ಪಿಯುಸಿ ಫೇಲ್‌ ಆಗಿ, ಮೊದಲ ಕೆಲಸಕ್ಕೆ ಕೇವಲ 11000 ಸಂಬಳ ಪಡೆದ ವ್ಯಕ್ತಿ ಈಗ ಕೋಟ್ಯಾಧಿಪತಿ!

First Published | Dec 6, 2023, 8:48 AM IST

ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತವೆ. ಇವೆಲ್ಲವನ್ನೂ ಧೈರ್ಯದಿಂದ ಎದುರಿಸಿ ಮುಂದೆ ಸಾಗಿದವರು ಲೈಫ್‌ನಲ್ಲಿ ಸಕ್ಸಸ್‌ ಆಗುತ್ತಾರೆ. ಅದಕ್ಕೆ ಈ ಕೋಟ್ಯಾಧಿಪತಿಯೇ ನಿದರ್ಶನ. 12ನೇ ತರಗತಿಯಲ್ಲಿ ಫೇಲ್‌ ಆಗಿ, ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸಕ್ಕೆ ಸೇರಿ. ಮೊದಲ ಕೆಲಸಕ್ಕೆ 11000 ಸಂಬಳ ಪಡೆದ ವ್ಯಕ್ತಿ ಈಗ ಕೋಟ್ಯಾಧಿಪತಿ. 

ಸುಶೀಲ್ ಸಿಂಗ್ ಬಡ ಕುಟುಂಬದಲ್ಲಿ ಜನಿಸಿದರು. ಹೊತ್ತಿನ ಊಟಕ್ಕೂ ಪರದಾಡುವಂಥಾ ಸ್ಥಿತಿಯಿತ್ತು. ವಿದ್ಯಾಭ್ಯಾಸದ ಸಂದರ್ಭದಲ್ಲೂ ಅನೇಕ ಕಷ್ಟಗಳನ್ನು ಎದುರಿಸಿದರು. ಇವರು ಮುಂಬೈನ ಜೌನ್‌ಪುರ ಮೂಲದವರಾಗಿದ್ದು, ಕುಟುಂಬ ಗಲ್ಲಿಯಲ್ಲಿ ವಾಸಿಸುತ್ತಿತ್ತು. ತಂದೆ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. 

ಹಲವು ಕಷ್ಟಗಳ ಮಧ್ಯೆ ಶಾಲಾ ಶಿಕ್ಷಣವನ್ನು ಪೂರೈಸಲು ಸುಶೀಲ್‌ ಸಿಂಗ್‌ಗೆ ಸಾಧ್ಯವಾಗಲ್ಲಿಲ್ಲ. ಸುಶೀಲ್ ಕ್ರಮೇಣ ತನ್ನ ಓದಿನಲ್ಲಿ ಆಸಕ್ತಿ ಕಳೆದುಕೊಂಡು 12ನೇ ತರಗತಿಯಲ್ಲಿ ಅನುತ್ತೀರ್ಣರಾದರು. ಇದರ ನಂತರ, ಅಲಹಾಬಾದ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದರು

Tap to resize

ಆದರೆ, ಕಾಲೇಜಿನಲ್ಲಿ ಆಸಕ್ತಿ ತೋರದೆ ಎರಡನೇ ವರ್ಷದಲ್ಲೇ ಕಾಲೇಜು ಬಿಟ್ಟಿದ್ದರು. ಅವರು, ನಂತರ, ಪಾಲಿಟೆಕ್ನಿಕ್ ಕೋರ್ಸ್ ಮಾಡಿದರು. ಪ್ರವೇಶ ಮಟ್ಟದ ಟೆಲಿಕಾಲರ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ದೊರಕಿತು. ಇಲ್ಲಿ ಅವರ ಮೊದಲ ಸಂಬಳ ಕೇವಲ 11,000 ರೂ. ಆಗಿತ್ತು. ಆದರೆ ಇಂದು ಅವರು ಮೂರು ಯಶಸ್ವಿ ಕಂಪನಿಗಳ ಮಾಲೀಕರಾಗಿದ್ದಾರೆ. 

ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಸ್ವಲ್ಪ ಸಮಯದ ನಂತರ, ಸುಶೀಲ್ ಸಾಫ್ಟ್‌ವೇರ್ ಇಂಜಿನಿಯರ್ ಸರಿತಾ ರಾವತ್ ಅವರನ್ನು ಮದುವೆಯಾದರು. ಪತ್ನಿಯೊಂದಿಗೆ ಸುಶೀಲ್ ನೋಯ್ಡಾದಲ್ಲಿ ಯುಎಸ್ ಮೂಲದ ವ್ಯವಹಾರದ ಸಹಯೋಗದೊಂದಿಗೆ ಬಿಪಿಒ ಪ್ರಾರಂಭಿಸಿದರು.

ಇಲ್ಲಿಯೇ SSR Techvision ಅಸ್ತಿತ್ವಕ್ಕೆ ಬಂದಿತು. ಯುಎಸ್ ಮೂಲದ ವ್ಯಾಪಾರದೊಂದಿಗೆ ಕೇವಲ ಮೂರ್ನಾಲ್ಕು ತಿಂಗಳು ಕೆಲಸ ಮಾಡಿದ ನಂತರ, ಅವರು ನೋಯ್ಡಾದಲ್ಲಿ ಸಂಸ್ಥೆಯನ್ನು ಆರಂಭಿಸಿದರು.

2 ವರ್ಷಗಳ ನಂತರ ಸಂಪೂರ್ಣ ನೋಯ್ಡಾ ಕಟ್ಟಡವನ್ನು ಖರೀದಿಸಲು ಸುಶೀಲ್ ನಿರ್ಧರಿಸಿದರು. ಇದರ ನಂತರ, ಅವರು ಡಿಬಾಕೊವನ್ನು ಪ್ರಾರಂಭಿಸಿದರು.

ಇದು ಜಾಗತಿಕ B2C ಆನ್‌ಲೈನ್ ಬಟ್ಟೆ ಅಂಗಡಿಯಾಗಿದೆ. ಇದರ ನಂತರ ಅವರು ತಮ್ಮ ಮೂರನೇ ವ್ಯಾಪಾರ Saiva System Incನ್ನು 2019ರಲ್ಲಿ ಪ್ರಾರಂಭಿಸಿದರು. ಇದು ಬಹುರಾಷ್ಟ್ರೀಯ IT ಸಲಹಾ ಕಂಪನಿಯಾಗಿದೆ.

Saiva System In ಬಹುರಾಷ್ಟ್ರೀಯ ಐಟಿ ಕನ್ಸಲ್ಟೆಂಗ್‌ ಕಂಪನಿಯಾಗಿದ್ದು, ಈಗ ಅಮೆರಿಕ ಹಾಗೂ ಭಾರತದಲ್ಲಿ ಎಂಪ್ಲಾಯಿಮೆಂಟ್‌ ಏಜೆನ್ಸಿಯಾಗಿದೆ. ಆದರೆ ಸದ್ಯ ಸುಶೀಲ್‌ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಅದು ಹಲವು ಕೋಟಿಗಳಲ್ಲಿ ಇದೆ ಎಂಬುದಾಗಿ ಹಲವು ವರದಿಗಳು ಹೇಳುತ್ತಿವೆ.

ಸುಶೀಲ್ ಸಿಂಗ್ ಅವರ ಕಂಪನಿಗಳಲ್ಲಿ SSR Techvision, Deebaco ಮತ್ತು Cyva Systems ಸೇರಿವೆ. ಆದರೆ ಈ ಯಶಸ್ಸಿಗೆ ತಲುಪಲು ಅವರ ಹಾದಿಯು ಕಷ್ಟಕರವಾಗಿತ್ತು. ಕೇವಲ 11,000 ರೂ.ಗಳ ಮಾಸಿಕ ವೇತನದಿಂದ ವೃತ್ತಿ ಜೀವನ ಆರಂಭಿಸಿದ ಸುಶೀಲ್ ಸಿಂಗ್ ಅವರ ಗಳಿಕೆ ಇಂದು ಕೋಟಿಗಟ್ಟಲೆಯಾಗಿದೆ. ಸುಶೀಲ್ ಟೆಕ್ನೋಪ್ರೆನಿಯರ್ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಮೂರು ಲಾಭದಾಯಕ ಕಂಪನಿಗಳ ಸ್ಥಾಪಕರು ಮತ್ತು ಎನ್‌ಜಿಒ.

Latest Videos

click me!