50 ಲಕ್ಷ ನೀಡಿ ಬದುಕಿಗೆ ದಾರಿಯಾಗಿದ್ರಿ, ಋಣ ಯಾವತ್ತೂ ಮರೆಯಲ್ಲ: Bigg Boss ಹನುಮಂತು ಕಣ್ಣೀರು

Published : Jan 31, 2026, 11:36 AM IST

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ ಅವರು ಪದೇ ಪದೇ ನಡೆಯುತ್ತಿದ್ದ ಐಟಿ ದಾಳಿಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.  , ರಿಯಾಲಿಟಿ ಶೋಗಳ ಮೂಲಕ ಹಲವರಿಗೆ ನೆರವಾಗಿದ್ದ ಅವರ ನಿಧನಕ್ಕೆ ಗಾಯಕ ಹನುಮಂತ ಲಮಾಣಿ ಕಂಬನಿ ಮಿಡಿದಿದ್ದಾರೆ.

PREV
16
ಸಿ.ಜೆ ರಾಯ್ ಆಘಾತಕಾರಿ ಅಂತ್ಯ

ಪದೇ ಪದೇ ಐಟಿ ದಾಳಿ ಆಗುತ್ತಿದೆ ಎಂದು ಹೇಳುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ (CJ Roy death case) ಸಾವಿನ ಹಾದಿ ಹಿಡಿದಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿದ್ದ ಸಿ.ಜೆ. ರಾಯ್​ ಅವರ ಸಾವು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

26
ವಿಭಿನ್ನ ರೀತಿ ಚರ್ಚೆ

ಆತ್ಮ*ಹತ್ಯೆಯ ಹಾದಿ ತುಳಿಯುವಂಥ ಕೆಲಸ ಅವರು ಮಾಡಿದ್ಯಾಕೆ ಎನ್ನುವುದು ಕೆಲವರ ಪ್ರಶ್ನೆಯಾದರೆ, ಈ ರೀತಿ ಪದೇ ಪದೇ ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ಮತ್ತೆ ಕೆಲವರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಭಾರಿ ಆಘಾತಕಾರಿಯಾಗಿದೆ. ರಿಯಲ್ ಎಸ್ಟೇಟ್ ಜೊತೆ ಜೊತೆಗೆ ಹಾಸ್ಪಿಟಾಲಿಟಿ, ನಿರ್ಮಾಣ ಕ್ಷೇತ್ರ, ಶಿಕ್ಷಣ, ಸಿನಿಮಾ ಮೊದಲಾದ ವ್ಯವಹಾರಗಳಲ್ಲಿ ಉದ್ಯಮ ಸ್ಥಾಪಿಸಿ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದರು ಅವರು.

36
ರಿಯಾಲಿಟಿ ಷೋಗಳಿಗೆ ಸ್ಪಾನ್ಸರ್​

ಸಿ.ಜೆ. ರಾಯ್​ ಅವರು ಬಿಗ್​ಬಾಸ್​ ಸೀಸನ್​ 11ರ ವಿನ್ನರ್​ಗೆ 50 ಲಕ್ಷ ರೂಪಾಯಿ ಸ್ಪಾನ್ಸರ್ ಮಾಡಿದ್ದರು. ಹಲವು ಬಡವರಿಗೆ ನೆರವಾಗುತ್ತಿದ್ದರು. ಜೊತೆಗೆ ಕೆಲವು ರಿಯಾಲಿಟಿ ಷೋಗಳಿಗೂ ಇವರು ಪ್ರಾಯೋಜಕರಾಗಿದ್ದರು.

46
ಬಿಗ್​ಬಾಸ್​​ ವಿನ್ನರ್​ಗೆ ಹಣ

ಅದೇ ರೀತಿ ಬಿಗ್​ಬಾಸ್​ 11ರ ವಿಜೇತ ಹನುಮಂತ ಲಮಾಣಿ ಅವರಿಗೆ ಬಿಗ್​ಬಾಸ್​​ ಕಡೆಯಿಂದ ಬಂದ 50 ಲಕ್ಷ ರೂಪಾಯಿ ನೀಡಿದ್ದು ಸಿ.ಜೆ.ರಾಯ್​ ಅವರೇ. ಅಷ್ಟೇ ಅಲ್ಲದೇ ಸರಿಗಮಪ ರಿಯಾಲಿಟಿ ಷೋಗೆ ಕೂಡ ಇವರು ಪ್ರಾಯೋಜಕರಾಗಿದ್ದ ಹಿನ್ನೆಲೆಯಲ್ಲಿ, 12ರ ಸೀಸನ್​ನಲ್ಲಿ ರನ್ನರ್​ ಅಪ್​ ಆಗಿದ್ದ ಹನುಮಂತ ಅವರಿಗೆ ಇವರ ಕಡೆಯಿಂದಲೇ ದುಡ್ಡು ಸಿಕ್ಕಿತ್ತು.

56
ಹನುಮಂತ ಲಮಾಣಿ ದುಃಖ

ಇದೀಗ ಅವರ ಅಕಾಲಿಕ ನಿಧನದಿಂದ ಹನುಮಂತ ಲಮಾಣಿ ದುಃಖಿತರಾಗಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅತೀವ ದುಃಖ ತೋಡಿಕೊಂಡಿರುವ ಹನುಮಂತ ಅವರು, ​ಸಿ.ಜೆ.ರಾಯ್​ ಅವರಿಂದ ಪ್ರಶಸ್ತಿ ಹಾಗೂ ಚೆಕ್​ ಪಡೆಯುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ, ಕೈ ಮುಗಿಯುವ, ಬ್ರೋಕನ್ ಹಾರ್ಟ್ ಮತ್ತು ದುಃಖದ ಎಮೋಜಿ ಹಾಕಿಕೊಂಡು ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

66
ನೋವಿನ ಪೋಸ್ಟ್​

'ಇದು ತುಂಬಾ ದುಃಖಕರ ಸಂಗತಿ. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್-ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್ ಬಾಸ್ ಸೀಸನ್ 11ರಲ್ಲೂ ಕೂಡಾ ವಿಜೇತನಾದಾಗ ನನಗೆ ಪ್ರೀತಿಯಿಂದ ಹಣ ಕೊಡುವುದರ ಮೂಲಕ ನನ್ನ ಗೆಲುವನ್ನು ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವೇ ಇಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಮಿಸ್​ ಯು ರಾಯ್​ ಸರ್' ಎಂದು ಬರೆದುಕೊಂಡಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories