ಫೆಡ್ ರೇಟ್ ಕಡಿತದಿಂದ ಬಂಪರ್, ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆ

Published : Oct 31, 2025, 01:00 PM IST

ಫೆಡ್ ರೇಟ್ ಕಡಿತದಿಂದ ಬಂಪರ್, ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆ, ಇಂದು ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಬೆಲೆ ಇಳಿಕೆಯಾಗಿದೆ. ಅಮೆರಿಕ ಚೀನಾ ನಡುವಿನ ಟೆನ್ಶನ್ ಕಡಿಮೆಯಾದಲ್ಲಿ ಮತ್ತಷ್ಟು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

PREV
15
ಅಕ್ಟೋಬರ್ 31ರಂದು ಇಳಿಕೆ ಕಂಡ ಚಿನ್ನ

ಸಾಲು ಸಾಲು ಹಬ್ಬಗಳ ಬಳಿಕ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಪ್ರಮುಖವಾಗಿ ಅಮೆರಿಕ ಹಾಗೂ ಚೀನಾ ನಡುವಿನ ಮಾತುಕತೆ ಫಲಪ್ರದವಾದರೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇಂದು (ಅಕ್ಟೋಬರ್ 31) ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆಯಾಗಿದೆ.

ಅಕ್ಟೋಬರ್ 31ರಂದು ಇಳಿಕೆ ಕಂಡ ಚಿನ್ನ

25
ಇಂದಿನ ಚಿನ್ನದ ದರ

24 ಕ್ಯಾರೆಟ್ ಚಿನ್ನ : 1,21,470 ರೂಪಾಯಿ (10 ಗ್ರಾಂ)

22 ಕ್ಯಾರೆಟ್ ಚಿನ್ನ: 1,11,340 ರೂಪಾಯಿ (10 ಗ್ರಾಂ)

18 ಕ್ಯಾರೆಟ್ ಚಿನ್ನ: 91,100 ರೂಪಾಯಿ (10 ಗ್ರಾಂ)

ಇಂದಿನ ಚಿನ್ನದ ದರ

35
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ

24 ಕ್ಯಾರೆಟ್ ಚಿನ್ನ : 12,147 (1 ಗ್ರಾಂ)

22 ಕ್ಯಾರೆಟ್ ಚಿನ್ನ: 11,134 (1 ಗ್ರಾಂ)

18 ಕ್ಯಾರೆಟ್ ಚಿನ್ನ: 9,110 (1 ಗ್ರಾಂ)

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ

45
ಕುಸಿತದಿಂದ MCX ಆರಂಭ

ಭಾರತದ ಮಲ್ಟಿ ಕಾಮೋಡಿಟಿ ಎಕ್ಸ್‌ಚೇಂಜ್ ( MCX ) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿನ್ನೆಗಿಂತ ಇಳಿಕೆಯಲ್ಲಿ ಆರಂಭಗೊಂಡಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆಯಿಂದ ಚಿನ್ನ ಮಾತ್ರವಲ್ಲ, ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡಿದೆ. MCX ನಲ್ಲಿ ಇಂದು ಚಿನ್ನದ ಬೆಲೆ ಶೇಕಡಾ 0.29ರಷ್ಟು ಇಳಿಕೆಯೊಂದಿಗೆ ಮಾರುಕಟ್ಟೆ ಆರಂಭಗೊಂಡಿತು.

55
2 ಲಕ್ಷ ರೂಪಾಯಿ ವರೆಗೆ ಹೋಗಿದ್ದ ಬೆಳ್ಳಿಇದೀಗ ಇಳಿಕೆ

ಭಾರತದಲ್ಲಿ ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂಪಾಯಿ ವರೆಗೂ ಹೋಗಿತ್ತು. ಇಂದು ಬೆಳ್ಳಿ ಬೆಲೆ ಕೆಜಿಗೆ 1.5 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಹಂತ ಹಂತವಾಗಿ ಈ ಇಳಿಕೆಯಾಗಿದೆ.

Read more Photos on
click me!

Recommended Stories