗೆ 200 ರೂಪಾಯಿ ಪಾವತಿ ಮಾಡಬೇಕಿದ್ದರೆ, ಬಿಎಸ್‌ಎನ್‌ಎಲ್ ಸೇವೆಯಲ್ಲಿ ಮೂರು ತಿಂಗಳಿಗೆ 100 ರೂಪಾಯಿ ಸಾಕು.

46
60 ರಿಂದ 90 ದಿನ ವ್ಯಾಲಿಟಿಡಿ

ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಲ್ಲಿ 60 ರಿಂದ 90 ದಿನದ ವ್ಯಾಲಿಟಿಡಿಟಿಗೆ ಕೇವಲ 100 ರೂಪಾಯಿ ಪಾವತಿಸಿದರೆ ಸಾಕು. ಸರಿಸುಮಾರು ಮೂರು ತಿಂಗಳು ಸಿಮ್ ಆ್ಯಕ್ಟೀವ್ ಆಗರಿಲಿದೆ. ಬಿಎಸ್‌ಎನ್‌ಎಲ್ ಉತ್ತಮ ಆಯ್ಕೆಯಾಗಿದೆ. ಇದೀಗ ಸಮಸ್ಯೆ ಎದುರಾಗುವುದು ಸೆಕೆಂಡರಿ ಸಿಮ್ ಬೇರೆ ನೆಟ್‌ವರ್ಕ್‌ನಲ್ಲಿದ್ದರೆ ಏನು ಮಾಡಲಿ?

56
ಪ್ರೈಮರಿ ನಂಬರ್ ನಿಮ್ಮಿಷ್ಟದ ನೆಟ್‌ವರ್ಕ್, ಸೆಕೆಂಡರಿ ಬಿಎಸ್‌ಎನ್‌ಎಲ್‌ಗೆ ಪೋರ್ಟ್

ಪ್ರೈಮರಿ ನಂಬರ್ ನಿಮ್ಮ ಅಗತ್ಯಕ್ಕೆ, ಅವಶ್ಯಕತೆಗೆ ತಕ್ಕಂತೆ ಇಟ್ಟುಕೊಳ್ಳಿ. ಇನ್ನು ದಾಖಲೆಗಳಿಗಾಗಿ, ಅಥವಾ ಹೆಚ್ಚಿನ ಬಳಕೆ ಇಲ್ಲ. ಆದರೆ ಸಿಮ್ ಆ್ಯಕ್ಟೀವ್ ಆಗಿರಬೇಕು ಅನ್ನೋ ಉದ್ದೇಶವಿದ್ದರೆ, ಸೆಕೆಂಡರಿ ಸಿಮ್ ಕಾರ್ಡ್‌ನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಳ್ಳಿ. ಇದರಿಂದ ವಾರ್ಷಿಕವಾಗಿ ಕನಿಷ್ಠ 1600 ರೂಪಾಯಿ ಉಳಿತಾಯ ಮಾಡಬಹುದು.

ಪ್ರೈಮರಿ ನಂಬರ್ ನಿಮ್ಮಿಷ್ಟದ ನೆಟ್‌ವರ್ಕ್, ಸೆಕೆಂಡರಿ ಬಿಎಸ್‌ಎನ್‌ಎಲ್‌ಗೆ ಪೋರ್ಟ್

66
ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಉಪಯೋಗ

ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಿಂದ ಹಲವು ಪ್ರಯೋಜನವಿದೆ. ಸದ್ಯ ಬಿಎಸ್‌ಎನ್‌ಎಲ್ ದೇಶಾದ್ಯಂತ ನೆಟ್‌ವರ್ಕ್ ಬಲಪಡಿಸುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಡೇಟಾ, ಅನ್‌ಲಿಮಿಟೆಡ್ ಕರೆ ಸೇರಿದಂತೆ ಹಲವು ಸೌಲಭ್ಯಗಳನ್ನು ಬಿಎಸ್‌ಎನ್‌ಎಲ್ ನೀಡಲಿದೆ. ವಾರ್ಷಿಕವಾಗಿ ಹಣ ಉಳಿತಾಯದ ಪ್ಲಾನ್ ನಿಮ್ಮಲ್ಲಿದ್ದರೆ, ಈ ಉಪಾಯ ಬಳಕೆ ಮಾಡಬುಹುದು.

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಉಪಯೋಗ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories