ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಯೋಜನೆಯೊಂದಿಗೆ ತಿಂಗಳಿಗೆ 20,000 ರೂ.ಗಿಂತ ಹೆಚ್ಚು ಗಳಿಸುವ ಅವಕಾಶವಿದೆ. ಕೇವಲ 5 ರಿಂದ 10 ಸಾವಿರ ರೂ. ಭದ್ರತಾ ಠೇವಣಿಯೊಂದಿಗೆ ನಿಮ್ಮ ಸ್ವಂತ ಅಂಚೆ ಕಚೇರಿಯನ್ನು ಆರಂಭಿಸಬಹುದು. ಇದು ಹೇಗೆ ಸಾಧ್ಯ? ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಪೋಸ್ಟ್ ಆಫೀಸ್ ಫ್ರಾಂಚೈಸಿ ಸ್ಕೀಮ್ 2.0 ಆರಂಭಿಸಿದೆ. ಇದರಡಿ, 5 ರಿಂದ 10 ಸಾವಿರ ರೂ. ಭದ್ರತಾ ಠೇವಣಿ ಇಟ್ಟು ಸ್ವಂತ ಅಂಚೆ ಕಚೇರಿ ತೆರೆದು, ತಿಂಗಳಿಗೆ 20 ಸಾವಿರಕ್ಕೂ ಹೆಚ್ಚು ಗಳಿಸಬಹುದು.
25
BSNL ಸಹಕಾರ
ಈ ಫ್ರಾಂಚೈಸಿ ಮೂಲಕ ಅಂಚೆ ಚೀಟಿ ಮಾರಾಟ, ಸ್ಪೀಡ್ ಪೋಸ್ಟ್ ಬುಕಿಂಗ್, ಇ-ಕಾಮರ್ಸ್ ಪಾರ್ಸೆಲ್ ಸೇವೆಗಳು, ಹಣಕಾಸು ಮತ್ತು ಪಾವತಿ ಸೇವೆಗಳನ್ನು ನೀಡಬಹುದು. BSNLನ ತಾಂತ್ರಿಕ ಸಹಕಾರದೊಂದಿಗೆ ಡಿಜಿಟಲ್ ಪಾವತಿಗಳನ್ನು ಸುಲಭವಾಗಿ ನಿರ್ವಹಿಸಬಹುದು.
35
ಎಲ್ಲಿ ಆರಂಭಿಸಬಹುದು? ವಿದ್ಯಾರ್ಹತೆ ಏನು?
ಗ್ರಾಮೀಣ, ನಗರ ಪ್ರದೇಶಗಳು, ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಆರಂಭಿಸಬಹುದು. 10ನೇ ಅಥವಾ 12ನೇ ತರಗತಿ ಪಾಸ್, ಕಂಪ್ಯೂಟರ್ ಜ್ಞಾನ, ಸ್ಥಳೀಯ ಭಾಷೆ ತಿಳಿದಿರಬೇಕು. 18 ವರ್ಷ ತುಂಬಿರಬೇಕು, ಗರಿಷ್ಠ ವಯೋಮಿತಿ ಇಲ್ಲ.
ಸ್ವಂತ ಸ್ಥಳ ಬೇಕಿಲ್ಲ, ಬಾಡಿಗೆ ಜಾಗದಲ್ಲೂ ಆರಂಭಿಸಬಹುದು. ಲ್ಯಾಪ್ಟಾಪ್, ಇಂಟರ್ನೆಟ್, ಪ್ರಿಂಟರ್ ಕಡ್ಡಾಯ. ಅರ್ಜಿ ಸಲ್ಲಿಸಲು, ಸ್ಥಳೀಯ ಅಂಚೆ ಕಚೇರಿಯಲ್ಲಿ ಫಾರ್ಮ್-ಎ ತುಂಬಿ ವಿಭಾಗೀಯ ಮುಖ್ಯಸ್ಥರಿಗೆ ಸಲ್ಲಿಸಬೇಕು. ಆಯ್ಕೆಯಾದವರಿಗೆ ತರಬೇತಿ ನೀಡಲಾಗುವುದು.
55
ತಿಂಗಳಿಗೆ ಕನಿಷ್ಠ 20 ಸಾವಿರ ರುಪಾಯಿ ಗಳಿಸಬಹುದು
ಈ ಫ್ರಾಂಚೈಸಿಯಿಂದ ತಿಂಗಳಿಗೆ ಕನಿಷ್ಠ 20 ಸಾವಿರ ರೂ. ಗಳಿಸಬಹುದು. ನೀವು ನೀಡುವ ಸೇವೆಗಳ ಮೇಲೆ 7% ರಿಂದ 25% ವರೆಗೆ ಕಮಿಷನ್ ಸಿಗುತ್ತದೆ. ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಲೆಟರ್ ಮತ್ತು ಮನಿ ಆರ್ಡರ್‌ಗಳಿಂದ ಉತ್ತಮ ಆದಾಯ ಗಳಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.