ಹಣ ಉಳಿಸಲು ನೆರವಾಗುವ 7 ಉತ್ತಮ ಹೂಡಿಕೆ ತಂತ್ರಗಳು

Published : May 20, 2025, 12:52 PM IST

Money Saving Strategies: ಹಣ ಉಳಿತಾಯ ಮಾಡಲು ಮತ್ತು ಆದಾಯ ತೆರಿಗೆಯಲ್ಲಿ ಹಣ ಉಳಿಸಲು ಕೆಲವು ಅತ್ಯುತ್ತಮ ಹೂಡಿಕೆ ತಂತ್ರಗಳಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಜೊತೆಗೆ ತೆರಿಗೆ ವಿನಾಯಿತಿಯೂ ಪಡೆಯಬಹುದು.

PREV
19
ಹಣ ಉಳಿಸಲು ನೆರವಾಗುವ 7 ಉತ್ತಮ ಹೂಡಿಕೆ ತಂತ್ರಗಳು

ಹಣ ಉಳಿತಾಯ ಬಹಳ ಅಗತ್ಯ. ಹಾಗಂತ ದುಡಿದಿದ್ದೆಲ್ಲಾ ಉಳಿತಾಯ ಮಾಡಬೇಕು ಅಂತೇನಿಲ್ಲ. ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಎತ್ತಿಟ್ಟರೆ ಸಾಕು. ಹಾಗೆ ಉಳಿತಾಯ ಮಾಡುವುದಕ್ಕೆಂದೇ ಕೆಲವು ಅತ್ಯುತ್ತಮ ಹೂಡಿಕೆ ತಂತ್ರಗಳಿವೆ. ಇಲ್ಲಿ ಹೂಡಿಕೆ ಮಾಡಿದರೆ ಉಳಿತಾಯದ ಜೊತೆಗೆ ಆದಾಯ ತೆರಿಗೆಯಲ್ಲಿಯೂ ಹಣ ಉಳಿಸಬಹುದಾಗಿದೆ.

29

ಈ ಬಹುತೇಕ ಯೋಜನೆಗಳಲ್ಲಿ ಲಾಕ್- ಇನ್ ಪೀರಿಯಡ್‌ ಇರುತ್ತವೆ. ಅಷ್ಟು ವರ್ಷಗಳ ಕಾಲ ಆ ದುಡ್ಡನ್ನು ತೆಗೆಯುವಂತಿಲ್ಲ. ಹಾಗಾಗಿ ಕೆಲವು ವರ್ಷಗಳ ಬಳಿಕ ದೊಡ್ಡ ಮೊತ್ತ ದೊರೆಯುತ್ತದೆ. ಹೀಗೆ ಆರ್ಥಿಕವಾಗಿ ನೆರವಾಗುವ 7 ಹೂಡಿಕೆ ಆಯ್ಕೆಗಳು ಇಲ್ಲಿವೆ

39

1. ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್‌ಎಎಸ್‌ಎಸ್‌)

ಈ ಯೋಜನೆಗಳಲ್ಲಿ ಹಣ ಹೂಡಿದರೆ ದೀರ್ಘಾವಧಿಯಲ್ಲಿ ಶೇ.15ಕ್ಕಿಂತ ಹೆಚ್ಚಿನ ರಿಟರ್ನ್ಸ್ ಬರಬಹುದಾಗಿದೆ. ಆದರೆ ಇದಕ್ಕೆ 3 ವರ್ಷದ ಲಾಕ್ ಇನ್ ಪೀರಿಯಡ್ ಇರುತ್ತದೆ. ತೆರಿಗೆ ಉಳಿತಾಯ ಮತ್ತು ಸಂಪತ್ತು ಗಳಿಕೆ ಉದ್ದೇಶ ಹೊಂದಿರುವವರಿಗೆ ಇಎಲ್‌ಎಸ್‌ಎಸ್‌ ಮ್ಯೂಚುವಲ್ ಫಂಡ್‌ಗಳು ಉತ್ತಮ. ಮಾರುಕಟ್ಟೆ ಆಧಾರಿತ ಹೂಡಿಕೆಯಾದ್ದರಿಂದ ಕೊಂಚ ರಿಸ್ಕ್‌ ಇರುತ್ತದೆ.

49

2. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ವಾರ್ಷಿಕ ಶೇ.7.1ರಷ್ಟು ರಿಟರ್ನ್ಸ್ ದೊರೆಯಬಹುದಾಗಿದೆ. ಇದರ ಲಾಕ್ ಇನ್ ಪೀರಿಯಡ್‌ 15 ವರ್ಷಗಳು. ಸರ್ಕಾರದ ಬೆಂಬಲವಿರುವ ಈ ಯೋಜನೆ ಸುರಕ್ಷಿತ ಹೂಡಿಕೆಯಾಗಿದೆ. ಇದರ ಬಡ್ಡಿ ಮತ್ತು ಮೆಚ್ಯುರಿಟಿ ಮೊತ್ತ ತೆರಿಗೆ- ಮುಕ್ತವಾಗಿದೆ.

59

3. ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್‌)

ನಿವೃತ್ತಿಯವರೆಗೆ ಇದರ ಹಣ ತೆಗೆಯುವಂತಿಲ್ಲ. ಇದರಲ್ಲಿ ಶೇ.9 – ಶೇ.12 ಗಳಿಕೆ ಪಡೆಯಬಹುದಾಗಿದೆ. ಅಲ್ಲದೇ ಇದಕ್ಕೆ ತೆರಿಗೆ ವಿನಾಯಿತಿಯೂ ಲಭ್ಯವಿದ್ದು, ನಿವೃತ್ತಿ ಯೋಜನೆ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆ.

69

4. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

ಹೆಣ್ಣು ಮಗು ಜನಿಸಿದ ಪೋಷಕರು ಈ ಯೋಜನೆಯಲ್ಲಿ ದುಡ್ಡು ಹೂಡಬಹುದು. ವಾರ್ಷಿಕವಾಗಿ ಶೇ.7.6 ಗಳಿಕೆ ಇರುತ್ತದೆ. ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಮದುವೆ ಉದ್ದೇಶದಿಂದ ಇಲ್ಲಿ ದುಡ್ಡು ಹೂಡಬಹುದು. ಇದರ ಲಾಕ್ ಇನ್ ಪೀರಿಯಡ್‌ 21 ವರ್ಷಗಳು ಅಥವಾ ಆ ಮಗುವಿನ ವಿವಾಹದವರೆಗೆ.

79

5. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್‌ಎಸ್‌ಸಿ)

ಸಣ್ಣ ಮತ್ತು ಮಧ್ಯಮ ವರ್ಗದ ಹೂಡಿಕೆದಾರರಿಗೆ ಇದು ಅತ್ಯಂತ ಸುರಕ್ಷಿತ ಆಯ್ಕೆ. ಇದರಿಂದ ವಾರ್ಷಿಕವಾಗಿ ಶೇ.6.8ರಷ್ಟು ಗಳಿಕೆ ಪಡೆಯಬಹುದಾಗಿದೆ. ಲಾಕ್- ಇನ್ ಪೀರಿಯಡ್ 5 ವರ್ಷ.

89

6. ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್‌ಸಿಎಸ್‌ಎಸ್‌)

ಹಿರಿಯ ನಾಗರಿಕರಿಗಾಗಿಯೇ ಇರುವ ಉತ್ತಮ ಯೋಜನೆ. ಇದರಲ್ಲಿ ವಾರ್ಷಿಕವಾಗಿ ಶೇ.7.4ರಷ್ಟು ಗಳಿಕೆ ಪಡೆಯಬಹುದು. 5 ವರ್ಷ ಲಾಕ್ ಇನ್ ಪೀರಿಯಡ್‌ ಇರುತ್ತದೆ. ಬೇಕಿದ್ದರೆ 3 ವರ್ಷಗಳವರೆಗೆ ವಿಸ್ತರಿಸಬಹುದು.

99
Savings Bank Account

7. 5-ವರ್ಷದ ತೆರಿಗೆ ಉಳಿತಾಯ ಬ್ಯಾಂಕ್ ಫಿಕ್ಸೆಡ್‌ ಡಿಪಾಸಿಟ್‌

ಐದು ವರ್ಷ ಫಿಕ್ಸ್‌ಡ್‌ ಡಿಪಾಸಿಟ್‌ ಇಟ್ಟರೆ ಮಧ್ಯೆ ತೆಗೆಯುವಂತಿಲ್ಲ. ಇದಕ್ಕೆ ಶೇ.5.5 – ಶೇ.7.75ರಷ್ಟಿ ಗಳಿಕೆ ದೊರೆಯಬಹುದು. ಇದರಲ್ಲಿ ಸ್ಥಿರ ಆದಾಯ ದೊರೆಯುತ್ತದೆ ಮತ್ತು ರಿಸ್ಕ್ ಕಡಿಮೆ ಇರುತ್ತದೆ.

Read more Photos on
click me!

Recommended Stories