ಈ ಬಾರಿ ಮುಕೇಶ್ ಅಂಬಾನಿಗೆ ದೀಪಾವಳಿ ಗಿಫ್ಟ್, ರಿಲಯನ್ಸ್ ಇಂಡಸ್ಟ್ರಿಗೆ 22 ಸಾವಿರ ಕೋಟಿ ಲಾಭ ಮಾಡಿದೆ. ಪ್ರತಿ ದೀಪಾವಳಿಗೆ ಗ್ರಾಹಕರಿಗೆ ಉಡುಗೊರೆ ನೀಡುತ್ತಿದ್ದ ಅಂಬಾನಿಗೆ ಈ ಬಾರಿ ಕಂಪನಿ ಭರ್ಜರಿ ಲಾಭದ ಉಡುಗೊರೆ ನೀಡಿದೆ.
ಮುಕೇಶ್ ಅಂಬಾನಿ ದೀಪಾವಳಿ ಹಬ್ಬದ ವೇಳೆ ಜಿಯೋ ಗ್ರಾಹಕರು ಸೇರಿದಂತೆ ತಮ್ಮ ಗ್ರಾಹಕರಿ ಹಬ್ಬದ ಆಫರ್ ನೀಡುತ್ತಾರೆ. ಇತ್ತ ಸಿಬ್ಬಂದಿಗಲಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡುತ್ತಾರೆ. ಈ ಬಾರಿಯ ದೀಪಾವಳಿ ಮುಕೇಶ್ ಅಂಬಾನಿಗೆ ವಿಶೇಷ. ಕಾರಣ ರಿಲಯನ್ಸ್ ಇಂಡಸ್ಟ್ರಿ 2ನೇ ತ್ರೈಮಾಸಿಕದಲ್ಲಿ 22,146 ಕೋಟಿ ರೂಪಾಯಿ ಲಾಭ ಪಡೆದಿದೆ. ಏಕೀಕೃತ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 15.9ರಷ್ಟು ಜಿಗಿತವನ್ನು ಕಂಡಿದೆ.
26
ಭರ್ಜರಿ ಲಾಭದಲ್ಲಿ ರಿಲಯನ್ಸ್
ಭರ್ಜರಿ ಲಾಭದಲ್ಲಿ ರಿಲಯನ್ಸ್
ರಿಲಯನ್ಸ್ ವ್ಯವಹಾರಗಳಿಂದ ಬರುವ ಆದಾಯವು ₹283,548 ಕೋಟಿಗಳಷ್ಟಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ ದಾಖಲಾಗಿದ್ದ ರೂ. 258,027 ಕೋಟಿಗಿಂತ ಶೇ 9.9 ರಷ್ಟು ಹೆಚ್ಚಾಗಿದೆ. 2025ರ ಜೂನ್ ತ್ರೈಮಾಸಿಕದಲ್ಲಿ 273,252 ಕೋಟಿಗಳಷ್ಟು ಇದ್ದದ್ದು ತ್ರೈಮಾಸಿಕದಿಂದ ತ್ರೈಮಾಸಿಕದ ಆಧಾರದಲ್ಲೂ ಹೆಚ್ಚಾಗಿದೆ.
36
ಜಿಯೋ ಪ್ಲಾಟ್‌ಫಾರ್ಮ್
ಜಿಯೋ ಪ್ಲಾಟ್‌ಫಾರ್ಮ್
ರಿಲಯನ್ಸ್ ಜಿಯೋ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.6 ರಷ್ಟು ಹೆಚ್ಚಾಗಿ ರೂ. 36,332 ಕೋಟಿಗಳಿಗೆ ತಲುಪಿದೆ. ಇನ್ನು ತೆರಿಗೆ ನಂತರದ ಲಾಭ ವರ್ಷದಿಂದ ವರ್ಷಕ್ಕೆ ಶೇ 12.8ರಷ್ಟು ಏರಿಕೆಯಾಗಿ, ರೂ. 7,379 ಕೋಟಿಗಳಿಗೆ ತಲುಪಿದೆ. ಕಂಪನಿಯ ಬಹುನಿರೀಕ್ಷಿತ ಐಪಿಒಗಿಂತ ಮುಂಚಿತವಾಗಿ ಜಿಯೋದ ಎರಡನೇ ತ್ರೈಮಾಸಿಕದ ಎಆರ್ ಪಿಯು ರೂ. 211.4ಕ್ಕೆ ಏರಿದೆ, ಗ್ರಾಹಕರ ತೊಡಗಿಸಿಕೊಳ್ಳುವಿಕೆ ಹೆಚ್ಚಿದೆ, ಇದು ಸದ್ಯಕ್ಕೆ 5ಜಿ ಆಫರ್ ಗಳಿಂದ ಪ್ರಭಾವಿತವಾಗಿದೆ.
ರಿಟೇಲ್ ವಿಭಾಗವು ಆದಾಯ ಮತ್ತು ಲಾಭ ಎರಡರಲ್ಲೂ ಆರೋಗ್ಯಕರ ಬೆಳವಣಿಗೆಯನ್ನು ನೀಡಿದ್ದು, ಮಾರ್ಜಿನ್ ಸ್ವಲ್ಪ ಕಡಿಮೆಯಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯವು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಹೆಚ್ಚಾಗಿ ರೂ. 79,128 ಕೋಟಿಗಳಿಗೆ ತಲುಪಿದೆ. ಆದರೆ ತೆರಿಗೆ ನಂತರದ ಲಾಭವು ವರ್ಷದಿಂದ ವರ್ಷಕ್ಕೆ ಶೇ 21.9ರಷ್ಟು ಹೆಚ್ಚಾಗಿ ರೂ. 3,457 ಕೋಟಿಗಳಿಗೆ ತಲುಪಿದೆ. ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 16.5ರಷ್ಟು ಹೆಚ್ಚಾಗಿ ರೂ. 6,816 ಕೋಟಿಗಳಿಗೆ ತಲುಪಿದೆ. ಇಬಿಐಟಿಡಿಎ ಲಾಭವು 20 ಬೇಸಿಸ್ ಪಾಯಿಂಟ್‌ಗಳಿಂದ ಶೇ 8.6 ಕ್ಕೆ ಇಳಿದಿದೆ. ಹಬ್ಬದ ಬೇಡಿಕೆ ಮತ್ತು ಜಿಎಸ್‌ಟಿ ದರ ಕಡಿತವು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ.
56
ಒ2ಸಿ (ತೈಲದಿಂದ ರಾಸಾಯನಿಕದವರೆಗೆ) ವ್ಯವಹಾರ
ಒ2ಸಿ (ತೈಲದಿಂದ ರಾಸಾಯನಿಕದವರೆಗೆ) ವ್ಯವಹಾರ
ತೈಲದಿಂದ ರಾಸಾಯನಿಕಗಳ (O2C) ಆದಾಯವು ವರ್ಷದಿಂದ ವರ್ಷಕ್ಕೆ ಶೇ 3.2 ರಷ್ಟು ಹೆಚ್ಚಾಗಿ ರೂ. 160,558 ಕೋಟಿಗಳಿಗೆ ತಲುಪಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಘಟಕಗಳಲ್ಲಿ ಹೆಚ್ಚಿನ ಥ್ರೋಪುಟ್ ಇರುವುದರಿಂದ ಮಾರಾಟಕ್ಕೆ ಉದ್ದೇಶಿಸಲಾದ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇ 2.3 ರಷ್ಟು ಹೆಚ್ಚಾಗಿ ರೂ. 15,008 ಕೋಟಿಗಳಿಗೆ ತಲುಪಿದೆ.ಈ ವ್ಯವಹಾರದ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 5.4 ರಷ್ಟು ಕುಸಿದು ರೂ. 5,002 ಕೋಟಿಗಳಿಗೆ ತಲುಪಿದೆ, ಇಬಿಐಟಿಡಿಎ ಮಾರ್ಜಿನ್ 240 ಬೇಸಿಸ್ ಪಾಯಿಂಟ್‌ಗಳಿಂದ ಶೇ 82.6ಕ್ಕೆ ಇಳಿದಿದೆ.
66
ಲಾಭದ ಕುರಿತು ಮುಕೇಶ್ ಅಂಬಾನಿ ಹೇಳಿದ್ದೇನು?
ಲಾಭದ ಕುರಿತು ಮುಕೇಶ್ ಅಂಬಾನಿ ಹೇಳಿದ್ದೇನು?
ರಿಲಯನ್ಸ್ ಎರಡನೇ ತ್ರೈಮಾಸಿಕದಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ನೀಡಿದ್ದು, ಇದು ನಮ್ಮ ಮೂರು ಪ್ರಮುಖ ವ್ಯವಹಾರ ಘಟಕಗಳಾದ ಆಯಿಲ್ ಟು ಕೆಮಿಕಲ್ಸ್, ಜಿಯೋ ಮತ್ತು ರೀಟೇಲ್‌ನ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ನಮ್ಮ ಒಟ್ಟು ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ 14.6ರಷ್ಟು ಹೆಚ್ಚಾಗಿದೆ, ಇದು ನಮ್ಮ ವ್ಯವಹಾರ ತಂತ್ರದ ಪಾರಮ್ಯ, ದೇಶೀಯ ಮಾರುಕಟ್ಟೆಯ ಮೇಲಿನ ನಮ್ಮ ಗಮನ ಹಾಗೂ ಭಾರತದ ಆರ್ಥಿಕತೆಯಲ್ಲಿ ನಮ್ಮ ನಿರಂತರ ಬಲವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.