ಮುಕೇಶ್ ಅಂಬಾನಿ, ಏಷ್ಯಾದ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 16.57 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿಯೂ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ.
ಇದಲ್ಲದೆ ಗೌತಮ್ ಅದಾನಿ, ರತನ್ ಟಾಟಾ ಮೊದಲಾದವರು ನಂತರದ ಸ್ಥಾನದಲ್ಲಿ ಬರುತ್ತಾರೆ.
ಆದ್ರೆ, ಸದ್ಯ ಗೌತಮ್ ಅದಾನಿ ಉದ್ಯಮ ಏರುಗತಿಯಲ್ಲಿ ಸಾಗುತ್ತಿದೆ. ಗೌತಮ್ ಅದಾನಿ ನೇತೃತ್ವದ ಕಂಪನಿಗಳ ಷೇರುಗಳು ಗಗನಕ್ಕೇರುತ್ತಿದ್ದಂತೆ, ಅದಾನಿ ಸಮೂಹದ ಸಂಯೋಜಿತ ಮಾರುಕಟ್ಟೆ ಮೌಲ್ಯವು 14.5 ಲಕ್ಷ ಕೋಟಿ ರೂ. ದಾಟಿದೆ.
ಇದರರ್ಥ ಅದಾನಿ ಗ್ರೂಪ್ ಮಾರುಕಟ್ಟೆ ಬಂಡವಾಳಕ್ಕೆ ಹೋಲಿಕೆ ಮಾಡಿದಾಗ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಆಸ್ತಿ ಮೌಲ್ಯದಿಂದ ಕೇವಲ 2 ಲಕ್ಷ ಕೋಟಿ ರೂ. ಅಂತರವಿದೆ. ಗೌತಮ್ ಅದಾನಿ, ಒಟ್ಟು ಆಸ್ತಿ ಮೌಲ್ಯದಲ್ಲಿ ಮುಕೇಶ್ ಅಂಬಾನಿಯವರನ್ನು ಮೀರಿಸೋಕೆ ಸಿದ್ಧವಾಗಿದ್ದಾರೆ.
ಅದಾನಿ ಟೋಟಲ್ ಗ್ಯಾಸ್, ಅದಾನಿ ಬಂದರುಗಳು, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್ ಮತ್ತು ಇತರ ಸಂಸ್ಥೆಗಳ ಲಾಭ ಕಳೆದ ವಾರದಲ್ಲಿ ಗಮನಾರ್ಹವಾದ ಏರಿಕೆಯನ್ನು ಪಡೆದಿವೆ.
ಬಿಲಿಯನೇರ್ ಗೌತಮ್ ಅದಾನಿ ಅವರ ಕಂಪನಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದ ನಂತರ ಅದಾನಿ ಗ್ರೂಪ್ ಷೇರುಗಳಲ್ಲಿ ಏರಿಕೆಯಾಗಿದೆ.
ಅದಾನಿ ಸಮೂಹದ ಸ್ಟಾಕ್‌ನಲ್ಲಿನ ಹೆಚ್ಚಳವು ಗೌತಮ್ ಅದಾನಿಗೆ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ (ಬಿಬಿಐ) ಸ್ಥಾನಗಳನ್ನು ಏರಲು ಸಹಾಯ ಮಾಡಿದೆ. 82.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಗೌತಮ್ ಅದಾನಿ ಈಗ ವಿಶ್ವದ 15ನೇ ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಗೌತಮ್ ಅದಾನಿ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸುಮಾರು 95.5 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಮುಕೇಶ್ ಅಂಬಾನಿಗಿಂ ಇನ್ನೂ 13 ಬಿಲಿಯನ್ ಡಾಲರ್ ಹಿಂದೆ ಇದ್ದಾರೆ. ಗೌತಮ್ ಅದಾನಿ ಈ ಹಿಂದೊಮ್ಮೆ ಶ್ರೀಮಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದರು.
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಹಾಗೂ ಎಸ್ ಇಝುಡ್ ಹಾಗೂ ಅದಾನಿ ಪವರ್ ಗಳಲ್ಲಿ ಮಾಡಿದ ಹೂಡಿಕೆಗಳು ಏರಿಕೆಯಾಗಿವೆ. ಇತ್ತೀಚೆಗಿನ ಷೇರು ಮಾರುಕಟ್ಟೆ ಬೂಮ್ ನಿಂದ ಈ ಷೇರುಗಳ ಮೌಲ್ಯ ದುಪ್ಪಟ್ಟಾಗಿದೆ.