Gold RateToday: ಚಿನ್ನದ ದರವು ನಿರಂತರವಾಗಿ ಏರಿಕೆಯಾಗುತ್ತಿದ್ದು, ಹೂಡಿಕೆಯಾಗಿ ಪರಿಗಣಿಸಲ್ಪಟ್ಟಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಲೇಖನದಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆ ಮತ್ತು ಬೆಳ್ಳಿಯ ದರವನ್ನು ನೀಡಲಾಗಿದೆ.
ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ತುಸುವೇ ಇಳಿದು ಒಮ್ಮಿಂದೊಮ್ಮೆಲೆ ಭಾರಿ ಏರಿಕೆ ಆಗುವ ಚಿನ್ನದ ದರದಿಂದ ಜನಸಾಮಾನ್ಯರ ಚಿನ್ನ ಕೊಳ್ಳುವ ಆಸೆಗೆ ತಣ್ಣೀರೆರಚಿದಂತಾಗಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
27
ಚಿನ್ನದ ದರ ಇಂದು ಹೇಗಿದೆ
ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,193 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,260 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,395 ಇದೆ.
37
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,193 ರೂಪಾಯಿ (ನಿನ್ನೆಗಿಂತ 87 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 89,544 ರೂಪಾಯಿ ( ನಿನ್ನೆಗಿಂತ 696 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 1,11,930 ರೂಪಾಯಿ (ನಿನ್ನೆಗಿಂತ 870 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 11,19,300 ರೂಪಾಯಿ (ನಿನ್ನೆಗಿಂತ 8,700 ರೂಪಾಯಿ ಏರಿಕೆ)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.