ಪಿಎಫ್ to ಆದಾಯ ತೆರಿಗೆ, ಹೊಸ ವರ್ಷ (2026) ಹಲವು ನಿಯಮ ಬದಲಾಗುತ್ತಿದೆ. ಪಿಎಫ್, ಆದಾಯ ತೆರಿಗೆ, 8ನೇ ವೇತನ ಆಯೋಗ ಸೇರಿದಂತೆ ಹೊಸ ವರ್ಷದಲ್ಲಿ ಬದಲಾವಣೆಯಾಗುತ್ತಿರುವ ಹಣದ ನಿಯಮಗಳ ವಿವರ ಇಲ್ಲಿದೆ. ಇದು ನೇರವಾಗಿ ನಿಮ್ಮ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದೆ.
ಹೊಸ ವರ್ಷ ಬಂದಿದೆ. ಕೆಲವೇ ದಿನದಲ್ಲಿ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗೂ ಎಲ್ಲರೂ ಸಜ್ಜಾಗಿದ್ದಾರೆ. ಇದೇ ವೇಳೆ ಭಾರತದಲ್ಲಿ ಹಲವು ನಿಯಮಗಳು ಜನವರಿ 1 ರಿಂದ ಬದಲಾಗುತ್ತಿದೆ. ಈ ಪೈಕಿ ಕೆಲ ನಿಯಮಗಳು ನಿಮ್ಮ ಆರ್ಥಿಕತೆಗೆ ಸಂಬಂಧಿಸಿದೆ. ಹೀಗಾಗಿ ಹೊಸ ವರ್ಷದಲ್ಲಿ ಆಗಲಿರುವ ನಿಯಮ ಬದಲಾವಣೆ ತಿಳಿದಿರುವ ಅವಶ್ಯಕತೆ ಇದೆ.
26
8ನೇ ವೇತನ ಆಯೋಗ
ಸ್ಯಾಲರಿ ಪಡೆಯುವ ಮಂದಿಗೆ ಈ ನಿಯಮ ಬದಲಾವಣೆ ತಿಳಿದಿರಬೇಕು. 2026ರಿಂದ 8ನೇ ವೇತನ ಆಯೋಗ ಜಾರಿಯಾಗುತ್ತಿದೆ. ಇದರಿಂದ ಸ್ಯಾಲರಿ ಹೆಚ್ಚಾಗಲಿದೆ. ಈ ವೇತನ ಆಯೋಗ ನೇರವಾಗಿ ಸರ್ಕಾರಿ ನೌಕರರಿಗೆ ಸಂಬಂಧಿಸಿದೆ.ಸರ್ಕಾರಿ ನೌಕರರ ವೇತನ 8ನೇ ವೇತನ ಆಯೋಗ ಜಾರಿಯಿಂದ ಹೆಚ್ಚಾಗಲಿದೆ.
36
ತೆರಿಗೆ ಪಾವತಿ ಮತ್ತಷ್ಟು ಸುಲಭ
ಹೊಸ ವರ್ಷದಿಂದ ತೆರಿಗೆ ಪಾವತಿ ಮತ್ತಷ್ಟು ಸುಲಭವಾಗಿದೆ. ಕಾರಣ ಇತ್ತೀಚೆಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿ ಜನರ ಜೀವನಕ್ಕೆ ನೆರವಾಗಿದೆ. ಇತ್ತ ಫ್ರೀ ಫಿಲ್ಲಡ್ ಐಟಿಆರ್ ಫಾರ್ಮ್‌ಗಳಿಂದ ತೆರಿಗೆ ಪಾವತಿ, ಐಟಿಆರ್ ಹೊಸ ವರ್ಷದಿಂದ ಅತ್ಯಂತ ಸುಲಭವಾಗಲಿದೆ. ಹೆಚ್ಚಿನ ಗೊಂದಲಕ್ಕೂ ಅವಕಾಶವಿಲ್ಲ.
ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ನೀತಿಯಲ್ಲಿ ಹೊಸ ವರ್ಷದಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ. ಪ್ರಮುಖವಾಗಿ ಹಣ ಹಿಂಪಡೆಯಲು ಇದ್ದ ಸಂಕಷ್ಟಗಳು ನಿವಾರಣೆಯಾಗಿದೆ. ತುರ್ತು ಅಗತ್ಯತೆ ಸೇರಿದಂತೆ ಇತರ ಕಾರ್ಯಗಳಿಗೆ ಪಿಎಫ್ ಹಣ ಹಿಂಪಡೆಯ ಪ್ರಕ್ರಿಯೆ ಸರಳಗೊಳಿಸಲಾಗಿದೆ.
56
ಬ್ಯಾಂಕಿಂಗ್ ಸುರಕ್ಷತೆ ನಿಯಮ
ಬ್ಯಾಂಕಿಂಗ್ ನಿಯಮಗಳು ಕಠಿಣಗೊಳ್ಳುತ್ತಿದೆ. ಗ್ರಾಹಕರ ಸುರಕ್ಷತೆ ಹೆಚ್ಚಿಸಲಾಗುತ್ತಿದೆ. ಜನವರಿ 1 ರಿಂದ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯವಾಗಿದೆ. ಇನ್ನು ಯುಪಿಐ ನಿಯಮಗಳು ಕಠಿಣಗೊಳ್ಳುತ್ತಿದೆ. ಈ ಮೂಲಕ ವಂಚನೆ, ಸೈಬರ್ ದಾಳಿಗಳ ಮೂಲಕ ಹಣ ವಂಚನೆ ತಡೆಯಲು ನೀತಿಗಳು ಬದಲಾಗುತ್ತಿದೆ.
ಬ್ಯಾಂಕಿಂಗ್ ಸುರಕ್ಷತೆ ನಿಯಮ
66
ಹಣದುಬ್ಬರ ಪರಿಣಾಮ ಇಳಿಕೆ
ಹಣದುಬ್ಬರಿಂದ ಅಗತ್ಯವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಅತೀ ದೊಡ್ಡ ಸಮಸ್ಯೆಯಾಗಿದೆ. ಹೊಸ ವರ್ಷದಿಂದ ಸಿಎನ್‌ಜಿ ಗ್ಯಾಸ್, ಪಿಎನ್‌ಜಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಹಣದುಬ್ಬರ ಪರಿಣಾಮ ಇಳಿಕೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.