26850 ಕೋಟಿಗೆ ಭಾರತದ ಖಾಸಗಿ ಬ್ಯಾಂಕ್‌ನ ಶೇ.60 ಪಾಲು ಸ್ವಾಧೀನಪಡಿಸಿಕೊಂಡ ದುಬೈನ ಎನ್‌ಬಿಡಿ

Published : Oct 19, 2025, 02:23 PM IST

ಯುಎಇಯ ಎಮಿರೇಟ್ಸ್ ಎನ್‌ಬಿಡಿ ಬ್ಯಾಂಕ್, ಭಾರತದ ಖಾಸಗಿ ಬ್ಯಾಂಕಿನ ಶೇ. 60ರಷ್ಟು ಪಾಲನ್ನು ಸುಮಾರು 26,850 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಭಾರತದ ಖಾಸಗಿ ಬ್ಯಾಂಕಿಂಗ್ ವಲಯದ ಈ ಅತಿದೊಡ್ಡ ಒಪ್ಪಂದವು ನಿಯಂತ್ರಕ ಅನುಮೋದನೆಗೆ ಒಳಪಟ್ಟಿದೆ.

PREV
15
Emirates NBD

ಭಾರತದ ಖಾಸಗಿ ಬ್ಯಾಂಕಿಂಗ್ ವಲಯದ ಅತಿದೊಡ್ಡ ಒಪ್ಪಂದವಾಗಿದೆ. ಭಾರತದ ಖಾಸಗಿ ಬ್ಯಾಂಕಿನ ಜೊತೆಯಲ್ಲಿ ಎಮಿರೇಟ್ಸ್ ಎನ್‌ಬಿಡಿ ಬ್ಯಾಂಕ್ ನಡುವೆ ಪ್ರಮುಖ ಒಪ್ಪಂದ ಮಾಡಿಕೊಂಡು ಶೇ.60ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಒಪ್ಪಂದದ ಮೌಲ್ಯ ಸುಮಾರು 26,850 ಕೋಟಿ ರೂಪಾಯಿ ಆಗಿದೆ.

25
ಶೇ. 60ರಷ್ಟು ಪಾಲು

ಯುಎಇ ಎನ್‌ಬಿಡಿ ಬ್ಯಾಂಕ್ (Emirates NBD- National Bank of Dubai) ಭಾರತದ ಆರ್‌ಬಿಎಲ್‌ (RBL Bank) ಬ್ಯಾಂಕಿನ ಶೇ. 60ರಷ್ಟು ಪಾಲು ಖರೀದಿ ಮಾಡಲಿದ್ದು, ಈ ಸಂಬಂಧ ಶನಿವಾರ ಅಧಿಕೃತ ಘೋಷಣೆಯಾಗಿದೆ. ಆರ್‌ಬಿಎಲ್ ಬ್ಯಾಂಕ್ ಮತ್ತು ಎಮಿರೇಟ್ಸ್ ಎನ್‌ಬಿಡಿ ಬೋರ್ಡ್ ಈ ಒಪ್ಪಂದವನ್ನು ಅನುಮೋದಿಸಿವೆ. ಇದನ್ನೂ ಖಾಸಗಿ ವಲಯದ ಬ್ಯಾಂಕಿಂಗ್‌ನಲ್ಲಿ ಇದುವರೆಗಿನ ಅತಿದೊಡ್ಡ ಒಪ್ಪಂದ ಎಂದು ಕರೆಯಲಾಗುತ್ತಿದೆ.

35
ಸೆಬಿಯ ಟೇಕ್‌ಓವರ್ ರೆಸ್ಯೂಲೆಷನ್

ಎಮಿರೇಟ್ಸ್‌ ಎನ್‌ಬಿಡಿಯ ಶೇ.60ರಷ್ಟು ಪ್ರಿಫರೆನ್ಶಿಯಲ್ ಅಲಾಟ್‌ಮೆಂಟ್ (preferential allotment) ಹೂಡಿಕೆ ರಿಸರ್ವ್ ಬ್ಯಾಂಕ್, ಷೇರುದಾರರು ಮತ್ತು ಇತರೆ ನಿಯಂತ್ರಕ ಸಂಸ್ಥೆಗಳ ಅನುಮೋದನೆಗೆ ಒಳಪಟ್ಟಿರುತ್ತದೆ. ಸೆಬಿಯ ಟೇಕ್‌ಓವರ್ ರೆಸ್ಯೂಲೆಷನ್ (SEBI Takeover Regulation) ಪ್ರಕಾರ, ಸಾರ್ವಜನಿಕ ಷೇರುದಾರರಿಂದ ಶೇಕಡಾ 26 ರಷ್ಟು ಪಾಲು ಪಡೆಯಲು ಎಮಿರೇಟ್ಸ್ ಓಪನ್ ಆಫರ್ ನೀಡುತ್ತದೆ.

45
ಆರ್‌ಬಿಐ

ಇದಾಗ ಬಳಿಕ ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಪ್ರಿಫರೆನ್ಶಿಯಲ್ ಇಶ್ಯೂ (Preferential Issue) ಪೂರ್ಣಗೊಂಡ ನಂತರ ಎಮಿರೇಟ್ಸ್ ಎನ್‌ಬಿಡಿ ಆರ್‌ಬಿಎಲ್ ಬ್ಯಾಂಕಿನ ಪ್ರಮೋಟರ್ (Bank Promoter) ಆಗಲಿದೆ. ನಂತರ ಆರ್‌ಬಿಎಲ್ ಮೇಲಿನ ನಿಯಂತ್ರಣ ಪಡೆಯಲಿದೆ.

ಇದನ್ನೂ ಓದಿ: ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ

55
ಎಕನಾಮಿಕ್ ಕಾರಿಡಾರ್‌

ದೇಶದಲ್ಲಿನ ಈ ಹೂಡಿಕೆಯು ಭಾರತದ ಲಾಂಗ್‌ ಟರ್ಮ್ ಕಮಿಟ್ಮೆಂಟ್‌ ತೋರಿಸುತ್ತದೆ ಎಂದು ಎಮಿರೇಟ್ಸ್ NBD ಹೇಳಿಕೆ ಬಿಡುಗಡೆ ಮಾಡಿದೆ. ಇಂಡಿಯಾ-ಮಿಡಲ್ ಈಸ್ಟ್-ಯೂರೋಪ್ ಎಕನಾಮಿಕ್ ಕಾರಿಡಾರ್‌ನಲ್ಲಿ (IMEC) ಭಾರತದ ಪ್ರಾಮುಖ್ಯತೆಯನ್ನು ಈ ಹೂಡಿಕೆ ತೋರಿಸುತ್ತದೆ. ಈ ಒಪ್ಪಂದ ಭಾರತ-ಯುಎಇ ನಡುವಿನ ಸಮಗ್ರ ಆರ್ಥಿಕ ಸಹಭಾಗಿತ್ವ (Comprehensive Economic Partnership) ಮತ್ತಷ್ಟು ದೃಢಪಡಿಸುತ್ತದೆ.

ಇದನ್ನೂ ಓದಿ: ಧನತ್ರಯೋದಶಿ: ದೇಶವನ್ನೇ ಬೆರಗುಗೊಳಿಸಿದ ವ್ಯಾಪಾರ, 60 ಸಾವಿರ ಕೋಟಿಯ ಚಿನ್ನ-ಬೆಳ್ಳಿ, 2 ದಿನದಲ್ಲಿ 75 ಸಾವಿರ ಕಾರ್‌ ಮಾರಾಟ

Read more Photos on
click me!

Recommended Stories