ಕಂಟೆಂಟ್ ಕ್ರಿಯೇಟರ್ಸ್ ಇಲ್ನೋಡಿ; ಯುಟ್ಯೂಬ್ ಗಳಿಕೆ ಹೆಚ್ಚಿಸುವ ಸರಳ ಮಾರ್ಗಗಳು

Published : Sep 25, 2025, 12:06 PM IST

youtube affiliate marketing ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಆದಾಯವನ್ನು ಹಲವು ವಿಧಗಳಲ್ಲಿ ಹೆಚ್ಚಿಸಿಕೊಳ್ಳಬಹುದು. ಜಾಹೀರಾತುಗಳ ಜೊತೆಗೆ, ಚಾನೆಲ್ ಮೆಂಬರ್‌ಶಿಪ್, ಸ್ಪಾನ್ಸರ್ ಕಂಟೆಂಟ್ ಮತ್ತು ವಿಶೇಷ ಲಿಂಕ್‌ಗಳ ಮೂಲಕ ಹಣ ಗಳಿಸುವ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

PREV
16
ಯುಟ್ಯುಬ್ ಕಂಟೆಂಟ್ ಕ್ರಿಯೇಟರ್ಸ್

ಇತ್ತೀಚಿನ ದಿನಗಳಲ್ಲಿ ಜನರು ಯುಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅದ್ರೆ ಕೆಲವರು ಮಾತ್ರ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಸಬ್‌ಸ್ಕ್ರೈಬರ್ ಪಡೆದುಕೊಂಡು, ಉತ್ತಮ ಆದಾಯ ತಮ್ಮದಾಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಬಹುತೇಕರು ಎಷ್ಟೇ ವಿಡಿಯೋ ಅಪ್ಲೋಡ್ ಮಾಡಿದರೂ ನಿರೀಕ್ಷಿದಷ್ಟು ಆದಾಯ ಸಿಗಲ್ಲ.

26
ಆದಾಯ ಹೆಚ್ಚಳದ ಸಲಹೆಗಳು

ಯುಟ್ಯೂಬ್ ಪ್ಲಾಟ್‌ಫಾರಂ ಒಳ್ಳೆಯ ಕಂಟೆಂಟ್‌ಗೆ ಉತ್ತಮವಾಗಿ ಪಾವತಿಸುತ್ತದೆ. ಈ ಲೇಖನದಲ್ಲಿ YouTube ಗಳಿಕೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಮಾಹಿತಿ ಇಲ್ಲಿದೆ. ಈ ಸಲಹೆಗಳು ನಿಮ್ಮ ಆದಾಯದ ಹೆಚ್ಚಳಕ್ಕೆ ಕಾರಣವಾಗಬಹುದು.

36
ಯುಟ್ಯೂಬ್ ಆದಾಯದ ಮಾರ್ಗಗಳು

ಕೆಂಟೆಂಟ್‌ ಕ್ರಿಯೇಟರ್‌ಗಳು ತಮ್ಮ ವಿಡಿಯೋದ ಮಧ್ಯೆದಲ್ಲಿ ಜಾಹೀರಾತುಗಳನ್ನು ಸೇರಿಸಿ ಹಣ ಮಾಡಿಕೊಳ್ಳಬಬಹುದು. ಈ ಜಾಹೀರಾತುಗಳ ಜೊತೆಯಲ್ಲಿ YouTube ಪ್ರೀಮಿಯಂ ಚಂದಾದಾರಿಕೆ ಶುಲ್ಕ, ಚಾನೆಲ್ ಮೆಂಬರ್‌ಶಿಪ್ ಸೇರಿದಂತೆ ಹಲವು ಮಾರ್ಗಗಳ ಮೂಲಕ ಆದಾಯದ ದಾರಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಆಯ್ಕೆಯ ಲಾಭ ಸಿಗಬೇಕಾದ್ರೆ ನೀವು ಚಾನೆಲ್‌ನಲ್ಲಿ ಕನಿಷ್ಠ 500 ಚಂದಾದಾರ (Subscriber) ಮತ್ತು 3 ಸಾರ್ವಜನಿಕ ಪಬ್ಲಿಕ್ ವ್ಯೂವ್ ಪಡೆದಿರಬೇಕಾಗುತ್ತದೆ.

46
ಚಾನೆಲ್ ಮೆಂಬರ್‌ಶಿಪ್

ಈ ಕನಿಷ್ಠ ಅರ್ಹತೆಗಳನ್ನು ನೀವು ಹೊಂದಿದ್ದರೆ ಯುಟ್ಯೂಬ್ ನಿಮ್ಮ ಚಾನೆಲ್‌ಗೆ Subscriber ಆಗಲು ಅವಕಾಶ ನೀಡುತ್ತದೆ. ನಿರ್ದಿಷ್ಟ ಹಣ ನೀಡಿ ನಿಮ್ಮ ವೀಕ್ಷಕರು Subscription ಪಡೆಯುತ್ತರೆ. Subscription ಪಡೆದ ವೀಕ್ಷಕರಿಗೆ ಲೈವ್ ಚಾಟ್‌ನಂತಹ ಆಯ್ಕೆಗಳು ಸಿಗುತ್ತವೆ.

56
ಸ್ಪಾನ್ಸರ್ ವಿಷಯದ ಕುರಿತು ಕಂಟೆಂಟ್ ಕ್ರಿಯೇಟ್

ನಿಮ್ಮ ವಿಡಿಯೋಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದರೆ, ಸ್ಪಾನ್ಸರ್ ವಿಷಯದ ಕುರಿತು ಕಂಟೆಂಟ್ ಕ್ರಿಯೇಟ್ ಮಾಡಿ ಹಣ ಗಳಿಸಬಹುದಾಗಿದೆ. ನಿಮ್ಮ ವಿಡಿಯೋಗಳ ಸರಾಸರಿ ವ್ಯೂವ್ ಆಧಾರದ ಮೇಲೆ ಸ್ಪಾನ್ಸರ್ ಕಂಪನಿಗಳು ಹಣ ಪಾವತಿಸುತ್ತದೆ. ನೀವೇ ಮಾರ್ಕೆಟಿಂಗ್ ಕಂಪನಿಗಳನ್ನು ಸಂಪರ್ಕಿಸಿ ಅವಕಾಶಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Phonepe, Gpay, Paytm ನಿಂದ ಈ ರೀತಿ ಹಣ ಟ್ರಾನ್ಸ್​ಫರ್​ ಮಾಡೋರಿಗೆ ಶಾಕ್​! RBI ಹೊಸ ರೂಲ್ಸ್​ ನೋಡಿ

66
ಜಾಹೀರಾತು

ಕಂಪನಿಗಳನ್ನು ಜಾಹೀರಾತು ಮಾಡುವ ವಿಡಿಯೋ ರಚಿಸುವುದು. ನಿಮ್ಮ ವಿಡಿಯೋ ಅಥವಾ ನೀವು ಹಾಕಿರುವ ಲಿಂಕ್ ಮೂಲಕ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಅನುಗುಣವಾಗಿ ಹಣ ಸಿಗುತ್ತದೆ. ಗ್ರಾಹಕರ ಸಂಖ್ಯೆ ಆಧಾರದ ಮೇಲೆ ಕಂಪನಿಗಳು ಹಣ ಪಾವತಿಸುತ್ತವೆ.ಕಂಪನಿಗಳು ನಿಮಗೆ ಸಹಾಯ ಮಾಡಲು ವಿಶೇಷ ಲಿಂಕ್‌ಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: ದುಪ್ಪಟ್ಟಾಯ್ತು ಚಿನ್ನಾಭರಣ ಪ್ರಿಯರ ಖುಷಿ; ಚಿನ್ನದ ಬೆಲೆಯಲ್ಲಿ 9,300 ರೂ. ಇಳಿಕೆ

Read more Photos on
click me!

Recommended Stories