Published : Apr 15, 2025, 07:54 AM ISTUpdated : Apr 15, 2025, 07:55 AM IST
Gold And Silver Price: ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 88,700 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ಬೆಲೆ 93,140 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ಸಹ ಇಳಿಕೆಯಾಗಿದ್ದು, 10 ಗ್ರಾಂ ಬೆಳ್ಳಿ 998 ರೂಪಾಯಿ ಆಗಿದೆ.
ಸೋಮವಾರ ದೇಶದ ಬಹುತೇಕ ಎಲ್ಲಾ ನಗರಗಳಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇಂದು ಸಹ ಚಿನ್ನದ ಬೆಲೆ ಕುಸಿತ ಕಂಡಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
27
ಚಿನ್ನದ ಬೆಲೆ ಸರಾಸರಿಯಲ್ಲಿ ಇಳಿಕೆಯಾಗಿದೆ. ಇದು ಹಲವರಿಗೆ ಸಮಾಧಾನ ತರಿಸಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 90 ಸಾವಿರದ ಗಡಿಯನ್ನು ದಾಟಿದ್ದು, ಲಕ್ಷದ ಹೊಸ್ತಿನಲ್ಲಿ ಬಂದು ನಿಂತಿದೆ. ಬೆಲೆ ಏರಿಕೆಯಾಗುತ್ತಿದ್ದರು ಹೂಡಿಕೆ ಮಾತ್ರ ಕಡಿಮೆಯಾಗಿಲ್ಲ.
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 998 ರೂಪಾಯಿ
100 ಗ್ರಾಂ: 9,980 ರೂಪಾಯಿ
1000 ಗ್ರಾಂ: 99,800 ರೂಪಾಯಿ
77
ಚಿನ್ನ ಅತೀ ದುಬಾರಿ. ಹಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನ ಖರೀದಿ, ಆಭರಣ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಪ್ರತಿ ದಿನ ಹೆಚ್ಚಾಗುತ್ತಲೇ ಹೋಗಿದೆ. ಇದರ ಪರಿಣಾಮ ಚಿನ್ನದ ಬೆಲೆಯೂ ದುಬಾರಿಯಾಗುತ್ತಾ ಸಾಗಿದೆ.