ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?

Published : Jul 20, 2026, 12:01 PM IST

ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.

PREV
14
ಹೋಟೆಲ್ ಉದ್ಯಮಿಗಳ ಸಂಕಷ್ಟ

ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ. ಒಂದು ಕಾಲದಲ್ಲಿ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದ ಇವರ ಹೋಟೆಲ್ ಆದಾಯ ಎಲ್ಲಿಗೆ ಬಂದು ನಿಂತಿದೆ ಗೊತ್ತಾ? ಆತ ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..

24
ಹನ್ನೆರಡು ಲಕ್ಷದಿಂದ ಒಂದು ಲಕ್ಷಕ್ಕೆ ಕುಸಿದಿದ್ದೇಕೆ?

ರೆಸ್ಟೋರೆಂಟ್ ಮಾಲೀಕ ತನ್ನ ವ್ಯವಹಾರದ ಆರ್ಥಿಕ ಪರಿಸ್ಥಿತಿಯನ್ನ ವಿವರಿಸಿದ್ದು ಹೀಗೆ.. ಆರಂಭದಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ್ದಾಗ ತಿಂಗಳಿಗೆ 12 ರಿಂದ 13 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಕಾಲಕ್ರಮೇಣ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಜೊತೆಗೆ ನಿರ್ವಹಣಾ ವೆಚ್ಚಗಳು ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಮಾಲೀಕನ ಪ್ರಕಾರ ಪ್ರತಿ ತಿಂಗಳು ಹೋಟೆಲ್‌ಗಾಗಿ ಮಾಡಬೇಕಾದ ಅನಿವಾರ್ಯ ಖರ್ಚುಗಳನ್ನ ನೋಡೋದಾದ್ರೆ, ಬಾಡಿಗೆ 1 ಲಕ್ಷ ರೂಪಾಯಿ. ಸಿಬ್ಬಂದಿ ಸಂಬಳ ಅಂದಾಜು 1.5 ಲಕ್ಷ ರೂಪಾಯಿ. ವಿದ್ಯುತ್ ಬಿಲ್, ಕಚ್ಚಾ ಪದಾರ್ಥಗಳು (ದಿನಸಿ) ಮತ್ತು ಇತರ ನಿರ್ವಹಣಾ ವೆಚ್ಚಗಳು ಸೇರಿ ಸುಮಾರು 4 ಲಕ್ಷ ರೂಪಾಯಿ ತಗಲುತ್ತದೆ. ಎಲ್ಲಾ ಖರ್ಚುಗಳನ್ನು ಕಳೆದರೆ ಮಾಲೀಕನ ಕೈಗೆ ಉಳಿಯೋದು ಪ್ರತಿ ತಿಂಗಳು ಸುಮಾರು 1 ಲಕ್ಷ ರೂಪಾಯಿ ಮಾತ್ರ!

34
ವ್ಯಾಪಾರ ಕುಸಿತಕ್ಕೆ ಕಾರಣಗಳು ಏನು?

ವ್ಯಾಪಾರ ಕುಸಿತಕ್ಕೆ ಋತುಮಾನದ ಬದಲಾವಣೆಗಳೂ ಕಾರಣ ಎಂದಿದ್ದಾರೆ. ಬೇಸಿಗೆ ಕಾಲದಲ್ಲಿ ದೋಸೆ ಹೋಟೆಲ್‌ಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಚಳಿಗಾಲದಲ್ಲಿ ವ್ಯಾಪಾರ ತುಸು ಸುಧಾರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ಸಂಬಳ ಬರುವ ಕೆಲಸವನ್ನು ಅತ್ಯಂತ ಗೌರವಯುತವಾಗಿ ನೋಡುತ್ತಾರೆ. ತಿಂಗಳಿಗೆ 12 ಲಕ್ಷ ರೂಪಾಯಿ ವಹಿವಾಟು ನಡೆಸುವ ದೋಸೆ ಹೋಟೆಲ್ ಮಾಲೀಕನಿಗೆ ಅಂತಹ ಗೌರವ ಸಿಗುವುದಿಲ್ಲ. ಯಶಸ್ಸಿನ ಬಗ್ಗೆ ಜನರ ವ್ಯಾಖ್ಯಾನವೇ ವಿಚಿತ್ರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ಉದ್ಯಮಿಯಾಗಿರುವುದೇ ತಮಗೆ ಇಷ್ಟ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

44
ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ನೀವು ಕೇವಲ ಲಾಭದ ಬಗ್ಗೆ ಯೋಚಿಸುತ್ತಿಲ್ಲ, ಬದಲಿಗೆ ಹಲವು ಜನರಿಗೆ ಕೆಲಸ ನೀಡಿದ್ದೀರಿ, ಅದು ನಿಜವಾದ ಯಶಸ್ಸು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವ್ಯಾಪಾರದಲ್ಲಿ ಇಂತಹ ಏರಿಳಿತಗಳು ಸಾಮಾನ್ಯ, ನಿಮ್ಮ ಪ್ರಯತ್ನ ಮುಂದುವರಿಸಿ ಎಂದು ಹಲವರು ಬೆಂಬಲ ಸೂಚಿಸಿದ್ದಾರೆ. ಸ್ವಂತ ಉದ್ಯಮ ಮಾಡುವುದು ಸುಲಭದ ಮಾತಲ್ಲ ಎಂಬುದಕ್ಕೆ ಈ ದೋಸೆ ಹೋಟೆಲ್ ಮಾಲೀಕನ ಕಥೆಯೇ ಸಾಕ್ಷಿ. 12 ಲಕ್ಷದಿಂದ 1 ಲಕ್ಷಕ್ಕೆ ಲಾಭ ಇಳಿದರೂ ಎದೆಗುಂದದೆ ಸಾಗುತ್ತಿರುವ ಇವರ ಹಾದಿ ಅನೇಕರಿಗೆ ಸ್ಫೂರ್ತಿಯಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories