LPG Price 1st November 2025: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಬದಲಾಗಿ ವರ್ಷದಲ್ಲಿ 50 ರೂ. ಏರಿಕೆಯಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ನಡುವೆ ಸಾರ್ವಜನಿಕರಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಕಳೆದ ಒಂದು ವರ್ಷದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 200 ರೂ.ಗಳಷ್ಟು ಏರಿಳಿತ ಕಂಡು ಬಂದಿದೆ. ಇದೀಗ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಕಡಿಮೆಯಾಗಿದೆ. ಬಿಹಾರ ರಾಜಧಾನಿ ಪಟನಾದಲ್ಲಿ 5 ರೂ.ಗಳಷ್ಟು ಕುಸಿತವಾಗಿದೆ.
25
ವಾಣಿಜ್ಯ ಬಳಕೆಯ ಸಿಲಿಂಡರ್
ಬೆಲೆ ಇಳಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಮಾತ್ರ ಅನ್ವಯಿಸಲಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ನವೆಂಬರ್ 1, 2024 ರಂದು 1802 ರೂ.ಗೆ ಒಂದು 19 ಕೆಜಿ ಸಿಲಿಂಡರ್ ಸಿಗುತ್ತಿತ್ತು. ಈ ವರ್ಷ ಇದರ ಬೆಲೆ 1590.50 ರೂ.ಗಳಷ್ಟಿದೆ. ಆದ್ರೆ ಗೃಹ ಬಳಕೆ ಸಿಲಿಂಡರ್ ಬೆಲೆ 50 ರೂ.ಗಳಷ್ಟು ಏರಿಕೆಯಾಗಿದೆ.
ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ದರಗಳ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ರಾಜ್ಯಗಳು ಎಲ್‌ಪಿಜಿ ಮೇಲೆ ಹೆಚ್ಚುವ ಸೆಸ್ ಅಥವಾ ತೆರಿಗೆಗಳನ್ನು ವಿಧಿಸುತ್ತವೆ, ಇದು ಬೆಲೆ ವ್ಯತ್ಯಾಸಗಳಿಗೆ ಕಾರಣವಾಗಬಹುದು. ಸಾರಿಗೆ ವೆಚ್ಚ, ಆಡಳಿತಾತ್ಕಕ, ವಿತರಣಾ ವೆಚ್ಚವೂ ಬೆಲೆಯ ವ್ಯತ್ಯಾಸಕ್ಕೆ ಕಾರಣವಾಗುತ್ತವೆ.