Published : May 20, 2025, 01:18 PM ISTUpdated : May 20, 2025, 01:47 PM IST
ಕೆಲವು ಕ್ರೆಡಿಟ್ ಕಾರ್ಡ್‌ಗಳು ದೀರ್ಘಾವಧಿಯವರೆಗೆ ವಿಶೇಷ ಕೊಡುಗೆಗಳು ಅಥವಾ ರಿಯಾಯಿತಿಗಳನ್ನು ನೀಡುತ್ತವೆ. ಉದಾಹರಣೆಗೆ, ಚಲನಚಿತ್ರ ಟಿಕೆಟ್‌ಗಳು ಅಥವಾ ಹೋಟೆಲ್ ಬುಕಿಂಗ್‌ಗಳ ಮೇಲೆ ನಿರಂತರವಾಗಿ ಉತ್ತಮ ರಿಯಾಯಿತಿ ಲಭ್ಯ.
ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಸಾಮಾನ್ಯವಾಗಿದೆ. ಅನೇಕ ಜನರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಏನಾದರೂ ಖರಿದೀಸಬೇಕೆಂದರೆ ನಮ್ಮ ಬಳಿ ತಕ್ಷಣ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಕ್ರೆಡಿಟ್ ಕಾರ್ಡ್‌ಗಳು ಸಹಾಯ ಮಾಡುತ್ತವೆ ಎಂಬುದು ನಿಜ. ಆದರೆ ಮುಂದಿನ ತಿಂಗಳು ನಾವು ಖರ್ಚು ಮಾಡಿದ ಹಣಕ್ಕೆ ಹಣ ಪಾವತಿಸಬೇಕಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಹಲವು ಬಾರಿ, ಕ್ರೆಡಿಟ್ ಕಾರ್ಡ್‌ಗಳ ಅತಿಯಾದ ಬಳಕೆಯು ಜನರನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ, ಅಲ್ಲಿ ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದರೆ ಭಾರಿ ಬಡ್ಡಿ ಮತ್ತು 24% ವರೆಗೆ ದಂಡ ವಿಧಿಸಬಹುದು. ಇಂದು ನಾವು ಈ ವಿಷಯದ ಕುರಿತು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದುವುದರಿಂದಾಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.
26
ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದರೆ
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಸುಮಾರು 45 ದಿನಗಳ ಬಡ್ಡಿರಹಿತ ಕ್ರೆಡಿಟ್ ಸೈಕಲ್ ಅನ್ನು ಹೊಂದಿರುತ್ತದೆ. ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನೀವು ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು. ಒಂದು ಕ್ರೆಡಿಟ್ ಕಾರ್ಡ್‌ನ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ನೀವು ಕ್ರೆಡಿಟ್ ಸೈಕಲ್ ಅನ್ನು ಸುಮಾರು 45 ದಿನಗಳವರೆಗೆ ವಿಸ್ತರಿಸಬಹುದು. ಇದನ್ನು ಕ್ರೆಡಿಟ್ ರೋಲ್‌ಓವರ್ ಎಂದು ಕರೆಯಲಾಗುತ್ತದೆ.
36
ರಿವಾರ್ಡ್ ಪಾಯಿಂಟ್ಸ್, ಕ್ಯಾಶ್‌ಬ್ಯಾಕ್
ವಿವಿಧ ಬ್ಯಾಂಕ್‌ಗಳಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವುದು ನಿಮಗೆ ವಿವಿಧ ರೀತಿಯ ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಇದು ನೀವೇನಾದರೂ ಖರೀದಿಸುವಾಗ ಸೇವ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಕೆಲವು ಕ್ರೆಡಿಟ್ ಕಾರ್ಡ್‌ಗಳು ದೀರ್ಘಾವಧಿಯವರೆಗೆ ವಿಶೇಷ ಕೊಡುಗೆಗಳು ಅಥವಾ ರಿಯಾಯಿತಿಗಳನ್ನು ನೀಡುತ್ತವೆ. ಉದಾಹರಣೆಗೆ, ಕೆಲವು ಕಾರ್ಡ್‌ಗಳು ಚಲನಚಿತ್ರ ಟಿಕೆಟ್‌ಗಳು ಅಥವಾ ಹೋಟೆಲ್ ಬುಕಿಂಗ್‌ಗಳ ಮೇಲೆ ನಿರಂತರವಾಗಿ ಉತ್ತಮ ರಿಯಾಯಿತಿಗಳನ್ನು ನೀಡುತ್ತವೆ. ನೀವು ಆಗಾಗ್ಗೆ ಪ್ರಯಾಣಿಸುತ್ತಿದ್ದರೆ ಅಥವಾ ಚಲನಚಿತ್ರಗಳನ್ನು ನೋಡುತ್ತಿದ್ದರೆ, ಅಂತಹ ಕಾರ್ಡ್‌ಗಳು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
56
ಬಹು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಅನಾನುಕೂಲಗಳು
ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಆ ಎಲ್ಲಾ ಕಾರ್ಡ್‌ಗಳಿಗೆ ನೀವು ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗಬಹುದು. ಆದ್ದರಿಂದ, ಕಾರ್ಡ್‌ಗಳಿಂದ ನೀವು ಪಡೆಯುವ ಪ್ರಯೋಜನಗಳು ಅವುಗಳ ವಾರ್ಷಿಕ ಶುಲ್ಕಗಳಿಗಿಂತ ಕಡಿಮೆಯಿದೆಯೇ ಎಂದು ನೀವು ಲೆಕ್ಕಾಚಾರ ಮಾಡುವುದು ಬಹಳ ಮುಖ್ಯ.
66
ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಹೆಚ್ಚು
ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವುದು ನಿಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಹೆಚ್ಚಿನ ಕಾರ್ಡ್‌ಗಳನ್ನು ಹೊಂದಿರುವುದು ನಿಮ್ಮ ಒಟ್ಟು ಕ್ರೆಡಿಟ್ ಮಿತಿಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನೀವು ವಿಭಿನ್ನ ಪಾವತಿ ದಿನಾಂಕಗಳು ಮತ್ತು ಕ್ರೆಡಿಟ್ ಸೈಕಲ್ ಅನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ. ನಿಮ್ಮಲ್ಲಿ ಮೂರು ಅಥವಾ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳಿದ್ದರೆ, ಬಿಲ್ ಪಾವತಿಸಲು ಮರೆಯುವ ಸಾಧ್ಯತೆ ಹೆಚ್ಚಾಗುತ್ತದೆ.