ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ

Published : Dec 17, 2025, 10:53 PM IST

ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ ಪಡೆದಿದೆ. ಅದು ಅಂಬಾನಿ ಕುಟುಂಬ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕುಟುಂಬ ಯಾವುದು?

PREV
16
2025ರ ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ

2025ರ ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿಯನ್ನು ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದೆ. ಕುಟುಂಬ ತಲೆ ತಲಾಂತರಗಳಿಂದ ಉದ್ಯಮ ನಡೆಸಿಕೊಂಡು, ವಿಸ್ತರಣೆ ಮಾಡುತ್ತಾ ಉತ್ತಮ ಆದಾಯ ಪಡೆಯುತ್ತಿರುವ ಕುಟುಂಬಗಳ ಪಟ್ಟಿಯನ್ನು ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕುಟುಂಬ ಮುಕೇಶ್ ಅಂಬಾನಿ ಫ್ಯಾಮಿಲಿ.

26
ಅಂಬಾನಿ ಕುಟುಂಬದ ಒಟ್ಟು ಆಸ್ತಿ ಎಷ್ಟು?

ಧೀರೂಬಾಯಿ ಅಂಬಾನಿ 1950ರಲ್ಲಿ ಆರಂಭಿಸಿದ ರಿಲಯನ್ಸ್ ಉದ್ಯಮ ಹಂತ ಹಂತವಾಗಿ ಬೆಳೆದು ನಿಂತಿದೆ. ಧೀರೂಬಾಯಿ ಅಂಬಾನಿಯಿಂದ ಮುಕೇಶ್ ಅಂಬಾನಿ, ಇದೀಗ ಮುಕೇಶ್ ಅಂಬಾನಿ ಮಕ್ಕಳು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮುಕೇಶ್ ಅಂಬಾನಿ ಕುಟುಂಬದ ಒಟ್ಟು ಆಸ್ತಿ ಸರಿಸುಮಾರು 105.6 ಬಿಲಿಯನ್ ಅಮೆರಿಕನ್ ಡಾಲರ್.

36
8ನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ ಫ್ಯಾಮಿಲಿ

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅಕಾಶ್ ಅಂಬಾನಿ, ಅನಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಕುಟುಂಬಗಳು ವಿವಿಧ ಉದ್ಯಮ ನಡೆಸುತ್ತಿದ್ದಾರೆ. ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕುಟುಂಬ 8ನೇ ಸ್ಥಾನದಲ್ಲಿದೆ.

46
ಶ್ರೀಮಂತ ಕುಟುಂಬಳ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ?

ಶ್ರೀಮಂತ ಕುಟುಂಬಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಮೆರಿಕ ವಾಲ್ಟನ್ ಕುಟುಂಬದ ಪಾಲಾಗಿದೆ. ಅತೀ ದೊಡ್ಡ ಉದ್ಯಮ ಹೊಂದಿರುವ ವಾಲ್‌ಮಾರ್ಟ್ ಒಡೆತನ ಹೊಂದಿರುವ ವಾಲ್ಟನ್ ಕುಟುಂಬದ ಒಟ್ಟು ಆಸ್ತಿ ಸರಿಸುಮಾರು 513.4 ಬಿಲಿಯನ್ ಅಮೆರಿಕನ್ ಡಾಲರ್. ಇವರ ವಾಲ್‌ಮಾರ್ಟ್ ಕಂಪನಿ ಆದಾಯ 681 ಬಿಲಿಯನ್ ಡಾಲರ್.

56
ಅಬು ಧಾಬಿಯ ಅಲ್ ನಹ್ಯಾನ್ ಕುಟುಂಬ

ಅಬು ಧಾಬಿಯಲ್ಲಿ ಆಡಳಿತ ನಡೆಸುತ್ತಿರುವ ಅಲ್ ನಹ್ಯಾನ್ ಕುಟುಂಬ 2ನೇ ಸ್ಥಾನದಲ್ಲಿದೆ. ಅಲನ್ ನಹ್ಯಾನ್ ಕುಟುಂಬದ ಒಟ್ಟು ಆಸ್ತಿ ಸರಿಸುಮಾರು 335.9 ಬಿಲಿಯನ್ ಡಾಲರ್. ಯುನೈಟೆಡ್ ಅರಬ್ ಎಮಿರೈಟ್ಸ್‌ನ ಬಹುತೇಕ ತೈಲ ಸಂಪತ್ತು ಇದೇ ಕುಟುಂಬದ ಹಿಡಿತದಲ್ಲಿದೆ. ಅಬು ದಾಬಿ ಅಧ್ಯಕ್ಷ ಇದೇ ಕುಟುಂಬದ ಶೇಕ್ ಮೊಹಮ್ಮದ್ ಬಿನ್ ಝ್ಯಾಯದ್ ಅಲ್ ನಹ್ಯಾನ್.

ಅಬು ಧಾಬಿಯ ಅಲ್ ನಹ್ಯಾನ್ ಕುಟುಂಬ

66
ಸೌದಿ, ಖತಾರ್ ಸೇರಿ ಅರಬ್ ಕುಟುಂಬಗಳು

ನಂತರದ ಸ್ಥಾನದಲ್ಲಿ ಹಲವು ರಾಯಲ್ ಕುಟುಂಬಗಳು ಸ್ಥಾನ ಪಡೆದಿದೆ. ಸೌದಿ ಅರೆಬಿಯಾದ ಅಲ್ ಸೌದ್ ಕುಟುಂಬ, ಖತಾರ್‌ನ ರಾಯಲ್ ತುಟುಂಬ ಅಲ್ ಥನಿ ಕುಟುಂಬ, ಬರ್ಕಿನ್ ಹ್ಯಾಂಡ್‌ಬ್ಯಾಗ್ ಸೇರಿದಂತೆ ಲಕ್ಷುರಿ ಉತ್ಪನ್ನಗಳ ಕಂಪನಿ ನಡೆಸುತ್ತಿರುವ ಹರ್ಮ್ಸ್ ಕುಟುಂಬ, ಅಮೆರಿಕ ಕೋಚ್ ಕೆಮಿಕಲ್, ಆಯಿಲ್ ಇಂಜಸ್ಟ್ರಿ ಉದ್ಯಮ ನಡೆಸುತ್ತಿರುವ ಕೋಚ್ ಫ್ಯಾಮಿಲಿ, ಎಂ ಆ್ಯಂಡ್ ಎಂ, ಸ್ನಿಕರ್ಸ್ ಚಾಲೋಕೇಟ್ ಸೇರಿದಂತೆ ಹಲವು ಉತ್ಪನ್ನಗಳ ನಡೆಸುತ್ತಿರುವ ಮಾರ್ಸ್ ಫ್ಯಾಮಿಲಿ, ಲಕ್ಷುರಿ ಫ್ಯಾಶನ್ ಚಾನೆಲ್ ಸೇರಿದಂತೆ ಹಲವು ಬ್ರ್ಯಾಂಡ್ ಉತ್ಪನ್ನ ಹೊಂದಿರುವ ವರ್ಟ್‌ಮಿಯರ್ ಫ್ಯಾಮಿಲಿ, ಕನೆಡಾ ಥಾಮ್ಸನ್ ರಾಯಟರ್ಸ್ ಸಂಸ್ಥೆ ಹೊಂದಿರುವ ಥಾಮ್ಸನ್ ಫ್ಯಾಮಿಲಿ ನಂತರದ ಸ್ಥಾನ ಪಡೆದಿದೆ.

ಸೌದಿ, ಖತಾರ್ ಸೇರಿ ಅರಬ್ ಕುಟುಂಬಗಳು

Read more Photos on
click me!

Recommended Stories