ನಕಲಿ ನೋಟು ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ. ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುವುದು.
ಭಾರತೀಯ ರಿಸರ್ವ್ ಬ್ಯಾಂಕ್ ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತೆಗೆದುಕೊಂಡು ಬರಲು ಮುಂದಾಗಿದ್ದು, ಈ ಸಂಬಂಧ ಟೆಂಡರ್ ಆಹ್ವಾನಿಸಿದೆ. ಪ್ಲಾಸ್ಟಿಕ್ ನೋಟುಗಳಿಗೆ ಬೇಕಾದ ಹಾಳೆಗಳ ಪೂರೈಕೆಗೆ ಖಾಸಗಿ ಕಂಪನಿಗಳಿಗೆ ಆರ್‌ಬಿಐ ಆಹ್ವಾನಿಸಿದೆ.
27
10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳು
ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಲಾಗುವುದು. ಆ ಬಳಿಕ ಹಂತ ಹಂತವಾಗಿ ಇನ್ನುಳಿದ ನೋಟುಗಳ ಮುದ್ರಣಕ್ಕೆ ಆರ್‌ಬಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಹೊಸ ಪ್ಲಾಸ್ಟಿಕ್ ನೋಟುಗಳು ಹೇಗಿರುತ್ತವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರ ಬಂದಿಲ್ಲ. ನಕಲಿ ನೋಟುಗಳ ಹಾವಳಿ ತಡೆಯಲು ಅತ್ಯಂತ ಗುಣಮಟ್ಟದ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರಲು ಆರ್‌ಬಿಐ ಪ್ಲಾನ್ ಮಾಡಿಕೊಂಡಿದೆ.
37
ನಾಲ್ಕು ಹಂತಗಳ ಪರಿಶೀಲನೆ ಸಾಧ್ಯತೆ
ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ನೀತಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾಲ್ಕು ಹಂತಗಳ ಪರಿಶೀಲನೆ ಬಳಿಕವಷ್ಟೇ ಪಾಲಿಮರ್ ನೋಟುಗಳನ್ನು ಮುದ್ರಣ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಪಾಲಿಮರ್ ನೋಟ್ ಬರೋದು ಖಚಿತ ಎಂಬವುದು ಸ್ಪಷ್ಟವಾಗಿದೆ.
ಪಾಲಿಮರ್ ನೋಟ್ ಚಲಾವಣೆ ಪ್ರಕ್ರಿಯೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಮುದ್ರಣಕ್ಕೂ ಮುನ್ನ ನೋಟುಗಳು ದೇಶದ ಹವಾಮಾನ, ಬಳಕೆ ವಿಧಾನ, ಸಾರ್ವಜನಿಕರ ಅನುಕೂಲ, ಬ್ಯಾಂಕ್‌ಗಳ ಅಗತ್ಯತೆ ಮತ್ತು ಎಟಿಎಂ ಸೌಲಭ್ಯ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಎಂದು ವರದಿಯಾಗಿದೆ. ಈ ನೋಟುಗಳು ಹಗರು ಮತ್ತು ತೆಳುವಾಗಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಂತೆ ಕಠಿಣವಾಗಿರಲ್ಲ.
57
ನಕಲಿ ನೋಟು ಸಮಸ್ಯೆ ಶೂನ್ಯ ಸಾಧ್ಯತೆ
2012ರಲ್ಲಿ ಮೈಸೂರು, ಜೈಪುರ, ಭುವನೇಶ್ವರ ಮತ್ತು ಶಿಮ್ಲಾ ಸೇರಿದಂತೆ ಕೆಲವು ನಗರಗಳಲ್ಲಿ ಸುಮಾರು 1 ಬಿಲಿಯನ್ ಪಾಲಿಮರ್‌ನ 10 ರೂ. ಮುಖಬೆಲೆಯ ನೋಟುಗಳ ಪರೀಕ್ಷೆಗೆ ಭಾರತ ಸರ್ಕಾರ ಅನುಮೋದನೆ ನೀಡಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಈ ಪರೀಕ್ಷೆ ಮುಂದುವರಿಯಲಿಲ್ಲ. ಈ ಹೊಸ ಪಾಲಿಮರ್ ನೋಟುಗಳಿಂದ, ಹರಿಯುವಿಕೆ, ಗಲೀಜು ಆಗುವಿಕೆ ಸಮಸ್ಯೆಗಳು ದೂರವಾಗಲಿವೆ. ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ನಕಲಿ ನೋಟು ಸಮಸ್ಯೆಯೂ ನಿವಾರಣೆಯಾಗಲಿದೆ.
67
ಸುಧಾರಿತ ವೈಶಿಷ್ಟ್ಯ
ಮೈಕ್ರೋ-ಆಪ್ಟಿಕ್ ಹೊಲೊಗ್ರಾಮ್ ಮತ್ತು ವಿಶೇಷ ಶಾಯಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಪಾಲಿಮರ್ ನೋಟುಗಳಲ್ಲಿ ಬಳಸಲಾಗುತ್ತದೆ. ಕಾಗದದ ನೋಟುಗಳಿಗೆ ಹೋಲಿಸಿದರೆ ಅವುಗಳ ಉತ್ಪಾದನಾ ವೆಚ್ಚವೂ ಕಡಿಮೆ ಇರುತ್ತದೆ. ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮತ್ತು ನ್ಯೂಜಿಲೆಂಡ್‌ನಂತಹ ಅನೇಕ ದೇಶಗಳಲ್ಲಿ ಪಾಲಿಮರ್ ನೋಟುಗಳು ಹಲವು ವರ್ಷಗಳಿಂದ ಚಲಾವಣೆಯಲ್ಲಿವೆ.
77
ಮುದ್ರಣಾವೆಚ್ಚ ಏರಿಕೆ
ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ಈ ಹಿಂದಿನ ವರ್ಷ ನೋಟು ಮುದ್ರಣಾ ವೆಚ್ಚ ₹5,101.4 ಕೋಟಿಗಳಿಂದ ₹6,372.8 ಕೋಟಿಗೆ ಏರಿಕೆಯಾಗಿತ್ತು. ಹೊಸ ನೋಟುಗಳ ಬೇಡಿಕೆ ಹೆಚ್ಚಾದ ಹಿನ್ನೆಲೆ ಮುದ್ರಣಾವೆಚ್ಚ ಏರಿಕೆಯಾಗಿತ್ತು. ಆರ್ಥಿಕ ವರ್ಷ 2025ರಲ್ಲಿ ಹಳೆ/ಕೊಳಕು/ಹರಿದ ಸುಮಾರು 23.8 ಬಿಲಿಯನ್ ನೋಟುಗಳನ್ನು ವಿಲೇವಾರಿ ಮಾಡಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.