ಮೆಟಾ ಸಂಸ್ಥೆ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲೊಂದು. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸಾಪ್ ಒಡೆತನ ಹೊಂದರುವ ಮೆಟಾ ಕಂಪನಿ ವಿಶ್ವದ ಅತೀ ಹೆಚ್ಚು ಆದಾಯ ಮಾಡುತ್ತಿರುವ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಆದರೆ ಮೆಟಾ ಕಂಪನಿಯ ಸಿಇಒ ಜುಕರ್‌ಬರ್ಗ್ ಸ್ಯಾಲರಿ ಕೇವಲ 85 ರೂಪಾಯಿ ಮಾತ್ರ.